karnika; ಸೆ.11ರಂದು ಆನೆಕೊಂಡ ಕಾರ್ಣಿಕ, ಜಾತ್ರೆ
ದಾವಣಗೆರೆ, ಸೆ.09: ಐತಿಹಾಸಿಕ ಪ್ರಸಿದ್ಧಿಯಾದ ಶ್ರೀ ಕ್ಷೇತ್ರ ಅನೆಕೊಂಡ ಗ್ರಾಮದಲ್ಲಿ ಸೆ.11 ರ ಶ್ರಾವಣಮಾಸದ ಕಡೇ ಸೋಮವಾರ ಆನೆಕೊಂಡದ ಶ್ರೀ ಬಸವೇಶ್ವರ ದೇವಸ್ಥಾನದ ಕಾರ್ಣಿಕ (karnika) ಮತ್ತು ಜಾತ್ರಾ (jatre) ಮಹೋತ್ಸವ ಜರುಗಲಿದೆ.
kannada; ಧ್ವಜಸ್ತಂಭ ಧ್ವಂಸಗೊಳಿಸಿದ ಕಿಡಿಗೇಡಿಗಳು
ಅಂದು ಶ್ರೀ ಬಸವೇಶ್ವರ ಮತ್ತು ನೀಲನಹಳ್ಳಿ ಶ್ರೀ ಆಂಜನೇಯಸ್ವಾಮಿ ಹಾಗೂ ನಿಟುವಳ್ಳಿ ದುರ್ಗಾಂಭಿಕಾದೇವಿ ಹಾಗೂ ಸುತ್ತ-ಮುತ್ತಲಿನ ಗ್ರಾಮದ ದೇವರುಗಳನ್ನೊಳಗೂಡಿ ಸಂಜೆ 4 ಗಂಟೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ಸಂಚರಿಸಿ, ನಂತರ ಸಂಜೆ 6 ಗಂಟೆಗೆ ಆನೆಕೊಂಡದಲ್ಲಿ ಕಾರ್ಣಿಕ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ, ಶ್ರೀ ಬಸವೇಶ್ವರ ಮುಜರಾಯಿ ಸಮಿತಿ ತಿಳಿಸಿದೆ.