children; ಮಕ್ಕಳ ಆಸಕ್ತಿ ಇರುವ ವಿಷಯಗಳ ಬಗ್ಗೆ ಗಮನ ನೀಡಿ
ದಾವಣಗೆರೆ, ಸೆ.09: ಮಕ್ಕಳಿಗೆ (children) ಆಸಕ್ತಿ ಇರುವ ವಿಷಯಗಳನ್ನು ಪೋಷಕರು ಪ್ರೋತ್ಸಾಹಿಸಬೇಕು ಎಂದು ಡಿವೈಎಸ್ಪಿ ಬಿ.ಎಸ್.ಬಸವರಾಜ್ ಹೇಳಿದರು.
ನಗರದ ಹಳೇಬೇತೂರಿನ ಗೋಲ್ಡನ್ ಪ್ಯಾಲೇಸ್ ನಲ್ಲಿ ಯೂನಿಕ್ ಸ್ಕ್ಯಾಲರ್ ಅಬಾಕಸ್ ರಾಜ್ಯ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬ ಮಕ್ಕಳಿಗೆ ಅವರದ್ದೇ ಆದ ಟ್ಯಾಲೆಂಟ್ ಇದ್ದು, ಅವರಿಗೆ ಆಸಕ್ತಿ ಇರುವ ವಿಷಯಗಳಿಗೆ ನೀರೆರೆದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡುವರು ಎಂದರು.
hitech toilet; ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ ಪ್ರಪಂಚದ ಅತ್ಯಂತ ದುಬಾರಿ ಹೈಟೆಕ್ ಶೌಚಾಲಯ!
ಕೊಲ್ಲಾಪುರ, ಮಹಾರಾಷ್ಟ್ರ, ಸತಾರಾ, ತುಮಕೂರು, ಮುಂಬೈ, ಮಂಗಳೂರು, ಕುಷ್ಟಗಿ ಸೇರಿದಂತೆ 375 ಮಕ್ಕಳು, ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಲ್ಲಿ ಗೆದ್ದವರು ರಾಷ್ಟ್ರಮಟ್ಟಕ್ಕೆ ಹೋಗಲಿದ್ದಾರೆ. ಮೊದಲನೇ ಬಹುಮಾನವಾಗಿ ಸೈಕಲ್, ಎರಡನೇ ಬಹುಮಾನವಾಗಿ ಬೆಳ್ಳಿ ಪದಕ, ಮೂರನೇ ಬಹುಮಾನವಾಗಿ ನಗದು ನೀಡಲಾಯಿತು. 100ಕ್ಕೂ ಹೆಚ್ಚು ಮಕ್ಕಳು ರ್ಯಾಕಿಂಗ್ ಪಡೆದರು. ದಾವಣಗೆರೆ ವಿಶೇಷ ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಪಿ.ಅನಿತಾ, ಸ್ಕೌಟ್ ಆಂಡ್ ಗೈಡ್ಸ್ ನ ಜೆ.ಅಶ್ವಿನಿ, ದಾವಣಗೆರೆ ಅಬಕಾಸ್ ಡೈರಕ್ಟರ್ ಮೀನಾಕ್ಷಿ ಲಾಂಬೆ, ಸಂಘಟನಾ ಸುಮನ್ ತೆಲಗಾವಿ ಸೇರಿದಂತೆ ಇದ್ದರು.