muthalik; ಹಮಾಸ್-ಪ್ಯಾಲೇಸ್ತನ್ ಉಗ್ರರ ಪರ ಪ್ರತಿಭಟನೆ; ಮುತಾಲಿಕ್ ಕಿಡಿ

ದಾವಣಗೆರೆ, ಅ.19: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಭೇಟಿ ನೀಡಲು ಹೊರಟಿದ್ದ ಶ್ರೀ ರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್‌ಗೆ (Muthalik) ಶಿವಮೊಗ್ಗ ಜಿಲ್ಲಾಡಳಿತ 30 ದಿನಗಳ ಕಾಲ ನಿರ್ಬಂಧ ಹೇರಿದೆ.

ಪ್ರಮೋದ್ ಮುತಾಲಿಕ್ ಮಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದರು. ಆದರೆ ಶಿವಮೊಗ್ಗದ ಜಿಲ್ಲಾಡಳಿತ ಅವರು ಬಾರದಂತೆ ನೋಟಿಸ್ ನೀಡಿದೆ. ಆದ್ದರಿಂದ ಪೊಲೀಸರು ದಾರಿ ಮಧ್ಯೆ ಅವರನ್ನು ತಡೆದು ನೋಟಿಸ್ ನೀಡಿ ದಾವಣಗೆರೆಗೆ ಕರೆತಂದಿದ್ದರು.

Municipality; ಚನ್ನಗಿರಿ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಕೃಷ್ಣ ಡಿ ಕಟ್ಟಿಮನಿ ನೇಮಕ

ನಂತರ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಗಲಾಟೆ ನಡೆದ ಶಿವಮೊಗ್ಗದ ರಾಗಿಗುಡ್ಡ ಭೇಟಿ ನೀಡಲು ಮಂಗಳೂರಿನಿಂದ ಹೊರಟ್ಟಿದ್ದೆ. ಆದರೆ ಪೊಲೀಸರು ಮಾಸ್ತಿಕಟ್ಟೆ ಬಳಿ ತಡೆದು, ನನ್ನನ್ನು ವಶಕ್ಕೆ ಪಡೆದುಕೊಂಡು ದಾವಣಗೆರೆಗೆ ತಂದು ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ಭೇಟಿಗೆ ನಿರ್ಬಂಧ ವಿಧಿಸಿರುವ ಬಗ್ಗೆ ಕೋರ್ಟ್? ಮೊರೆ ಹೋಗುವೆ. ರಾಗಿಗುಡ್ಡದ ಸಂತ್ರಸ್ತ ಹಿಂದುಗಳಿಗೆ ಸಾಂತ್ವನ ಹೇಳುವುದು ನನ್ನ ಉದ್ದೇಶವಾಗಿತ್ತು. ಆದರೆ ನನ್ನನ್ನು ತಡೆದು ಪೊಲೀಸರು ದೌರ್ಜನ್ಯವೆಸಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೂ ಧರ್ಮದ ವಿರೋಧಿ. ಸಿದ್ದರಾಮಯ್ಯ ಕುಮ್ಮಕ್ಕಿನಿಂದಲೇ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಕಿಡಿಕಾರಿದರು.

ಹಮಾಸ್ ಮತ್ತು ಪ್ಯಾಲೇಸ್ತೇನ್ ಉಗ್ರರ ಪರ ಪ್ರತಿಭಟನೆ ಮಾಡಿದ ಎಂಜಿನಿಯರ್‌ಗಳ ವಿರುದ್ಧ ಕಿಡಿಕಾರಿದ ಮುತಾಲಿಕ್, ಇಸ್ರೇಲ್‌ಗೆ ಭಾರತ ಬೆಂಬಲ ನೀಡಿದೆ. ಆದರೆ ಉಗ್ರರ ಪರ ಇಲ್ಲಿನ ಕೆಲ ಸಮುದಾಯ ವಿದ್ಯಾರ್ಥಿಗಳು ಇಲ್ಲಿನ ಅನ್ನ ತಿಂದು ಉಗ್ರರಿಗೆ ಬೆಂಬಲ ನೀಡುತ್ತಿದ್ದಾರೆ. ಈ ಹಮಾಸ್ ಉಗ್ರರು ಮಕ್ಕಳನ್ನು ನೋಡದೇ ಕ್ರೂರವಾಗಿ ಕೊಂದಿದ್ದಾರೆ. ಹೆಣ್ಣುಮಕ್ಕಳಿಗೆ ಸಾಕಷ್ಟು ಹಿಂಸೆ ನೀಡಿದ್ದಾರೆ. ಇಂತಹವರಿಗೆ ಇಲ್ಲಿನ ಕೆಲವರು ಪ್ರತಿಭಟನೆ ಮಾಡುವ ಮೂಲಕ ಬೆಂಬಲಿಸುವುದು ಎಷ್ಟು ಸರಿ?. ಈ ಬಗ್ಗೆ ಸರಕಾರ ಗಮನಹರಿಸಬೇಕೆಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!