ಲೋಕಲ್ ಸುದ್ದಿ

24 ಗಂಟೆಯಲ್ಲೇ ಕಿಡ್ನಾಪ್ ಕೇಸ್ ಬೇಧಿಸಿ, ವ್ಯಕ್ತಿಯನ್ನು ರಕ್ಷಿಸಿದ ದಾವಣಗೆರೆ ಕಾಪ್ಸ್: ಐವರ ಬಂಧನ

24 ಗಂಟೆಯಲ್ಲೇ ಕಿಡ್ನಾಪ್ ಕೇಸ್ ಬೇಧಿಸಿ, ವ್ಯಕ್ತಿಯನ್ನು ರಕ್ಷಿಸಿದ ದಾವಣಗೆರೆ ಕಾಪ್ಸ್: ಐವರ ಬಂಧನ

ದಾವಣಗೆರೆ: ಇಲ್ಲಿನ ಗುರುವಾರ ಮಧ್ಯಾಹ್ನ ಶೇಖರಪ್ಪ ಗೋಡನ್ ಎದುರಿಗೆ ಅಂಬಿಕಾ ನಗರದಲ್ಲಿ ಲೋಕೇಶ್ (60) ಅವರನ್ನು ಅಪಹರಿಸಿ, 20 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟ ಬಗ್ಗೆ ಲೋಕೇಶ್ ಅವರ ಪುತ್ರ ನಾಗರಾಜ್ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಈ ಅಪಹರಣ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಬೇಧಿಸಿರುವ ನಗರದ ಪೊಲೀಸರು, ಐವರನ್ನು ಬಂಧಿಸಿದ್ದಾರೆ. ಜೊತೆಗೆ ಅಪಹರಣಕ್ಕೊಳಗಾದ ಲೋಕೇಶ್ ಅವರನ್ನು ರಕ್ಷಿಸಿದ್ದು ಕೃತ್ಯಕ್ಕೆ ಬಳಸಿದ ಇಟಿಯಾಸ್ ಕಾರು ಹಾಗೂ ಯಮಹಾ ಬೈಕ್ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ನಡೆಸಿದ ಪೊಲೀಸರು ಆರೋಪಿಗಳಾದ ನಿಟುವಳ್ಳಿಯ ಸಾಗರ್ (23), ನಂದಿಹಳ್ಳಿ ಗ್ರಾಮದ ಯುವರಾಜ (30) ಸುಂದರ್‌ ನಾಯ್ಕ (21) ದಾವಣಗೆರೆಯ ಚೇತನ್ ಕುಮಾರ್ (27) ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ಐವರನ್ನು ಚನ್ನಗಿರಿ ತಾಲ್ಲೂಕು ಅಂತಪುರ ಗ್ರಾಮದ ಬಳಿ ದಸ್ತಗಿರಿ ಮಾಡಿದ್ದು, ತನಿಖೆ ಮುಂದುವರೆಸಿದ್ದಾರೆ.

24 ಗಂಟೆಯಲ್ಲೇ ಕಿಡ್ನಾಪ್ ಕೇಸ್ ಬೇಧಿಸಿ, ವ್ಯಕ್ತಿಯನ್ನು ರಕ್ಷಿಸಿದ ದಾವಣಗೆರೆ ಕಾಪ್ಸ್: ಐವರ ಬಂಧನ

ಆರೋಪಿತರ ಪತ್ತೆ ಹಾಗೂ ಅಪಹರಣಕ್ಕೊಳಗಾದ ವ್ಯಕ್ತಿಯ ರಕ್ಷಣೆ ಕಾರ್ಯದಲ್ಲಿ ಯಶಸ್ವಿಯಾದ ಕೆಟಿಜೆ ನಗರ ಪೊಲೀಸ್ ನಿರೀಕ್ಷಕರಾದ ಯು.ಜೆ.ಶಶಿಧರ್, ಸಂಚಾರ ವೃತ್ತ ನಿರೀಕ್ಷಕ ಅನಿಲ್, ಬಸವನಗರ ಪೊಲೀಸ್ ನಿರೀಕ್ಷಕ ಅರ್.ಆರ್.ಪಾಟೀಲ್, ಚನ್ನಗಿರಿ ಪೊಲೀಸ್ ನಿರೀಕ್ಷಕ ಮಧು, ಸಂತೇಬೆನ್ನುರು ಪೊಲೀಸ್ ನಿರೀಕ್ಷಕ ಮಹೇಶ್ ನೇತೃತ್ವದಲ್ಲಿ ಕೆಟಿಜೆ ನಗರ ಪಿಎಸ್‌ಐ ಎಸ್.ಆರ್.ಕಾಟೇ ಹಾಗೂ ಸಿಬ್ಬಂದಿಗಳಾದ ಪ್ರಕಾಶ್, ಶಂಕರ್ ಜಾದವ್, ಮಂಜಪ್ಪ, ಷಣ್ಮುಖ, ರವಿ ಲಮಾಣಿ, ಶಿವರಾಜ್, ಮಂಜನಗೌಡ, ಬಿ.ಆರ್.ರವಿ, ಬಸವರಾಜ್, ಹರೀಶ್ ನಾಯ್ಕ್, ತಿಮ್ಮಣ್ಣ ಎನ್.ಆರ್., ಶ್ರೀನಿವಾಸ್, ರಾಘವೇಂದ್ರ, ಶಾಂತರಾಜ್, ಡಿಸಿಐಬಿ ಘಟಕದ ಸಿಬ್ಬಂದಿಗಳಾದ ಬಾಲಜಿ, ರಾಘವೇಂದ್ರ, ರಮೇಶ್, ಮಜೀದ್ ಕೆ.ಸಿ., ನಟರಾಜ್, ಮಲ್ಲಿಕಾರ್ಜುನ, ಮಾರುತಿ, ಅಶೋಕ, ಅಂಜನೇಯ, ಸುರೇಶ್‌ ಅವರುಗಳನ್ನು ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ ಶ್ಲಾಘಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top