isro; ಇಂದು ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಚಂದ್ರನ ಸ್ಪರ್ಶ; ವಿಶೇಷ ಪೂಜೆ
ದಾವಣಗೆರೆ, ಆ. 23: ಇಸ್ರೋದ (isro) ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ (vikarm lander) ಆ. 23 ರ ಸಂಜೆ ಚಂದ್ರನ ಕಕ್ಷೆ ಮೇಲೆ ಪಾದಾರ್ಪಣೆ ಮಾಡುತ್ತಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ವಿಶೇಷ ಪೂಜೆ ನೆರವೇರಿಸಲಾಯಿತು.
ಇಲ್ಲಿನ ವಿನೋಭನಗರದ 2ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ದಾವಣಗೆರೆ ತಾಲೂಕು ಫೋಟೋ ಮತ್ತು ವೀಡಿಯೋಗ್ರಾರ‍್ಸ್ ಸಂಘ, ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ , ರವಿಚಂದ್ರನ್ ಅಭಿಮಾನಿಗಳ ಸಂಘ, ಕನ್ನಡ ಸಮರ ಸೇನೆ ಸಹಯೋಗದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
application; ವಿವಿಧ ಸೇವೆಗಳ ನೀಡುತ್ತಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷ ಬಿ ಮಂಜುನಾಥ್, ತಾಲೂಕು ಅಧ್ಯಕ್ಷ ಎಂ.ಮನು, ಗ್ರಾಮಾಂತರ ವಲಯ ಅಧ್ಯಕ್ಷ ಕೊಂಡಜ್ಜಿ ಎಸ್. ರಾಜಶೇಖರ್, ಉಪಾಧ್ಯಕ್ಷ ಎಸ್ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಎಚ್ ಪಾಟೀಲ್, ಖಜಾಂಚಿ ಎ ಎಸ್ ಗಣೇಶ್, ಗೌರವ ಸಲಹೆಗಾರರಾದ ಸಂತೋಷ ದೊಡ್ಡಮನಿ, ಜಿ ಮಾಲಿಂಗಪ್ಪ , ಕನ್ನಡ ಸಮರಸೇನೆ ಮಹಿಳಾ ರಾಜ್ಯಾಧ್ಯಕ್ಷ ದ್ರಾಕ್ಷಣಮ್ಮ ಮಲ್ಲಿಕಾರ್ಜುನಯ್ಯ ಕೋಟ್ಯಾಳ ಸಿದ್ದೇಶ್ ರಾಜೇಶ್ವರಿ, ಕವಿತಾ ಚಂದ್ರಶೇಖರ್ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರವಣ್ ಕುಮಾರ್ , ಹುಲಿಕಟ್ಟೆ ರಾಜೇಶ್ , ರವಿ,ತಾಲೂಕು ಸಂಘದ ಸಹ ಕಾರ್ಯದರ್ಶಿ ಡಿ ರಂಗನಾಥ್ , ಜಂಟಿ ಕಾರ್ಯದರ್ಶಿ ದೇವೇಂದ್ರಪ್ಪ ಕುಮಾರ್ ಉಪಸ್ಥಿತರಿದ್ದು ಚಂದ್ರಯಾನ ಯಶಸ್ಸಿಗೆ ಶುಭ ಹಾರೈಸಿದರು