sports; ರಾಜ್ಯಮಟ್ಟ ಕ್ರೀಡಾಕೂಟಕ್ಕೆ ಶ್ರೀ ಸೋಮೇಶ್ವರ ವಿದ್ಯಾಲಯ ವಿದ್ಯಾರ್ಥಿಗಳು ಆಯ್ಕೆ

ದಾವಣಗೆರೆ, ಅ.18: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ (sports ) ಶ್ರೀ ಸೋಮೇಶ್ವರ ವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
110 ಮೀಟರ್ ಹರ್ಡಲ್ ರನ್ ದಲ್ಲಿ ಸಾಗರ್ ಜಿ.ಆರ್. ಪ್ರಥಮ ಸ್ಥಾನ ಪಡೆದರೆ, ಕರಾಟೆಯಲ್ಲಿ ಶಾರದಾ ದೇವಿ ಕೆ.ಎಂ ಮೊದಲ ಸ್ಥಾನ ಪಡೆದಿದ್ದಾರೆ. ಇನ್ನೂ ಚದುರಂಗದಲ್ಲಿ ದೀಕ್ಷಿತ್ ಪಿ.ಎಂ. ಪ್ರಥಮಸ್ಥಾನಗಳಿಸಿದ್ದು, 80 ಮೀಟರ್ ಹರ್ಡಲ್ ರನ್ ದಲ್ಲಿ ವೇದೇಶ್ ಎಂ.ಜೆ. ಪ್ರಥಮ ಸ್ಥಾನಪಡೆದಿದ್ದಾರೆ. ಈ ನಾಲ್ಕು ವಿದ್ಯಾರ್ಥಿಗಳು ಇದೀಗ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಪೋಷಕರು ಹಾಗೂ ಶಾಲೆಗೆ ಕೀರ್ತಿ ತಂದಿದ್ದು ರಾಜ್ಯಮಟ್ಟದ ಪಂದ್ಯದಲ್ಲಿ ಸ್ಪರ್ಧೆ ಮಾಡಲಿದ್ದಾರೆ.
ಇದನ್ನೂ ಓದಿ- Mysore Dasara 2023: ಆನ್ ಲೈನ್ನಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ
ಕ್ರೀಡೆಯಲ್ಲಿ ಸಾಧನೆಗಳಿಸಿದ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ಅಭಿನಂದನೆ ಸಲ್ಲಿಸಿ, ರಾಜ್ಯಮಟ್ಟದಲ್ಲೂ ಜಯ ಸಾಧಿಸಲೆಂದು ಶುಭಕೋರಲಾಯಿತು. ಈ ವೇಳೆ ಪ್ರಾಚಾರ್ಯ ಪ್ರಭಾವತಿ, ಆಡಳಿತ ಮಂಡಳಿಯ ಹರೀಶ್ ಬಾಬು, ಮುಖ್ಯಶಿಕ್ಷಕ ಗಾಯತ್ರಿ, ಮಾಲಾ, ಪ್ರಕಾಶ್ ಹಾಗೂ ದೈಹಿಕ ಶಿಕ್ಷಕ ಇಂದ್ರಮ್ಮ, ನಾಗರಾಜ್, ರಾಹುಲ್ ಆರ್ , ಶರ್ಮಿಳಾ ಉಪಸ್ಥಿತರಿದ್ದರು.

 
                         
                       
                       
                       
                       
                       
                       
                      