ದಾವಣಗೆರೆಯಲ್ಲಿ ಯುವಕನ ಕೊಲೆ

ದಾವಣಗೆರೆಯಲ್ಲಿ ಯುವಕನ ಕೊಲೆ

ದಾವಣಗೆರೆ: ಇಲ್ಲಿನ ಕಬ್ಬೂರು ಬಸಪ್ಪ ನಗರದಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ. ಪ್ರಶಾಂತ (29) ಕೊಲೆಯಾದವರು.

ಕಟ್ಟಿಗೆಯಿಂದ ತಲೆಗೆ ಹೊಡೆದಿದ್ದರಿಂದ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಪ್ರಶಾಂತ ಮೃತಪಟ್ಟಿದ್ದು, ಕಬ್ಬೂರು ಬಸಪ್ಪ ನಗರದ ಎಲವಟ್ಟಿ ರೈಸ್ ಮಿಲ್ ಬಳಿ ಪ್ರಶಾಂತ್ ಶವ ಪತ್ತೆ‌ಯಾಗಿದೆ. ವೈಷಮ್ಯದ ಕಾರಣದಿಂದ ಕೊಲೆ ನಡೆದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಘಟನಾ ಸ್ಥಳಕ್ಕೆ  ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಭೇಟಿ ಪರಿಶೀಲನೆ ನಡೆಸಿದ್ದಾರೆ. ಆರ್ ಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!