ಎಂಪಿ ಎಲೆಕ್ಷನ್ : ಬಿಜೆಪಿಯ ಮೊದಲ ಪಟ್ಟಿ ರೀಲೀಸ್

ಎಂಪಿ ಎಲೆಕ್ಷನ್

ಬೆಂಗಳೂರು: 2024ರಂದು ನಡೆಯಲಿರುವ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ.
ನವದೆಹಲಿಯ ಪಕ್ಷದ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದರು.
195 ಕ್ಷೇತ್ರಗಳಿಗೆ ತನ್ನ ಸ್ಪರ್ಧಿಗಳನ್ನು ಬಿಜೆಪಿ ಘೋಷಣೆ ಮಾಡಿದೆ. ಇದರಲ್ಲಿ 28 ಮಹಿಳೆಯರಿಗೆ ಟಿಕೆಟ್ ಸಿಕ್ಕಿರುವುದು ಗಮನ ಸೆಳೆದಿದೆ. 34 ಕೇಂದ್ರ ಸಚಿವರಿಗೆ ಟಿಕೆಟ್ ಲಭಿಸಿದೆ. 47 ಹೊಸ ಮುಖಗಳಿಗೆ ಮನ್ನಣೆ ನೀಡಲಾಗಿದೆ. ಇಬ್ಬರು ಮಾಜಿ ಸಿಎಂಗಳಿಗೆ ಲೋಕಸಭೆಗೆ ಸ್ಪರ್ಧಿಸಲು ಹಸಿರು ನಿಶಾನೆ ತೋರಿಸಲಾಗಿದೆ.
ಪಟ್ಟಿಯ ಪ್ರಕಾರ ವಾರಾಣಸಿಯಿಂದ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಗುಜರಾತ್‌ನ ಗಾಂಧಿನಗರದಿಂದ ಗೃಹ ಸಚಿವ ಅಮಿತ್ ಶಾ ಅವರು ಸ್ಪರ್ಧಿಸಲಿದ್ದಾರೆ. ರಾಜನಾಥ್ ಸಿಂಗ್ ಲಖನೌದಿಂದ ಸ್ಪರ್ಧಿಸಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಬರೋಬ್ಬರಿ 51 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ. ಹಲವು ನಾಯಕರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕಿದೆ. ಮುಂದಿನ ವಾರದಲ್ಲಿ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡುವ ಸಂಭವ ಇದೆ.
ಆದರೆ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವ ಕ್ಷೇತ್ರಗಳಿಗೂ ಬಿಜೆಪಿ ಟಿಕೆಟ್ ಘೋಷಣೆಯಾಗಿಲ್ಲ. ರಾಜ್ಯಸಭೆ ಸದಸ್ಯರಾಗಿದ್ದ ರಾಜೀವ್ ಚಂದ್ರಶೇಖರ್ ಅವರಿಗೆ ತಿರುವನಂತಪುರಂ ಲೋಕಸಭೆ ಟಿಕೆಟ್ ನೀಡಲಾಗಿದೆ.
ಯಾವ ರಾಜ್ಯದಲ್ಲಿ ಎಷ್ಟು ಹುರಿಯಾಳುಗಳ ಘೋಷಣೆ: ಇಲ್ಲಿದೆ ನೋಡಿ ವಿವರ:
ಉತ್ತರ ಪ್ರದೇಶ 51
ಪಶ್ಚಿಮ ಬಂಗಾಳ 20
ಮಧ್ಯಪ್ರದೇಶ 24
ಗುಜರಾತ್ 15
ರಾಜಸ್ಥಾನ 15
ಕೇರಳ 12
ತೆಲಂಗಾಣ 9
ಅಸ್ಸಾಂ 11
ಜಾರ್ಖಂಡ್ 11
ಚತ್ತೀಸಗಢ 11
ದೆಹಲಿ 5
ಜಮ್ಮು ಮತ್ತು ಕಾಶ್ಮೀರ 2
ಉತ್ತರಾಖಂಡ 3
ಅಂಡಮಾನ್ ನಿಕೋಬಾರ್ 1
ಡಮನ್ ಮತ್ತು ಡಿಯೂ 1
ಅರುಣಾಚಲಪ್ರದೇಶ 2
ಗೋವಾ 1
ತ್ರಿಪುರಾ 1

Leave a Reply

Your email address will not be published. Required fields are marked *

error: Content is protected !!