Drinking water; ಕುಡಿಯುವ ನೀರನ್ನು ಸಮರ್ಪಕವಾಗಿ ವಿತರಿಸಲು ಆಗ್ರಹ

drinking water

ದಾವಣಗೆರೆ, ಆ.30: ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರ ನಿಯೋಗವು, ಪೂಜ್ಯ ಮಹಾಪೌರರನ್ನು ಭೇಟಿಯಾಗಿ, ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ಸಮರ್ಪಕವಾಗಿ ನೀರು ವಿತರಣೆ ಆಗದಿರುವ ಕುರಿತು ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು, ಜನರಿಗೆ ತೊಂದರೆಯಾಗದಂತೆ ಸಮರ್ಪಕವಾಗಿ ಕುಡಿಯುವ ನೀರನ್ನು (Drinking water) ವಿತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಗ್ರಾಮೀಣ ಅಭಿವೃದ್ಧಿಯಲ್ಲಿ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ : ಸಚಿವ ಕೆ ಎಸ್ ಈಶ್ವರಪ್ಪ

ಕಳೆದ 1 ತಿಂಗಳಿನಿಂದ ನಗರದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ, ಕೆಲವು ವಾರ್ಡುಗಳಲ್ಲಿ 14 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದ್ದು ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಈ ಹಿಂದಿನ 3 ವರ್ಷಗಳಲ್ಲಿ ಅಗತ್ಯ ನೀರನ್ನು ಚಾನಲ್ ನಿಂದ ಶೇಖರಿಸಿ ಸರಬರಾಜು ಮಾಡಲಾಗಿತ್ತು. ಭವಿಷ್ಯದಲ್ಲಿ ಬೇಕಾಗುವಷ್ಟು ನೀರಿನ ಮಟ್ಟವನ್ನು ಅಂದಾಜಿಸಿ, ಸರ್ಕಾರ ಹಾಗೂ ಕಾಡಾ ಅಧಿಕಾರಿಗಳ ಗಮನಕ್ಕೆ ತಂದು, ಅಗತ್ಯವಿರುವ ನೀರನ್ನು ಶೇಖರಿಸಿಡಲು, ಕ್ರಮಗಳನ್ನ ತುರ್ತಾಗಿ ತೆಗೆದುಕೊಳ್ಳುವ ಅವಶ್ಯಕತೆ ಇದ್ದು, ಈ ಕುರಿತು ಕ್ರಮ ಜರುಗಿಸಬೇಕಿದೆ ಎಂದು ಮನವಿ ಮಾಡಿದರು.

Farmer; ಬೆಳೆಹಾನಿ ವೀಕ್ಷಿಸಿದ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಮಾಜಿ ಮೇಯರ್ ಎಸ್ಟಿ ವೀರೇಶ್, ಪಾಲಿಕೆ ಸದಸ್ಯ ಜೆ.ಎನ್ ಶ್ರೀನಿವಾಸ್, ಪಾಲಿಕೆ ಸದಸ್ಯ ಶಿವಾನಂದ್, ಪಾಲಿಕೆ ಸದಸ್ಯ ಕೆ.ಎಂ ವೀರೇಶ್, ಪಾಲಿಕೆ ಸದಸ್ಯಎಲ್.ಡಿ ಗೋಣ್ಯಪ್ಪ, ಪಾಲಿಕೆ ಸದಸ್ಯಶಾಂತ್ ಕುಮಾರ್ ಸೋಗಿ, ಬಿಜೆಪಿ ಮುಖಂಡರಾದ ಸುರೇಶ್ ಗಂಡುಗಳ್, ಯೋಗೀಶ್ ಎಸ್.ಟಿ, ಶ್ರೀನಿವಾಸ್, ಯುವ ಮುಖಂಡರಾದ ವಿನಯ್ ದಿಳ್ಯಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!