Dysp Transfer: ರಾಜ್ಯದ 21 ಡಿವೈಎಸ್ ಪಿ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಆ.23: ರಾಜ್ಯದ ವಿವಿಧ ಪೊಲೀಸ್ ಠಾಣೆಯ  ಡಿವೈಎಸ್ಪಿಗಳನ್ನು ವರ್ಗಾವಣೆ (Dysp Transfer) ಮಾಡಲಾಗಿದೆ. 21 ಜನ ಡಿವೈಎಸ್ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಕೆಳಕಂಡಂತೆ ಇದೆ.

1. ತುಮಕೂರು ಗ್ರಾಮಾಂತರ (ಶಿರಾ) ಉಪವಿಭಾಗ ತುಮಕೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನವೀನ ಕುಮಾರ್ ಎಲ್ ಅವರನ್ನು ದೇವನಹಳ್ಳಿ ಉಪ ವಿಭಾಗ ಬೆಂಗಳೂರು ನಗರಕ್ಕೆ ವರ್ಗಾಯಿಸಲಾಗಿದೆ.

protest; ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

2. ಪ್ರಕಾಶ್ ರಾಥೋಡ್ ಸಿಐಡಿ ಇಂದ ಕೆ ಜಿ ಹಳ್ಳಿ ಉಪ ವಿಭಾಗ ಬೆಂಗಳೂರು (bangalore) ನಗರಕ್ಕೆ ವರ್ಗಾಯಿಸಲಾಗಿದೆ.

3. ಬೆಂಗಳೂರು ಜಿಲ್ಲೆಯ ಆನೇಕಲ್ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀ ನಾರಾಯಣ ಎ ವಿ ಅವರನ್ನು ಆಡುಗೋಡಿ ಸಂಚಾರ ಉಪ ವಿಭಾಗ ಬೆಂಗಳೂರು ನಗರಕ್ಕೆ ವರ್ಗಾಯಿಸಲಾಗಿದೆ.

4. ಆಡುಗೋಡಿ ಸಂಚಾರ ಉಪ ವಿಭಾಗ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಶಂಕರ ರೆಡ್ಡಿ ಬಿ ಇವರನ್ನು ಮೈಕೋಲೇಔಟ್ ಉಪ ವಭಾಗ ಬೆಂಗಳೂರು ನಗರಕ್ಕೆ ವರ್ಗಾವಣೆ ಮಾಡಲಾಗಿದೆ.

5. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಮಂಜುನಾಥ್ ಟಿ ಅವರನ್ನು ಹೊಸಪೇಟೆ ಉಪ ವಿಭಾಗ ವಿಜಯನಗರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

6. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಪ್ರೊ. ಡಿವೈಎಸ್ಪಿ ಪ್ರಭಾವತಿ ಪಾಂಡುರಂಗ ಅವರನ್ನು ಸಿ ಉಪವಿಭಾಗ (ಸಬ್ ಅರ್ಬನ್) ಕಲಬುರಗಿ ನಗರಕ್ಕೆ ವರ್ಗಾವಣೆ ಮಾಡಲಾಗಿದೆ.

7.ಇಂಡಿ ಉಪ ವಿಭಾಗ ವಿಜಯಪುರ ಜಿಲ್ಲೆಯಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಚಂದ್ರಕಾಂತ್ ನಂದ ರೆಡ್ಡಿ ಅವರನ್ನು ನರಗುಂದ ಉಪ ವಿಭಾಗ ಗದಗ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

8. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಜಗದೀಶ್ ಹೆಚ್ ಎಸ್ ಅವರನ್ನು ಇಂಡಿ ಉಪ ವಿಭಾಗ ವಿಜಯಪುರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

9.ಡಿಸಿಆರ್ ಇ, ಮೈಸೂರಿನಿಂದ ಶೈಲೇಂದ್ರ ಹೆಚ್ ಎಮ್ ಅವರನ್ನು ಚಿಕ್ಕಮಗಳೂರು ಉಪ ವಿಭಾಗ ಚಿಕ್ಕಮಗಳೂರು  ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

application; ವಿವಿಧ ಸೇವೆಗಳ ನೀಡುತ್ತಿರುವ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ

10. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಗೋಪಾಲಕೃಷ್ಣ ಬಿ ಗೌಡರ್ ರವರನ್ನು ಚಿಕ್ಕೋಡಿ ಉಪ ವಿಭಾಗ ಬೆಳಗಾವಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

11. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಸೈಯದ್ ರೋಷನ್ ಜಮೀರ್. ಎಸ್ ಹರಪನಹಳ್ಳಿ ಉಪ ವಿಭಾಗ ವಿಜಯನಗರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

12. ಬಾಗಲಕೋಟೆ ಉಪ ವಿಭಾಗ ಬಾಗಲಕೋಟೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಶಾಂತ್ ಜಿ ಮುನೋಳ್ಳಿ ಹುನಗುಂದ ಉಪ ವಿಭಾಗ ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

13. ಮೈಕೋಲೇಔಟ್ ಉಪ ವಭಾಗ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರತಾಪ್ ರೆಡ್ಡಿ ಎನ್ ರಾಜ್ಯ ಗುಪ್ತ ವಾರ್ತೆಗೆ  ವರ್ಗಾವಣೆ ಮಾಡಲಾಗಿದೆ.

14. ಸಿ ಉಪವಿಭಾಗ(ಸಬ್ ಅರ್ಬನ್) ಕಲಬುರಗಿ ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗೀತಾ ಬೇನಾಹಾಳ್ ಸಿಐಡಿಯಾಗಿ ವರ್ಗಾವಣೆ ಮಾಡಲಾಗಿದೆ.

15.ನರಗುಂದ ಉಪ ವಿಭಾಗ ಗದಗ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈ ಎಸ್ ಈಗನ ಗೌಡರ್  ಸಿಐಡಿಯಾಗಿ ವರ್ಗಾವಣೆ ಮಾಡಲಾಗಿದೆ.

16. ಚಿಕ್ಕಮಗಳೂರು ಉಪ ವಿಭಾಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪುರುಷೋತ್ತಮ್ ಎನ್ ಅವರನ್ನು ಸಿಐಡಿಯಾಗಿ ವರ್ಗಾವಣೆ ಮಾಡಲಾಗಿದೆ.

17. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಶಿವಕುಮಾರ್ ಎಂ ಸಿ ಔ ಅವರನ್ನು ಸಿಐಡಿಯಾಗಿ ವರ್ಗಾವಣೆ ಮಾಡಲಾಗಿದೆ.

police; ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ; ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕೆ. ವರ್ಗಾವಣೆ

18. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಜಯ ಶಂಕರ್ ಟಿ ಆರ್ ಅವರನ್ನು ಸಿಐಡಿಯಾಗಿ ವರ್ಗಾವಣೆ ಮಾಡಲಾಗಿದೆ.

19. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಸುಧಾ ಆದಿ ಸಿಸಿಆರ್ ಬಿ ಕಲಬುರಗಿ ನಗರಕ್ಕೆ ವರ್ಗಾವಣೆ ಮಾಡಲಾಗಿದೆ.

20. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ರಾಜೇಂದ್ರ ಗೌಡ ಕೆ ಪಾಟೀಲ್ ಅವರನ್ನು ಸಿಸಿಆರ್ ಬಿ ಹುಬ್ಬಳ್ಳಿ-ಧಾರವಾಡ ನಗರಕ್ಕೆ ವರ್ಗಾವಣೆ ಮಾಡಲಾಗಿದೆ.

21. ಪ್ರಧಾನ ಕಛೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ನೇಮಿರಾಜು ಅವರನ್ನು ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಮಾಡಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!