ಚೀಲೂರು ಬಳಿಯ ಮರ್ಡರ್ ಕೇಸ್ನಲ್ಲಿ ಕಾಗೇರಿ ಜೊತೆಗಿದ್ದ ರೌಡಿ ಶೀಟರ್ ಭಾಗಿ
ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಚೀಲೂರು ಬಳಿಯ ಗೋವಿನ ಕೋವಿ ಬಳಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಪಿ ಸಿ.ಬಿ.ರಿಷ್ಯಂತ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೊಲೆ ಮಾಡಿದ ಪ್ರಮುಖ ಇಬ್ಬರು ಬೆಂಗಳೂರಿನಲ್ಲಿ ಪೊಲೀಸ್ ಠಾಣೆಯಲ್ಲಿ ಸರೆಂಡರ್ ಆಗಿದ್ದಾರೆ. ಕೊನೆ ಮಾಡಿದ ಫಯಾಜ್, ರಮೇಶ್ ಅವರನ್ನು ಕೋರ್ಟ್‌ಗೆ ಒಪ್ಪಿಸಲಾಗಿದೆ. ಮೇಲ್ನೋಟಕ್ಕೆ ಅವರು ಆರೋಪಿಗಳು ಎಂದು ತಿಳಿದು ಬಂದಿದೆ. ಇವರು ಮೊದಲು ಮಾರುತಿ 800 ಕಾರ್‍ನಲ್ಲಿ ಬರುತ್ತಾರೆ ನಂತರ ಅಂಬುಲೆನ್ಸ್ ನಲ್ಲಿ ಒಟ್ಟಾಗಿ ಸೇರುತ್ತಾರೆ ಕೊಲೆ ಮಾಡುತ್ತಾರೆ. ಅಷ್ಟರಲ್ಲಿ ಪತ್ರಕರ್ತರು ವಿಡಿಯೋ ಮಾಡುತ್ತಾರೆ. ಶಿಗ್ಗಾವಿಯಲ್ಲಿ ನಾಲ್ವರು ಸರೆಂಡರ್ ಆಗುತ್ತಾರೆ. ಕೊಲೆ ಮಾಡಿದ್ದ ಆರೋಪಿಗಳನ್ನ ಆಂಬ್ಯೂಲೆನ್ಸ್ ನಲ್ಲಿ ಡ್ರೈವರ್ ಆಗಿದ್ದ ಫಯಾಜ್ ಶಿರಸಿ ಮೂಲದ ರೌಡಿ ಶೀಟರ್ ಎಂದು ಮಾಹಿತಿ ನೀಡಿದರು.