Chandrayana-3; ಚಂದ್ರಯಾನ-3 ವಿಕ್ರಂ ಯಶಸ್ವಿಯಾಗಲೆಂದು ತಿಮ್ಮಪ್ಪನಿಗೆ ವಿಶೇಷ ಪೂಜೆ

ದಾವಣಗೆರೆ, ಆ.23: ಚಂದ್ರಯಾನ-3 (Chandrayana-3) ವಿಕ್ರಂ ಯಶಸ್ವಿಯಾಗಿ ಚಂದ್ರಲೋಕಕ್ಕೆ ಲ್ಯಾಂಡಿಂಗ್ ಹಾಗೂ ಅದರ ಕಾರ್ಯ ಯಶಸ್ವಿಯಾಗಿ ನಡೆಸಲೆಂದು ನಗರದ ತಿಮ್ಮಪ್ಪನಿಗೆ ವಿಶೇಷ ಪಂಚಾಮೃತ ಅಭಿಷೇಕ ಪೂಜೆ ನಡೆಯಿತು. ಚಂದ್ರಯಾನ 3 ಯೋಜನೆಯ ವಿಕ್ರಮ್ ಲ್ಯಾಂಡರ್ ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲಿದೆ. ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವ ಕಾತರದಿಂದ ಕಾಯುತ್ತಿದೆ.

ಈ ನಡುವೆ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರಲೋಕ ತಲುಪಲೆಂದು ದಾವಣಗೆರೆ ನಾನಾ ಕಡೆ ಪೂಜೆ ನಡೆಯಿತು. ತಿಮ್ಮಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತಾದಿಗಳು (devotees)ಚಂದ್ರಯಾನ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಸ್ಥಳೀಯರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು. ಇದಲ್ಲದೇ ಚಂದ್ರಯಾನ ಯಶಸ್ವಿಗಾಗಿ ಇಡೀ ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೂ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ.

ಒಂದೂವರೆಗಂಟೆ ಕಾಲ ತಿಮ್ಮಪ್ಪ ದೇವಸ್ಥಾನದಲ್ಲಿ ಕನ್ನಡ ಪರ ಹೋರಾಟಗಾರ ಗೋಪಾಲಗೌಡ, ಅರ್ಚಕ ಬಾಲಾಜಿ ಅಯ್ಯಂಗಾರ, ಚಿದಂಬರ ಜ್ಯೋಯಿಷಿ, ರಾಜಣ್ಣಘಿ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಅರ್ಚನೆ, ತುಳಸಿ ಸಹಸ್ರನಾಮ ಅರ್ಚನೆಯೂ ನಡೆಯಿತು. ಇನ್ನು ಇಸ್ರೋ ವಿಜ್ಞಾನಿಗಳ ಪರಿಶ್ರಮದಿಂದ ಇಂದು ಚಂದ್ರನ ಮೇಲೆ ವಿಕ್ರಂ ನಿಂತು ಯಶಸ್ವಿಯಾಗಿ ಇಂದಿನಿಂದ ವಿಜ್ಞಾನದ ಕೆಲಸಗಳನ್ನು ಕೈಗೊಳ್ಳಲಿದ್ದಾನೆ. ಆದ್ದರಿಂದ ದಾವಣಗೆರೆಯಲ್ಲಿ ವಿಜಯೋತ್ಸವವನ್ನು ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಚೇರಿಯಲ್ಲಿ ಕೈಗೊಂಡಿದೆ.

Dysp Transfer: ರಾಜ್ಯದ 21 ಡಿವೈಎಸ್ ಪಿ ಅಧಿಕಾರಿಗಳ ವರ್ಗಾವಣೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉನ್ನತ ಮಟ್ಟದ ಚಂದ್ರಯಾನ ಚಂದ್ರಯಾನ-3 ಶ್ರೀ ಹರಿಕೋಟದಿಂದ ಜುಲೈ 14 ರಂದು ಭೂಮಿಯಿಂದ ಉಡಾವಣೆಯಾಗಿದ್ದುಘಿ, ಇಂದು ಚಂದ್ರನ ಬಾಹ್ಯಾಕಾಶದ ಮೇಲೆ ಇಳಿಯಲಿದ್ದುಘಿ, ಕೆಲವೇ ಗಂಟೆಗಳು ಬಾಕಿ ಇದೆ. ಈಗಾಗಲೇ ಮಂಗಳವಾರ ಭೂಮಿಯ ಸುತ್ತ ತನ್ನ ಕಕ್ಷೆಯನ್ನು ಪೂರ್ಣಗೊಳಿಸಿದ್ದು ಸದ್ಯ ಚಂದ್ರನ ಸಮೀಪಕ್ಕೆ ಚಲಿಸಿದೆ. ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್‌ನ್ನು ಸಾಧಿಸುವ ಗುರಿಯನ್ನು ಈ ಮಿಷನ್ ಹೊಂದಿದೆ. ಇನ್ನು 2019 ರ ಚಂದ್ರಯಾನ-2 ಸ್‌ಟಾ ಲ್ಯಾಂಡಿಂಗ್‌ನ್ನು ಸಾಧಿಸಲು ವಿಲವಾಗಿದ್ದ ಹಿನ್ನೆಲೆಯಲ್ಲಿ ಚಂದ್ರಯಾನ-3 ಯಶಸ್ವಿಯಾಗಲೆಂದು ಪೂಜೆ ಸಲ್ಲಿಸಲಾಗುತ್ತಿದೆ.

ವಿಕ್ರಮ್ ಲ್ಯಾಂಡರ್ ಪಾತ್ರ:

ಲ್ಯಾಂಡರ್ ಮತ್ತು ರೋವರ್‌ಗಳ ಹೆಸರನ್ನು ಕೊನೆಯ ಮಿಷನ್ ಚಂದ್ರಯಾನ-2 ನಿಂದ ತೆಗೆದುಕೊಳ್ಳಲಾಗಿದೆ. ಲ್ಯಾಂಡರ್‌ಗೆ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ ವಿಕ್ರಮ್ ಎ ಸಾರಾಭಾಯ್ ಅವರ ಹೆಸರನ್ನು ಇಡಲಾಗಿದೆ. ಈ ಲ್ಯಾಂಡರ್ ಭೂಮಿಯ ಮೇಲೆ 14 ದಿನಗಳು ಮತ್ತು ಸುರಕ್ಷಿತ ಸ್ಪರ್ಶವನ್ನು ಖಚಿತಪಡಿಸಿಕೊಳ್ಳಲು ಹಲವಾರು ಸಂವೇದಕಗಳೊಂದಿಗೆ ಚಂದ್ರಲೋಕಕ್ಕೆ ಹೋಗಿದೆ.

Ramalinga Reddy; ಸಾರಿಗೆ ಸಚಿವರ ಜಿಲ್ಲಾ ಪ್ರವಾಸ

ಈ ಲ್ಯಾಂಡರ್ ರೋವರ್ ಸೇರಿದಂತೆ ಸುಮಾರು 1,749 ಕೆಜಿ ತೂಗುತ್ತದೆ. ಸೈಡ್-ಮೌಂಟೆಡ್ ಸೌರ ಲಕಗಳನ್ನು ಹೊಂದಲು ನಿರ್ಮಿಸಲಾಗಿದೆ, ಇದು 738 ವ್ಯಾಟ್ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸುವಲ್ಲಿ ತೊಡಗಿದೆ. ಒಮ್ಮೆ ಚಂದ್ರನ ಮೇಲೆ ಕಾಲಿಟ್ಟ ಬಳಿಕ ಲ್ಯಾಂಡರ್ ಪ್ರಗ್ಯಾನ್ ರೋವರ್ ೆಟೋ ತೆಗೆಯುತ್ತದೆ. ಇದು ಚಂದ್ರನ ಮೇಲ್ಮೈಯಲ್ಲಿ ಭೂಕಂಪನ ಚಟುವಟಿಕೆಯನ್ನು ಅಧ್ಯಯನ ಮಾಡಲು ತನ್ನ ಉಪಕರಣಗಳನ್ನು ನಿಯೋಜಿಸುತ್ತದೆ.

Leave a Reply

Your email address will not be published. Required fields are marked *

error: Content is protected !!