ಉಸ್ತುವಾರಿ ಸಚಿವರಿಗೆ ದೂರ ದೃಷ್ಟಿ ಇಲ್ಲ: ಬಿ.ಎಂ. ಸತೀಶ್
ದಾವಣಗೆರೆ: ಜಿಲ್ಲೆಯ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ದೂರ ದೃಷ್ಟಿಯ ಕೊರತೆ ಇದೆ ಎಂದು ಬಿಜೆಪಿ ಮುಖಂಡರೂ, ರೈತರ ಮುಖಂಡರೂ ಆದ ಕೊಳೇನಹಳ್ಳಿ ಬಿ.ಎಂ. ಸತೀಸ್ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ನಾಲೆಗೆ ಕನಿಷ್ಟ 20ದಿನ ನೀರು ಹರಿಸುವಂತೆ ಕ್ರಮ ಕೈಗೊಳ್ಳಲು ಸಚಿವರು ವಿಫಲರಾಗಿದ್ದಾರೆ ಎಂದರು.
ಐಸಿಸಿ ಅಧ್ಯಕ್ಷ ಮಧು ಬಂಗಾರಪ್ಪ ಹಾಗೂ ಸಚಿವ ಮಲ್ಲಿಕಾರ್ಜುನ್ ಅವರ ನಡುವೆ ವೈ ಮನಸ್ಸು ಇರುವ ಅನುಮಾನವಿದೆ. ಇದರಿಂದಲೇ ಸಚಿವರು ಐಸಿಸಿ ಸಭೆಗೆ ಗೈರು ಹಾಜರಾಗಿರಬಹುದು ಎಂದರು.
ಇನ್ನು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಭದ್ರಾ ನಾಲೆ ಹಾಗೂ ನೀರಿನ ಅಗತ್ಯತೆ ಕುರಿತ ಸಮರ್ಪಕ ಮಾಹಿತಿ ಕೊರತೆ ಇದೆ. ಇತ್ತೀಚೆಗೆ ನಡೆದ ಐಸಿಸಿ ಸಭೆಯಲ್ಲಿ ಜಿಲ್ಲೆಯ ವಾಸ್ತವಾಂಶ ಮಂಡಿಸುವಲ್ಲಿ ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸತೀಶ್ ಆರೋಪಿಸಿದರು.
ಈಗಲೇ ಜಿಲ್ಲೆಯಲ್ಲಿ ನೀರಿನ ಅಭಾವ ತಲೆ ದೋರಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ. ಇದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದರು.
ರೈತ ಮುಖಂಡರುಗಳಾದ ಕೆ.ಬಿ. ಕೊಟ್ರೇಶ್, ತೋಳಹುಣಸೆ ಮಂಜಾನಾಯ್ಕ, ಅನಿಲ್ ಕುಮಾರ್, ಆರನೆಕಲ್ಲು ವಿಜಯಕುಮಾರ್, ಬೇೂರು ಬಸವರಾಜ್, ಶಿರಮಗೊಂಡನಹಳ್ಳಿ ಮಂಜುನಾಥ್ ಎ.ಎಂ., ತ್ಯಾವಣಿಗೆ ಕೃಷ್ಣಮೂರ್ತಿ, ವಿಸ್ವಾಸ್ ಪತ್ರಿಕಾಗೋಷ್ಠಿಯಲ್ಲಿದ್ದರು.