ಗೇಟ್ ಬಿದ್ದು ಆಟವಾಡುತ್ತಿದ್ದ ಬಾಲಕ ಸಾವು.

ದಾವಣಗೆರೆ :ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 21ನೆಯ ವಾರ್ಡ್ ನ ಬಸಾಪುರ ಗ್ರಾಮದಲ್ಲಿ ಇಂದು ರಾತ್ರಿ ಮನೆಯ ಕಾಂಪೌಂಡ್ ಗೇಟ್ ಮುರಿದು ಬಿದ್ದು 11 ವರ್ಷದ ನಾಗಾರ್ಜುನ ಎಂಬ ಬಾಲಕ ಅಸುನೀಗಿದ್ದಾರೆ.
ಮಳೆಯಿಂದ ಶಿಥಿಲ ಗೊಂಡಿದ್ದ ಕಾಂಪೌಂಡ್ ಗೇಟ್ ಬಾಲಕನ ಬಲಿ ತೆಗೆದುಕೊಂಡಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು ನಾಳೆ 12ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಬಾಲಕ ಇಂದು ವಿಧಿಯಾಟಕ್ಕೆ ಬಲಿಯಾಗಿದ್ದು ಮಾತ್ರ ಶೋಚನೀಯ ಎಂದು ಕೆ.ಎಲ್.ಹರೀಶ್ ಬೇಸರ ವ್ಯಕ್ತಪಡಿಸಿದರು.