Dr. M Chandrappa; ಸಾರ್ವಜನಿಕರ ಬದುಕೇ ನನ್ನ ಸ್ವಂತ ಬದುಕಾಗಿದೆ: ಡಾ.ಎಂ.ಚಂದ್ರಪ್ಪ

ಚಿತ್ರದುರ್ಗ, ಆ.30: ಸಾರ್ವಜನಿಕವಾದ ಬದುಕನ್ನು ನನ್ನ ಸ್ವಂತ ಬದುಕನ್ನಾಗಿ ತಿಳಿದುಕೊಂಡಿದ್ದೇನೆ, ನನ್ನ ಬದುಕಿನಲ್ಲಿ ಯಾರ ಹತ್ತಿರವೂ ಬೇಡಿಲ್ಲ ಭಗವಂತ ಎಲ್ಲವನ್ನು ನನಗೆ ನೀಡಿದ್ದಾನೆ, ನನ್ನ ಕಷ್ಟ ಕಾಲದಲ್ಲಿ ನನಗೆ ಹಲವಾರು ಜನತೆ ಸಹಾಯವನ್ನು ಮಾಡಿದ್ದಾರೆ ಅವರನ್ನು ಮರೆಯುವಂತಿಲ್ಲ ಎಂದು ಶಾಸಕ ಡಾ.ಎಂ.ಚಂದ್ರಪ್ಪ (Dr. M Chandrappa) ತಿಳಿಸಿದರು.

ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ದೇವರಾಜ್ ಅರಸು ಶಿಕ್ಷಣ ಸಿಬ್ಬಂದಿ ಸಂಸ್ಥೆಯ ಸಿಬ್ಬಂದಿ ವರ್ಗದವರಿಂದ ದೇವರಾಜು ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಇತ್ತೀಚೇಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಡಾ.ಎಂ.ಚಂದ್ರಪ್ಪರವರಿಗೆ ಹಮ್ಮಿಕೊಂಡಿದ್ದ ಗೌರವ ಸರ್ಮಪಣೆಯನ್ನು ಸ್ವೀಕಾರ ಮಾಡಿ ಮಾತನಾಡಿದರು.

ನನ್ನ ಮೊದಲ ಶಾಸಕ ಸಮಯದಲ್ಲಿ ಪಂಡಿತಾರಾಧ್ಯ ಶ್ರೀಗಳು ಒಂದು ಮಾತನ್ನು ಹೇಳಿದ್ದರು. ಸಾಧನೆ ಮಾತಾಗಬೇಕೆ ವಿನಹ ಮಾತು ಸಾಧನವಾಗಬಾರದೆಂದು ಅದರಂತೆ ನಾನು ಈವರೆವಿಗೂ ನಡೆದುಕೊಂಡಿದ್ದೇನೆ, ಜಾಸ್ತಿ ಮಾತನಾಡದೇ ನನ್ನ ಕೆಲಸಗಳು ಮಾತನಾಡುವಂತೆ ಮಾಡಿದ್ದೇನೆ, ಜೀವನದಲ್ಲಿ ಅವಕಾಶಗಳು ಸಿಗುತ್ತವೆ ಸಿಕ್ಕ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗ ಮಾಡಿಕೊಳ್ಳಬೇಕಿದೆ. ಉತ್ತಮವಾದ ಕೆಲಸ ಮಾಡಿದರೆ ಮುಂದೆ ಅದರ ಫಲ ಸಿಗುತ್ತದೆ. ನನ್ನ ಶಿಕ್ಷಣ ಸಂಸ್ಥೆಯಲ್ಲಿ 5000ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತಿದೆ. ಇದನ್ನು ಯಾವುದೇ ಫಲಾಫೇಕ್ಷೆ ಇಲ್ಲದೆ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದಲ್ಲಿ ಮತದಾರರಿಗೆ ಅಗತ್ಯವಾಗಿ ಬೇಕಾದ ಕುಡಿಯುವ ನೀರು, ರಸ್ತೆ ಮತ್ತು ಶಾಲೆಗಳನ್ನು ನೀಡಿದ್ದೇನೆ, ಅವರು ಕೇಳುವ ಮುಂಚೆಯೇ ಅದನ್ನು ಈಡೇರಿಸಿದ್ದೇನೆ ಎಂದು ಚಂದ್ರಪ್ಪ ತಿಳಿಸಿದರು.

Education Department; ಶಿಕ್ಷಣ ಇಲಾಖೆ ನಿರ್ಲಕ್ಷ್ಯ; ಜಿಲ್ಲೆಯ ಗಡಿಭಾಗದ ಈ ಹಳ್ಳೀಲಿ ಕೊಠಡಿ, ಶೌಚಾಲಯವಿಲ್ಲ

ನನ್ನ ಸೇವೆಯನ್ನು ಪರಿಗಣಿಸಿ ಕುವೆಂಪು ವಿವಿಯವರು ನನಗೆ ಡಾಕ್ಟರೇಟ್ ಪದವಿಯನ್ನು ನೀಡಿದ್ದಾರೆ ಇದನ್ನು ಯಾವುದೇ ಹಣವನ್ನು ನೀಡಿ ಪಡೆದಿದ್ದಲ್ಲ, ನನ್ನ ಸೇವೆಯನ್ನು ನೋಡಿ ಕೊಟ್ಟಿದ್ದು. ಕುಟುಂಬದ ಸದಸ್ಯರು ನನಗೆ ಉತ್ತಮವಾದ ಸಹಾಯ ಮತ್ತು ಸಹಕಾರವನ್ನು ನೀಡುತ್ತಿದ್ದಾರೆ ಎಂದು ಚಂದ್ರಪ್ಪ ತನಗೆ ಸಹಾಯ ಮಾಡಿದವರನ್ನು ಸ್ಮರಿಸಿದರು.

ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಚಂದ್ರಪ್ಪರವರು ಶಾಸಕರಾಗಿ ಉತ್ತಮ ಸೇವೆಯನ್ನು ಮಾಡಿದ್ದಾರೆ ತಮ್ಮ ಕ್ಷೇತ್ರದಲ್ಲಿ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸುವುದರ ಮೂಲಕ ಮತದಾರರಲ್ಲಿ ಉತ್ತಮವಾದ ಹೆಸರನ್ನು ಪಡೆದಿದ್ದಾರೆ. ಕಡಿಮೆ ಸಮಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆಯನ್ನು ದಾನ ಮಾಡುವುದರ ಮೂಲಕ ಅವರ ಜೀವನಕ್ಕೆ ದಾರಿದೀಪವಾಗಿದ್ದಾರೆ. ಅವರ ಪರಿಶ್ರಮ ತ್ಯಾಗದಿಂದ ಈ ಪ್ರಶಸ್ತಿ ಲಭಿಸಿದೆ. ಮಕ್ಕಳು ಸಹಾ ತಂದೆಯ ಹಾದಿಯನ್ನು ಹಿಡಿದು ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಮಕ್ಕಳ ಕಾರ್ಯವನ್ನು ಶ್ಲಾಘಿಸಿದರು.

ಸಗರಸಭೆಯ ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ಕಡಿಮೆ ಸಮಯ ಮತ್ತು ವಯಸ್ಸಿನಲ್ಲಿ ಚಂದ್ರಪ್ಪರವರು ಉತ್ತಮವಾದ ಸಾಧನೆಯನ್ನು ಮಾಡಿದ್ದಾರೆ. ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವ ಅವರು ವೃದ್ದಾಶ್ರಮವನ್ನು ತೆರೆಯವುದರ ಮೂಲಕ ಬೇರೆಯವರಿಗೆ ದಾರಿದೀಪವಾಗಲಿ ಎಂದು ಆಶಿಸಿದರು.

Renukacharya;ಯಡಿಯೂರಪ್ಪನವರ ಕಡೆಗಣಿಸಿದ್ದೇ ಬಿಜೆಪಿಗೆ ಶಾಪ: ರೇಣುಕಾಚಾರ್ಯ ಗುಡುಗು

ಚಂದ್ರಪ್ಪರವರ ಪುತ್ರ, ದೇವರಾಜು ಅರಸು ಶಿಕ್ಷಣ ಸಂಸ್ಥೆಯ ಸಿಇಓ ರಘುಚಂದನ್ ಮಾತನಾಡಿ, ನನ್ನ ಜೀವನದಲ್ಲಿ ಅವರ ಹೆಸರನ್ನು ಉಳಿಸುವಂತ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಣೆಹಳ್ಳಿಯ ಶ್ರೀ ಪಂಡಿತಾರಾಧ್ಯ ಶ್ರೀಗಳು, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು, ಬೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮ ಶ್ರೀಗಳು, ಸಾನಿಧ್ಯವಹಿಸಿದ್ದರು, ದೇವರಾಜ್ ಆರಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಕಲಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೇವರಾಜ್ ಆರಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಯಶಸ್ವಿನಿ ಕಿರಣ್, ನಿರ್ದೇಶಕರಾದ ಶ್ರೀನಿವಾಸ್, ಉಡುಪಿಯ ಹೋಟೇಲ್ ಉದ್ಯಮಿ ಕೃಷ್ಣರಾಜ ಭಟ್, ನಿವೃತ್ತ ಪಾಂಶುಪಾಲೆ ಪದ್ಮಾವತಿ ಪಾಲಯ್ಯ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!