ಕೊಲೆ ಪ್ರಕರಣದ ಆರೋಪಿ ಬಂಧನ

ಕೊಲೆ ಪ್ರಕರಣದ ಆರೋಪಿ ಬಂಧನ
ದಾವಣಗೆರೆ : ಕಳೆದ ಫೆ.27ರಂದು ನಗರ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಬಸಪ್ಪ ನಗರದ ಹತ್ತಿರ ನಡೆದಿದೆ ಎನ್ನಲಾದ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ರಾಕೇಶ್ (25) ಎಂಬುವವನನ್ನು ಬಂಧಿಸಿದ್ದಾರೆ.
ಕಣ್ಣೂರು ಬಸಪ್ಪ ನಗರದ ರಾಕೇಶ್ ಟೈಲ್ಸ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಆಜಾದ್ ನಗರ ವೃತ್ತದ ರಾಜಶೇಖರ್.ಎಲ್, ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯ ಪಿ.ಎಸ್.ಐ ಅಕ್ಟರ್ ಮುಲ್ಲಾ, ಶ್ರೀಮತಿ ರುಕ್ಕಮ್ಮ ಸಿಬ್ಬಂದಿಯವರಾದ ನಿಜಲಿಂಗಪ್ಪ, ದ್ಯಾಮೇಶ್, ವಿರೇಶ್, ವೆಂಕಟೇಶ್, ಗಂಗಣ್ಣ, ನವೀನ್ ಮಲ್ಲನಗೌಡ, ಗುಗ್ಗರಿ ಲೋಕೇಶ್, ಕುಮಾರ್ ನಾಯ್ಕ ಮತ್ತು ಜೀಪ್ ಚಾಲಕ ನಾಗರಾಜ ರವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಶ್ಲಾಘಿಸಿದ್ದಾರೆ.