Mysore Dasara 2023: ಆನ್ ಲೈನ್‌ನಲ್ಲಿ ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ

ಮೈಸೂರು, ಅ.18: ನಾಡಹಬ್ಬ ಮೈಸೂರು ದಸರಾ – 2023ರ (mysore dasara 2023) ವೀಕ್ಷಣೆಗಾಗಿ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಗೋಲ್ಡ್ ಕಾರ್ಡ್ ಸೌಲಭ್ಯವನ್ನು ಜಿಲ್ಲಾಡಳಿತವು ಅ.18 (ಇಂದು) ಬುಧವಾರ ಬೆಳಗ್ಗೆ 10 ಗಂಟೆಯಿಂದ ಬಿಡುಗಡೆ ಮಾಡಲಿದ್ದು, ಆನ್ಲೈನ್ ಮುಖಾಂತರ ಖರೀದಿಸಬಹುದಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ದಸರಾ ಗೋಲ್ಡ್ ಕಾರ್ಡ್?

ಮೈಸೂರು ದಸರಾದಲ್ಲಿ ನೀಡುವ ಗೋಲ್ಡ್ ಕಾರ್ಡ್ನಿಂದ ನೀವು ಯಾವುದೇ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಜೊತೆಗೆ ಮೈಸೂರು ಅರಮನೆ ಮುಂದೆ ವಿಐಪಿ ಲಾಂಜ್ನಲ್ಲಿ ಕುಳಿತು ಜಂಬೂ ಸವಾರಿ ಮೆರವಣಿಗೆಯನ್ನು ನೋಡುವ ಅವಕಾಶ ಇದರಲ್ಲಿದೆ. ಇದರ ಬೆಲೆ 6 ಸಾವಿರ ರೂ. ಆಗಿದ್ದು, ದಸರಾದ ಯಾವುದೇ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಪ್ರವೇಶ ಸಿಗಲಿದ್ದು, ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಬಹುದು.

dasara; ಬೆಣ್ಣೆನಗರಿ ಕನ್ನಿಕಾ ಪರಮೇಶ್ವರಿಗೆ ಪ್ರತಿ ದಿನ ವಿಶೇಷ ಅಲಂಕಾರ

ದಸರಾ ಗೋಲ್ಡ್ ಕಾರ್ಡ್ ಪಡೆಯಲು ದರ ಎಷ್ಟು?
• ಗೋಲ್ಡ್ ಕಾರ್ಡ್ ಅನ್ನು ಇಂದು ಬೆಳಿಗ್ಗೆ 10 ರಿಂದ ಬಿಡುಗಡೆ ಮಾಡಿದ್ದು, ಒಂದು ಗೋಲ್ಡ್ ಕಾರ್ಡ್ ಬೆಲೆ 6 ಸಾವಿರ ರೂ. ಗಳಾಗಿದೆ.
• ಅಕ್ಟೋಬರ್ 24 ರಂದು ನಡೆಯುವ ‘ದಸರಾ ಜಂಬೂಸವಾರಿ’ ಮತ್ತು ‘ಪಂಜಿನ ಕವಾಯಿತು’ ವೀಕ್ಷಣೆಗೆ ಟಿಕೆಟ್ಗಳನ್ನು ಇಂದು (ಅ.18) ರ ಬೆಳಗ್ಗೆ 10 ಗಂಟೆಗೆ ಆನ್ಲೈನ್ ಮೂಲಕ ಬಿಡುಗಡೆ ಮಾಡಿದೆ.
• ಅರಮನೆ ಆವರಣದೊಳಗೆ ನಡೆಯುವ ದಸರಾ ಜಂಬೂ ಸವಾರಿ ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆ 3 ಸಾವಿರ ರೂ., ಮತ್ತು 2 ಸಾವಿರ ರೂ.,ಗಳನ್ನು ನಿಗದಿಪಡಿಸಲಾಗಿದೆ.
• ಬನ್ನಿ ಮಂಟಪದಲ್ಲಿ ಪಂಜಿನ ಕವಾಯಿತು ವೀಕ್ಷಣೆಗೆ ಪ್ರತಿ ಟಿಕೆಟ್ ಬೆಲೆ 500 ರೂ. ನಿಗದಿಪಡಿಸಲಾಗಿದೆ.

ದಸರಾ ಗೋಲ್ಡ್ ಕಾರ್ಡ್ ಖರೀದಿ ಹೇಗೆ?
• ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಖರೀದಿಗಾಗಿ https://www.mysoredasara.gov.in/ ವೆಬ್ಸೈಟ್ ಸಂಪರ್ಕಿಸಿ.
• ಖರೀದಿಸುವವರು ಅವರ ಭಾವಚಿತ್ರವಿರುವ ಯಾವುದಾದರೂ ಒಂದು ಐಡಿ ಹಾಜರುಪಡಿಸಿ ಗೋಲ್ಡ್ ಕಾರ್ಡ್ ಟಿಕೆಟ್ ಪಡೆದುಕೊಳ್ಳಬಹುದಾಗಿದೆ.
• ಆನ್ಲೈನ್ ಮೂಲಕ ಗೋಲ್ಡ್ ಕಾರ್ಡ್ ಖರೀದಿಸಿದ ನಂತರ ಅವರ ಮೊಬೈಲಿಗೆ ಎಸ್.ಎಂ.ಎಸ್ ಮತ್ತು ಇ-ಮೇಲ್ ಐಡಿ ಮೂಲಕ ಟಿಕೆಟ್ ಸ್ವೀಕರಿಸುವ ಸ್ಥಳ, ದಿನಾಂಕ, ಸಮಯ ಹಾಗೂ ಇನ್ನಿತರೆ ಮಾಹಿತಿಗಳನ್ನು ಕಳುಹಿಸಲಾಗುವುದು.
• ಗೋಲ್ಡ್ ಕಾರ್ಡ್ ಲಭ್ಯತೆಗೆ ಅನುಗುಣವಾಗಿ ಆನ್ಲೈನ್ ಮೂಲಕ ಅಂದರೆ ವೆಬ್ಸೈಟ್ನಲ್ಲಿ ಮಾತ್ರ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
• ಒಂದು ಬಾರಿಗೆ ಗರಿಷ್ಠ ಎರಡು ಗೋಲ್ಡ್ ಕಾರ್ಡ್ ಮಾತ್ರ ಖರೀದಿಸಬಹುದು.
• ಆನ್ಲೈನ್ ಹೊರತುಪಡಿಸಿ ಇತರೆ ಯಾವುದೇ ರೀತಿಯಲ್ಲಿ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಮಾರಾಟ ಇರುವುದಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟವಾಗಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!