ಪಂಪ್‌ಸೆಟ್ ತೆರವು ಕಾರ್ಯಾಚರಣೆ ಅರ್ಥವೇನು?
ದಾವಣಗೆರೆ: ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಾಚರಣೆಯ ಅರ್ಥವಾದರೂ ಏನು? ಎಂದು ಬಿಜೆಪಿ ಮುಖಂಡ ಸತೀಶ್ ಕೊಳೇನಹಳ್ಳಿ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಭದ್ರಾ ನಾಲೆಯಲ್ಲಿ ಅಕ್ರಮ ಪಂಪ್‌ಸೆಟ್ ತೆರವು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಆದರೆ ಇದುವರೆಗೂ ಒಂದೂ ಪಂಪ್‌ಸೆಟ್ ವಶಕ್ಕೆ ಪಡೆದಿಲ್ಲ. ನಾಲೆಯಲ್ಲಿದ್ದ ಪಂಪ್‌ಸೆಟ್ ತೆರವುಗೊಳಿಸಿ ಮತ್ತೆ ರೈತರಿಗೇ ಕೊಟ್ಟು ಬರುತ್ತಾರೆ. ಅಧಿಕಾರಿಗಳು ಹೊರಟ ತಕ್ಷಣ ಮತ್ತೆ ರೈತರು ಪಂಪ್‌ಸೆಟ್ ಅಳವಡಿಸಿಕೊಳ್ಳುತ್ತಿದ್ದಾರೆ. ಇದು ತೆರವು ಕಾರ್ಯಾಚರಣೆಯೇ? ಎಂದು ಅಸಮಾಧಾನ ಹೊರ ಹಾಕಿದರು.
ಅಕ್ರಮವಾಗಿ ವಿದ್ಯುತ್ ಬಳಸಿಕೊಳ್ಳುವುದು ಹಾಗೂ ಅಕ್ರಮವಾಗಿ ನೀರು ಬಳಕೆ ಮಾಡುವುದು ಎರಡೂ ಅಪರಾಧ. ಆದರೆ ಅಕ್ರಮ ಪ್‌ಸೆಟ್ ಅಳವಡಿಸಿ ವಿದ್ಯುತ್ ಹಾಗೂ ನೀರು ಬಳಕೆ ಮಾಡಿಕೊಳ್ಳುವ ಯಾರೊಬ್ಬರ ಮೇಲೂ ಇಲ್ಲಿಯವರೆಗೆ ಕೇಸು ದಾಖಲಿಸಿಲ್ಲ ಎಂದು ಸತೀಶ್ ಆರೋಪಿಸಿದ್ದಾರೆ.