ಕಾಲೇಜು ಪ್ರಾಂಶುಪಲರೊಂದಿಗೆ ಎಸ್ಪಿ ಸಭೆ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದ ಉಮಾ ಪ್ರಶಾಂತ್

ಕಾಲೇಜು

ದಾವಣಗೆರೆ: ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಕಛೇರಿ ಸಭಾಂಗಣದಲ್ಲಿ ದಾವಣಗೆರೆ ನಗರದ ಎಲ್ಲಾ ಪಿಯು ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರುಗಳೊಂದಿಗೆ ಸಭೆ ನಡೆಸಿ ಅವರುಗಳ ಅಹವಾಲುಗಳನ್ನು ಆಲಿಸಿದರು ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಪಿಯು ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರುಗಳು ಕಾಲೇಜು ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.
ಪೊಲೀಸ್ ತುರ್ತು ಸೇವೆಗಾಗಿ ತುರ್ತು ಸಹಾಯವಾಣಿ 112 ಇದ್ದು, ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗಾಗಿ 112 ಗೆ ಕರೆ ಮಾಡಲು ತಿಳಿಸಿದರು. ಅಗತ್ಯವಿದ್ದರೆ ನೇರವಾಗಿ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಲು ತಿಳಿಸಿದರು.
ದಾವಣಗೆರೆ ನಗರದಲ್ಲಿ ತುರ್ತು ಸೇವೆಗಾಗಿ `ದಾವಣಗೆರೆ ಸುರಕ್ಷಾ’ ಆಪ್ ಅನ್ನು ಜಾರಿಗೆ ತಂದಿದ್ದು, ನಗರದ ವ್ಯಾಪ್ತಿಯಲ್ಲಿ ಯಾವುದೇ ಆಪತ್ತಿನ ಸಮಯದಲ್ಲಿ ಹಾಗೂ ಇತರೆ ತುರ್ತು ಸೇವೆಗೆ ಬಳಸಬಹುದಾಗಿರುತ್ತದೆ.
ಪ್ರಾಂಶುಪಾಲರುಗಳು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗಾವಹಿಸುವುದು ಹಾಗು ವಿದ್ಯಾರ್ಥಿಗಳ ಪೋಷಕರೊಂದಿಗೆ ಸಭೆ ನಡೆಸಿ ತಮ್ಮ ಮಕ್ಕಳ ನಡೆ ನುಡಿಗಳ ಬಗ್ಗೆ ಅವರುಗಳ ಅಭ್ಯಸಗಳ ಬಗ್ಗೆ ನಿಗಾವಹಿಸುವಂತೆ ಸೂಕ್ತ ತಿಳುವಳಿಕೆ ನೀಡಲು ತಿಳಿಸಿದರು.

ಕಾಲೇಜು
ಕಾಲೇಜು ಆವರಣದಲ್ಲಿ/ಕ್ಯಾಂಪಸ್ಗಳಲ್ಲಿ ಅನಾವಶ್ಯಕವಾಗಿ ಹೊರಗಿನ ವ್ಯಕ್ತಿಗಳಿಗೆ ಪ್ರವೇಶಿಸದಂತೆ ಗಮನಹರಿಸಿಬೇಕು, ಈ ಬಗ್ಗೆ ಪ್ರಾಂಶುಪಾಲರುಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು ತಮ್ಮ ತಮ್ಮ ಕಾಲೇಜುಗಳಲ್ಲಿನ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ ರವರು, ನಗರ ಡಿವೈಎಸ್ಪಿ ರವರಾದ ಶ್ರೀ ಮಲ್ಲೇಶ್ ದೊಡ್ಮನಿ ರವರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ದಾವಣಗೆರೆ ನಗರದ ಎಲ್ಲಾ ಪಿಯು ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!