ಬಾಡಾ ಕ್ರಾಸ್ ಬಳಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಮೂವರ ಬಂಧನ

ಬಾಡಾ ಕ್ರಾಸ್ ಬಳಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಮೂವರ ಬಂಧನ

ದಾವಣಗೆರೆ: ಆವರಗೆರೆಯಿಂದ ಬಾಡಾ ಕ್ರಾಸ್ ಅಂಡರ್ ಬ್ರಿಡ್ಜ್ ಕಡೆಗೆ ಹೋಗುವ ಸರ್ವೀಸ್ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯಿಂದ ಮೊಬೈಬ್ ಹಾಗೂ ನಗದು ಸುಲಿಗೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹೆಚ್.ಸಿ ಸಂದೀಪ್ (24) ಐಗೂರು ಗ್ರಾಮ. ಪ್ರವೀಣ್ ಕುಮಾರ್ (34) ದೇವರಾಜ ಅರಸ್ ಬಡಾವಣೆ, ‘ಬಿ’ ಬ್ಲಾಕ್. ಅವಿನಾಶ. ಎ (30) ಡೆಂಟಲ್ ಕಾಲೇಜ್ ರಸ್ತೆ, ಎಂಸಿಸಿ ‘ಬಿ’ ಬ್ಲಾಕ್ ದಾವಣಗೆರೆ. ಇವರು ಬಂಧಿತರು.

ಬಂಧಿತ ಆರೋಪಿಗಳಿಂದ ಸುಲಗೆ ಮಾಡಲಾಗಿದ್ದ 10 ಸಾವಿರ ರೂ. ಮೌಲ್ಯದ ಇನ್ಫಿನಿಟಿ ಮೊಬೈಲ್, 200 ನಗದು ಹಾಗೂ ಮತ್ತೊಂದು ಸ್ಥಳದಲ್ಲಿ ಕಿತ್ತುಕೊಂಡು ಹೋಗಿದ್ದ 10 ಸಾವಿರ ಬೆಲೆಯ ವಿಮೋ ಕಂಪನಿ ಮೊಬೈಲ್, ಕೃತ್ಯಕ್ಕೆ ಉಪಯೋಗಿಸಿದ 10 ಸಾವಿರ ರೂ. ಮೌಲ್ಯದ ವಿಮೋ ಮೊಬೈಲ್, ಡಿಯೋ ಸ್ಕೂಟರ್, ಪ್ಯಾಸೆಂಡರ್ ಆಟೋ ಸೇರಿ ಒಟ್ಟು 1.70 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾತ್ರಿ 8 ಗಂಟೆ ಸಮಯದಲ್ಲಿ ಬಾಡಾ ಕ್ರಾಸ್ ಬಳಿಯ ಸರ್ವೀರ್ ರಸ್ತೆಯಲ್ಲಿ ಯಾರೋ ಮೂವರು ವ್ಯಕ್ತಿಗಳು ಮೊಬೈಲ್ ಹಾಗೂ 500 ರೂ. ಹಣ ಸುಲಿಗೆ ಮಾಡಿಕೊಂಡು ಹೋದ ಬಗ್ಗೆ ಸಂಜು ಎಂಬುವವರು ಕಳೆದ ಮೇ 31ರಂದು ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!