Ardhambardha Premakathe; ಅರ್ಧಂಬರ್ಧ ಪ್ರೇಮಕಥೆ ಹೇಳುತ್ತಿದ್ದಾರೆ ದಿವ್ಯಾ, ಅರವಿಂದ್ ಕೆಪಿ

ಕನ್ನಡ ಕಿರುತೆರೆ, ಸಿನಿಮಾ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿರುವ ನಟಿ ದಿವ್ಯಾ ಉರುಡುಗ ಇದೀಗ ಅರ್ದಂಬರ್ಧ ಪ್ರೇಮಕತೆ (Ardhambardha Premakathe) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಈಗಾಗಲೇ ಟೀಸರ್ ಮತ್ತು ಫಸ್ಟ್ ಲುಕ್ ಮೂಲಕ ಗಮನ ಸೆಳೆಯುತ್ತಿರುವ “ಅರ್ದಂಬರ್ಧ” ಪ್ರೇಮಕಥೆ ಸಿನಿಮಾತಂಡ ಈಗ ಮೊದಲ ಹಾಡಿನ ಮೂಲಕ ಅಭಿಮಾನಿಗಳ ಜೊತೆಯಾಗಿ ವಿಭಿನ್ನ ರೀತಿಯಲ್ಲಿ ಎಂಟ್ರಿಕೊಟ್ಟಿದ್ದಾರೆ….. ‘ಹುಚ್ಚು ಮನಸೇ..’ ಎನ್ನುವ ಸಾಲಿನಿಂದ ಪ್ರಾರಂಭವಾಗುವ ಈ ಹಾಡು ಅಭಿಮಾನಿಗಳಿಂದ ರಿಲೀಸ್ ಆಗಿದ್ದು ವಿಶೇಷ. ಅರ್ದಂಬರ್ಧ ಪ್ರೇಮಕಥೆ ಈಗಾಗಲೇ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿದ್ದು ಸದ್ಯ ಹಾಡಿನ ಮೂಲಕ ಅಭಿಮಾನಿಗಳಲ್ಲಿ ಹುಚ್ಚು ಹಿಡಿಸಿದೆ.

ಇದೀಗ ರಿಲೀಸ್ ಆಗಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ಅವರೇ ಈ ಹಾಡಿಗೆ ಸಾಹಿತ್ಯ ರಚಿಸಿದ್ದು ಗಾಯಕ ವಾಸಕಿ ವೈಭವ್ ಮತ್ತು ಪೃಥ್ವಿ ಭಟ್ ಧ್ವನಿ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದೆ.

title release; ದಾಖಲೆ ಬರೆದ ‘ಕ್ಯಾಪ್ಚರ್’ ಚಿತ್ರದ 60 ಅಡಿ ಎತ್ತರದ ಪೋಸ್ಟರ್

ಅರ್ದಂಬರ್ಧ ಪ್ರೇಮಕಥೆಯ ರೋಮ್ಯಾಂಟಿಕ್ ಹಾಡು ಇದಾಗಿದೆ. ಬಿಗ್ ಬಾಸ್ ಬಳಿಕ ದಿವ್ಯಾ ಮತ್ತು ಅರವಿಂದ್ ತೆರೆ ಮೇಲೆ ಬರುತ್ತಿದ್ದು ಇಬ್ಬರನ್ನು ಒಟ್ಟಿಗೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ತಮ್ಮ ಪ್ರತಿ ಹೆಜ್ಜೆಯಲ್ಲೂ ಸಾತ್ ನೀಡುತ್ತಾ ಬಂದಿರುವಂತಹ ಅಭಿಮಾನಿಗಳಿಗೆ ಈ ಹಾಡನ್ನು ಅರ್ಪಣೆ ಮಾಡಿದ್ದು, ಅಭಿಮಾನಿಗಳಿಂದಲೇ ಹಾಡನ್ನು ಬಿಡುಗಡೆ ಮಾಡಿಸುವ ಮೂಲಕ ವಿಭಿನ್ನ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದೆ ಅರ್ದಂಬರ್ಧ ಪ್ರೇಮಕಥೆ ಚಿತ್ರತಂಡ.

ಅರ್ದಂಬರ್ಧ ಪ್ರೇಮಕಥೆ ಸಿನಿಮಾವನ್ನ ಬಕ್ಸಸ್ ಮಿಡಿಯಾ ಹಾಗೂ ಆರ್ ಎ ಸಿ ವಿಷ್ಯೂಲ್ಸ್ , ಲೈಟ್ ಹೌಸ್ ಮೀಡಿಯಾ ಸಹ ನಿರ್ಮಾಪಕರಾಗಿದ್ದಾರೆ… ಚಿತ್ರಕ್ಕೆ ಸೂರ್ಯ ಕ್ಯಾಮೆರಾ ವರ್ಕ್ ಇದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾ ಗಳನ್ನ ನಿರ್ದೇಶನ ಮಾಡಿ ಸಿನಿಮಾ ಪ್ರೇಮಿಗಳ ಗಮನ ಸೆಳೆದಿರುವ ಅರವಿಂದ್ ಕೌಶಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಸಿನಿಮಾದ ಪ್ರಮೋಷನ್ ಸ್ಟಾರ್ಟ್ ಮಾಡಿರುವ ಚಿತ್ರತಂಡ ಇನ್ನು ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!