Stray Dog; ಬಸಾಪುರದಲ್ಲಿ 201 ಬೀದಿ ನಾಯಿಗಳ ಹಾವಳಿ, ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದೇ ಪಾಲಿಕೆ?

ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ, ಆ.22: ದಾವಣಗೆರೆ ಮಹಾನಗರ ಪಾಲಿಕೆಯ 21ನೇ ವಾರ್ಡ್ ನ ಬಸಾಪುರದಲ್ಲಿ ಸುಮಾರು 4000 ಜನಸಂಖ್ಯೆ ಇದೆ. ಇಲ್ಲಿ 201ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು(Stray Dog), ಇವುಗಳ ಹಾವಳಿಯಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಹೋಗುವ ಸವಾರರ ಮೇಲೆ ನಾಯಿಗಳು (dog) ನಡೆಸುವ ದಾಳಿಯಿಂದ ಪ್ರತಿದಿನ ಸರತಿ ಸಾಲಿನಂತೆ ಕೆಳಗೆ ಬಿದ್ದು ಆಸ್ಪತ್ರೆ ಕಡೆ ಧಾವಿಸುವುದು ಸಾಮಾನ್ಯವಾಗಿದೆ.

ಚಿಕ್ಕ ಮಕ್ಕಳು, ಮಹಿಳೆಯರು, ವಯೋವೃದ್ಧರು ಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದು, ದೂರದ ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಚಿಕ್ಕ ಮಕ್ಕಳು ಜೀವ ಕಳೆದುಕೊಂಡಂತಹ ಪರಿಸ್ಥಿತಿ, ನಮ್ಮ ಗ್ರಾಮದಲ್ಲಿ ಬಂದ ನಂತರವೇ ಪಾಲಿಕೆ ಎಚ್ಚೆತ್ತುಕೊಳ್ಳಬಹುದೇ???? ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

gold; ಸಿಕೆಸಿ ಗ್ರೂಪ್ ಆಫ್ ಜ್ಯುವೆಲರ್ಸ್ ನಿಂದ ಆಭರಣ ಪ್ರದರ್ಶನ, ಮಾರಾಟ

ಇದು ಕೇವಲ ಒಂದು ವಾರ್ಡಿನ, ಒಂದು ಪ್ರದೇಶದ ಸಮಸ್ಯೆಯಲ್ಲ. ದಾವಣಗೆರೆ ನಗರದ ತುಂಬೆಲ್ಲ ಬೀದಿ ನಾಯಿಗಳದ್ದೇ ಸಾಮ್ರಾಜ್ಯವಾಗಿದ್ದು, ಪಾಲಿಕೆ ಇದಕ್ಕೆ ಸೂಕ್ತ ರೀತಿಯ ವ್ಯವಸ್ಥೆ ಅಂದರೆ ಬೀದಿ ನಾಯಿಗಳನ್ನು ಬೇರೆ ಕಡೆ ಸ್ಥಳಾಂತರಿಸುವ ಮೂಲಕ ಸಾರ್ವಜನಿಕರ ಜೀವಕ್ಕೆ ಬೆಲೆ ನೀಡಲಿ ಎಂಬುದೇ ಆರು ಲಕ್ಷಕ್ಕೂ ಹೆಚ್ಚು ದಾವಣಗೆರೆ ನಗರದ ಸಾರ್ವಜನಿಕರ ಬಯಕೆಯಾಗಿದೆ.

Leave a Reply

Your email address will not be published. Required fields are marked *

error: Content is protected !!