Civil judge; ಸಿವಿಲ್ ನ್ಯಾಯಾಧೀಶರಾಗಿ ಕಾವ್ಯಶ್ರೀ ಆಯ್ಕೆ, ಅಭಿನಂದನೆ

ದಾವಣಗೆರೆ, ಆ.30: ಸಿವಿಲ್ ನ್ಯಾಯಾಧೀಶರಾಗಿ(Civil judge) ನೇಮಕವಾಗಿರುವ ವಕೀಲರಾದ ಹೆಚ್.ಎಸ್. ಕಾವ್ಯಶ್ರೀ ಅವರಿಗೆ ಜಿಲ್ಲಾ ವಕೀಲರ ಸಂಘದಿಂದ ಇಂದು ಮಧ್ಯಾಹ್ನ ವಕೀಲರ ಸಾಂಸ್ಕೃತಿಕ ಭವನದಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆಯವರು ಮಾತನಾಡುತ್ತಾ, ನ್ಯಾಯಾಧೀಶರು ಅತ್ಯುತ್ತಮ ಮತ್ತು ಗುಣಾತ್ಮಕವಾದ ತೀರ್ಪು ನೀಡುವ ಸಾಮರ್ಥ್ಯ ಮತ್ತು ಅವಕಾಶವನ್ನು ಹೊಂದಿರುತ್ತಾರೆ. ಇದು ನ್ಯಾಯಾಧೀಶರ ಹುದ್ದೆಯ ಮಹತ್ವವಾಗಿದೆ ಎಂದರು. ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಈಗ ನ್ಯಾಯಾಂಗ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿಗೆ ಯಾವುದೇ ರಾಜ್ಯದಲ್ಲಿ ನೋಡಿದರು ಶೇ. 40ರಷ್ಟು ನ್ಯಾಯಾಧೀಶರು ಮಹಿಳೆಯರಾಗಿದ್ದಾರೆ. ಅತ್ಯಂತ ಸ್ಪರ್ಧಾತ್ಮಕ ಪ್ರತಿಭಾನ್ವಿತ, ಬುದ್ಧಿವಂತಿಕೆ ಹೊಂದಿರುವ ಯುವಕ-ಯುವತಿಯರು ಕಾನೂನು ಕೋರ್ಸ್ ಗಳಿಗೆ ಸೇರ್ಪಡೆಯಾಗುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು. ವಕೀಲರಾದ ಕಾವ್ಯಶ್ರೀಯವರು ನ್ಯಾಯಾಧೀಶರಾಗಿ ಆಯ್ಕೆಯಾಗಿ ನ್ಯಾಯಾಧೀಶರ ಬಳಗಕ್ಕೆ ಸೇರ್ಪಡೆಯಾಗಿರುವುದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ರಾಮಚಂದ್ರ ಕಲಾಲ್, ಕಠಿಣ ಪರಿಶ್ರಮ, ಭಾಷೆ ಮೇಲಿನ ಹಿಡಿತ ಮತ್ತು ನಿರಂತರ ಓದಿನ ಮೂಲಕ ವಕೀಲರು ತಮ್ಮ ಪಾಂಡಿತ್ಯವನ್ನು ಸಾಬೀತುಪಡಿಸಲು ಅವಕಾಶಗಳಿದ್ದು ಕಾವ್ಯಶ್ರೀಯವರು ತಮ್ಮ ನಿರಂತರ ಪರಿಶ್ರಮದ ಮೂಲಕ ಮತ್ತು ವೃತ್ತಿಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವ ಮೂಲಕ ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆಯಾಗಿದ್ದಾರೆ, ಅವರ ವೃತ್ತಿ ಜೀವನ ಯಶಸ್ವಿಯಾಗಲಿ ಎಂದು ಶುಭಕೋರಿದರು.

Drinking water; ಕುಡಿಯುವ ನೀರನ್ನು ಸಮರ್ಪಕವಾಗಿ ವಿತರಿಸಲು ಆಗ್ರಹ

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹೆಚ್.ಎಸ್. ಕಾವ್ಯಶ್ರೀಯವರು, ತಮ್ಮ ಹಿರಿಯ ವಕೀಲರು ಹಾಗೂ ಜಿಲ್ಲಾ ವಕೀಲರ ಸಂಘವು ತಮಗೆ ನೀಡಿದ ಸಹಕಾರವನ್ನು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‌ಕುಮಾರ್ ಅವರು, ವಕೀಲರು ತಮ್ಮ ಪ್ರತಿಭೆಯ ಮೂಲಕ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳಲ್ಲಿ ಅವಕಾಶಗಳನ್ನು ಪಡೆದು ಜಿಲ್ಲಾ ವಕೀಲರ ಸಂಘದ ಘನತೆ ಮತ್ತು ಗೌರವವನ್ನು ಹೆಚ್ಚಿಸಿದ್ದಾರೆ. ನೂತನವಾಗಿ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಕಾವ್ಯಶ್ರೀ ಅವರು ವಕೀಲಿ ವೃತ್ತಿಯ ಜೊತೆಗೆ ರಂಗಭೂಮಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಈ ಸಂದರ್ಭದಲ್ಲಿ ತಿಳಿಸಿ ಅವರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ವಿಯನ್ನು ಪಡೆಯಲಿ ಎಂದು ಅಭಿನಂದಿಸಿದರು.

ವಕೀಲರಾದ ನಿಶ್ಚಿತಾ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಜಿ.ಕೆ ಬಸವರಾಜ್ ಗೋಪನಾಳ್ ಸ್ವಾಗತಿಸಿದರು, ಸಹಕಾರ್ಯದರ್ಶಿ ಎ.ಎಸ್. ಮಂಜುನಾಥ್ ವಂದಿಸಿದರು. ಕಾರ್ಯದರ್ಶಿ ಎಸ್. ಬಸವರಾಜ್ ನಿರೂಪಿಸಿದರು. ಸಮಾರಂಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣನವರ್, ನ್ಯಾಯಾಧೀಶರಾದ ಶಿವಪ್ಪ ಸಲಗೆರೆ, ರೇಷ್ಮಾ, ಅಫ್ತಾಬ್, ಸಮೀರ್ ಕೊಳ್ಳಿ, ಮಲ್ಲಿಕಾರ್ಜುನ್, ಸಿದ್ಧರಾಜು, ನಾಜಿಯಾಕೌಸರ್, ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಮಧುಸೂದನ್, ಎಲ್. ನಾಗರಾಜ್, ನೀಲಕಂಠಯ್ಯ, ಸಂತೋಷ್‌ಕುಮಾರ್, ವಾಗೀಶ್ ಕಟಗಿಹಳ್ಳಿಮಠ, ಚೌಡಪ್ಪ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!