ಶಿಕ್ಷಣ ಜೊತೆ ಮಾನವೀಯ, ನೈತಿಕ ಮೌಲ್ಯಗಳು ಅತ್ಯಾವಶಕ: ಕೆ. ಎಂ ಸುರೇಶ್
ದಾವಣಗೆರೆ : ಯಾವುದೇ ಕೆಲಸವನ್ನು ಮಾಡಿದರೂ ಶ್ರದ್ದೆ ಇರಬೇಕು. ಹಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ವಿದ್ಯಾಲಯ ಗೌರವ ಕಾರ್ಯದರ್ಶಿಗಳಾದ ಕೆ. ಎಂ ಸುರೇಶ್ ತಿಳಿಸಿದರು. ಗೋಣಿವಾಡ ಬಳಿ ಶ್ರೀ ಸೋಮೇಶ್ವರ ವಸತಿ ಶಾಲೆ ನಡೆದ ಶಾರದ ಪೂಜೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದರು. ಶ್ರದ್ದೆ ಮತ್ತು ಭಕ್ತಿ ಯಶಸ್ಸಿನ ಕೀಲಿ ಕೈಗಳಿದ್ದಂತೆ ಮಾಡುವ ಕೆಲಸ ನಮಗೆ ತೃಪ್ತಿ ತರಬೇಕು ಎಂದರು. ವಿದ್ಯಾರ್ಥಿಗಳ ಜೀವನ ಮತ್ತೆ ಸಿಗುವುದಿಲ್ಲ ಹೀಗಾಗಿ ತಾವೆಲ್ಲರೂ ಚನ್ನಾಗಿ ಓದಿ ಉತ್ತಮ ಅಂಕ ಪಡೆದು ಶಾಲೆಗೆ ಹಾಗೂ ತಂದೆ ತಾಯಿಗಳಿಗೆ ಉತ್ತಮ ಹೆಸರು ತರಬೇಕೆಂದು ತಿಳಿಸಿದರು. ಇದೇವೇಳೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.ಬಹುಮಾನ ಪುರಸ್ಕಾರ ನೀಡಿದ ಶಾಲೆಯ ಹಿತೈಷಿಗಳಾದ ಪರಮೇಶ್ವರಪ್ಪ ರವರು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆದಾಗ ಮಾತ್ರ ಉನ್ನತಸ್ಥಾನವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ವೀಣಾ, ಒಲಂಪಿಯಾಡ್ ಸ್ಕೂಲ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗೂ ನಮ್ಮ ಶಾಲೆಯ ಮಕ್ಕಳು, ಶಿಕ್ಷಕವೃಂದ,ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.