ಕಾರು-ಬೈಕ್ ಡಿಕ್ಕಿ: ರಂಭಾಪುರಿ ಶ್ರೀ ಅಪಾಯದಿಂದ ಪಾರು

ಹರಪನಹಳ್ಳಿ : ಕಾರು ಹಾಗೂ ಬೈಕ್ ನಡುವೆ ಶನಿವಾರ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕಾರಿನಲ್ಲಿದ್ದ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಪಾಯದಿಂದ ಪಾರಾಗಿದ್ದಾರೆ.
ಶಿವಮೊಗ್ಗ – ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿ ಹರಿಹರದಿಂದ– ಹರಪನಹಳ್ಳಿ ಕಡೆಗೆ ರಂಭಾಪುರಿ ಶ್ರೀ ಅವರ ಕೆಎ 35, ಎಂಜೆ 1008 ನಂಬರಿನ ಕಾರು ಚಲಿಸುತ್ತಿತ್ತು.
ಚಿರಸ್ತಹಳ್ಳಿಯ ತಿರುವಿನಲ್ಲಿ ಎದುರಿಗೆ ಬಂದ ಕೆಎ17 ಎಸ್ 299 ನಂಬರಿನ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ಹಾಗೂ ಬೈಕಿಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.