hitech toilet; ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ ಪ್ರಪಂಚದ ಅತ್ಯಂತ ದುಬಾರಿ ಹೈಟೆಕ್ ಶೌಚಾಲಯ!

ದಾವಣಗೆರೆ, ಸೆ.09; ನಗರದಲ್ಲಿ ಸುಮಾರು 26 ಕೋಟಿ ರೂ ವೆಚ್ಚದಲ್ಲಿ ಎಸ್ಕಲೇಟರ್, ಲಿಫ್ಟ್, ಸಿಸಿ ಕ್ಯಾಮೆರಾಗಳು, ಬಹು ಮಹಡಿ ಮಳಿಗೆಗಳು ಸೇರಿದಂತೆ ನಿರ್ಮಿಸಿರುವ ಖಾಸಗಿ ಬಸ್ ನಿಲ್ದಾಣ ಕೇವಲ ಸಾರ್ವಜನಿಕರ ಶೌಚಾಲಯಕ್ಕೆ ಮೀಸಲಾಗಿರುವುದನ್ನು ನೋಡಿದ ನಾಗರಿಕರು ಪ್ರಪಂಚದಲ್ಲಿಯೇ ದುಬಾರಿ ಹೈಟೆಕ್ ಶೌಚಾಲಯವನ್ನು (hitech toilet) ನಮ್ಮ ಸ್ಮಾರ್ಟ್ ಸಿಟಿ ಎಂಜಿನಿಯರ್ ಗಳು ಹಾಗೂ ಅಧಿಕಾರಿಗಳು ನಿರ್ಮಿಸಿದ್ದಾರೆ ಎಂದು ಕುಚೇಷ್ಟೆ ಮಾಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಶೌಚಾಲಯಕ್ಕೆ ದಾರಿ ಎಂಬ ಬೋರ್ಡ್ ಹಾಕಿರುವುದನ್ನು ಕಂಡ ಪ್ರವಾಸಿಗರು ಹಾಗೂ ಸ್ಥಳೀಯ ನಾಗರೀಕರು, ಇದು ಖಾಸಗಿ ಬಸ್ ನಿಲ್ದಾಣವೋ? ಕಮರ್ಷಿಯಲ್ ಕಟ್ಟಡವೋ? ಅಥವಾ ಹೈಟೆಕ್ ಶೌಚಾಲಯವೋ? ಎಂಬ ಅನುಮಾನ ಸಾರ್ವಜನಿಕರದ್ದು.

 

ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳ ದಡ್ಡತನವೋ? ಅಂದಿನ ಸ್ಮಾರ್ಟ್ ಸಿಟಿ ಎಂ ಡಿ ಯ ಉಡಾಫೆಯೋ? ಅಂದಿನ ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿಯೋ? ಅಥವಾ ಸಂಸದರ ಅನವಶ್ಯಕ ಹಸ್ತಕ್ಷೇಪವೋ? ಅಂತೂ ದಾವಣಗೆರೆ ನಗರದಲ್ಲಿ ಕಳಪೆ ಹಾಗೂ ಅವೈಜ್ಞಾನಿಕ ಖಾಸಗಿ ಬಸ್ ನಿಲ್ದಾಣ ನಿರ್ಮಿಸಿ ಸುಮಾರು 26 ಕೋಟಿ ಸಾರ್ವಜನಿಕರ ಹಣಕ್ಕೆ ಉಂಡೆ ನಾಮ ಹಾಕಿದ್ದ ಖ್ಯಾತಿ ಈ ಮಹಾಶಯರಿಗೆ ಸಲ್ಲುತ್ತದೆ ಎಂಬುದು ತೆರಿಗೆ ಕಟ್ಟುವ ನಾಗರೀಕರ ಅಭಿಪ್ರಾಯವಾಗಿದೆ.

health; ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸ, ಜಿಲ್ಲಾಧಿಕಾರಿ, ಸಿ.ಇ.ಒ ಭೇಟಿ ಪರಿಶೀಲನೆ.

ಈ ಹಿಂದೆ 20 ಕೋಟಿ ವೆಚ್ಚದಲ್ಲಿ ದೇಶದಲ್ಲಿಯೇ ಮೊದಲು ಎನ್ನುವಂತಹ ಗಾಜಿನ ಮನೆಯನ್ನು ನಿರ್ಮಿಸಿ ಪ್ರವಾಸಿಗರನ್ನು ದಾವಣಗೆರೆ ಕಡೆ ಸೆಳೆಯುವಂತೆ ಮಾಡಿದ ಎಸ್.ಎಸ್ ಮಲ್ಲಿಕಾರ್ಜುನ್ ಒಂದು ಕಡೆಯಾದರೆ…. ಸುಮಾರು 26 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ಶೌಚಾಲಯ(ವೈಜ್ಞಾನಿಕ ಖಾಸಗಿ ಬಸ್ ನಿಲ್ದಾಣ) ನಿರ್ಮಿಸಿ ಪ್ರವಾಸಿಗರನ್ನು ದುಬಾರಿ ಹೈಟೆಕ್ ಶೌಚಾಲಯ ನೋಡಲು ಬರುವಂತೆ ಮಾಡಿದ ಖ್ಯಾತಿ ಕಳೆದ ಬಿಜೆಪಿ ಸರ್ಕಾರದ ಸಚಿವರು, ಅಧಿಕಾರಿಗಳು ಹಾಗೂ ಸಂಸದರದ್ದಾಗಿದೆ.

Leave a Reply

Your email address will not be published. Required fields are marked *

error: Content is protected !!