ದುರ್ಗಾಂಭಿಕಾ ಧರ್ಮದರ್ಶಿ ಜೆ ಕೆ ಕೋಟ್ರಬಸಪ್ಪ ನಿಧನ

ನಿಧನ

ದಾವಣಗೆರೆ : ಜೋಗಪ್ಪನವರ ಕೋಟ್ರಬಸಪ್ಪನವರು (75) ಅನಾರೋಗ್ಯದಿಂದ ಇಂದು ಸಂಜೆ ನಿಧನರಾಗಿದ್ದಾರೆ. ದಾವಣಗೆರೆಯ ಹೊಂಡದ ರಸ್ತೆಯ ಜೋಗಪ್ಪನವರ ದಿ. ಕಾಡಪ್ಪನವರ ದ್ವೀತಿಯ ಸುಪುತ್ರ, ಹಾಗೂ ನಗರಸಭೆ ಮಾಜಿ ಸದಸ್ಯರು ಹಾಲಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಯಾಗಿ ಮತ್ತು ನಗರದ ಶ್ರೀ ಬೀರಲಿಂಗೇಶ್ವರ ಮೈದಾನ ಹೋರಾಟ ಸಮಿತಿ ಕಾರ್ಯದರ್ಶಿಯಾಗಿ ಜೆ ಕೆ ಕೋಟ್ರಬಸಪ್ಪ ಕಾರ್ಯನಿರ್ವಾಹಿಸುತ್ತಿದ್ದರು. ಮೃತರು, ನಾಲ್ವರು ಸಹೋದರರು, ಸಹೋದರಿ, ಹಾಗೂ ಪತ್ನಿ ಪುತ್ರ ಇಬ್ಬರೂ ಪುತ್ರಿಯರು, ಜೋಗಪ್ಪನವರ ಕುಟುಂಬಸ್ಥರು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ನಾಳೆ ಬೆಳಗ್ಗೆ 12:30 ವರೆಗೆ ದಾವಣಗೆರೆ ನಗರದ ಮೃತರ ಮನೆಯಲ್ಲಿ ಅಂತಿಮ ದರ್ಶನಕ್ಕೆ ‌ವ್ಯವಸ್ಥೆ ಮಾಡಲಾಗಿದೆ. ನಂತರ ಇವರ ದೇಹವನ್ನು ಜೆಜೆಎಂ ಮೆಡಿಕಲ್ ಕಾಲೇಜಿಗೆ ದೇಹ ದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!