ಶ್ರೀಬೀರಲಿಂಗೇಶ್ವರ ದೇವಸ್ಥಾಸವನ್ನು ಸಮಾಜಕ್ಕೆ ನೀಡಲು ಅಗ್ರಹ , ಮನವಿ

ದಾವಣಗೆರೆ: ನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನವನ್ನು ಇಲಾಖೆಯ ವ್ಯಾಪ್ತಿಯಿಂದ ಬೇರ್ಪಡಿಸಿ ಸಮಾಜದ ಸಮಿತಿಗೆ ಬಿಟ್ಟು ಕೊಡುವಂತೆ ರಾಜ್ಯ ಸರ್ಕಾರಕ್ಕೆ ಅಗತ್ಯ ಶಿಫಾರಸ್ಸು ಮಾಡಬೇಕು ಎಂದು ದಾವಣಗೆರೆ ಜಿಲ್ಲೆಯ ಕುರುಬ ಸಮುದಾಯದ ನಿಯೋಗ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಈ ವೇಳೆ ಕುರುಬ ಸಮಾಜದ ಹಿರಿಯ ಮುಖಂಡ ಬಿ.ಹೆಚ್.ಪರಶುರಾಮಪ್ಪ ಮಾತನಾಡಿ , ದೇವಸ್ಥಾನಕ್ಕೆ ಈ ಹಿಂದೆ ಅರ್ಚಕರಾಗಿದ್ದ ಲಿಂಗೇಶ್ ಎಂಬುವರು ಪೂಜಾ ವಿಧಿ ವಿಧಾನಗಳನ್ನು ಸಮರ್ಪಕವಾಗಿ ನೆರೆವೇರಿಸುತ್ತಿಲ್ಲ. ಅಲ್ಲದೇ ದೇವಸ್ಥಾನದ ಆಸ್ತಿಯಲ್ಲಿ ನನ್ನ ಪಾಲು ಇದೆ ಎಂದು ಹೇಳಿ ಕೊಳ್ಳುತ್ತಿದ್ದ ಕಾರಣ ಅರ್ಚಕರ ಹುದ್ದೆಯಿಂದ ವಜಾ ಮಾಡಬೇಕು ಎಂದು ಸಮಾಜದ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಅನ್ವಯ ಅಂದಿನ ಡಿಸಿ ಮಹಾಂತೇಶ್ ಬೀಳಗಿ ಅರ್ಚಕರನ್ನು ವಜಾ ಮಾಡಿ ಆದೇಶಿಸಿದ್ದರು.
ಆದರೆ, ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಅವರು ಆದೇಶವನ್ನು ರದ್ದುಗೊಳಿಸಿದ್ದು , ಸಮಾಜದ ಭಕ್ತರಲ್ಲಿ ಗೊಂದಲ ಉಂಟಾಗಿದೆ. ಕಾರಣ ಹಾಲಿ ಅರ್ಚಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಈಶ್ವರ್ ಪೂಜಾರಿ ಅವರನ್ನೇ ಅರ್ಚಕರನ್ನಾಗಿ ಮುಂದುವರೆಸಬೇಕೆAದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುರುಬ ಸಮುದಾಯ ಮುಖಂಡರಾದ ಬಿ.ಎಂ.ಸತೀಶ್, ಜೆ.ಕೆ.ಕೊಟ್ರಬsಸಪ್ಪ , ಬಳ್ಳಾರಿ ಷಣ್ಮುಖಪ್ಪ , ರಾಜನಹಳ್ಳಿ ಶಿವಕುಮಾರ್ , ಹಾಲೇಕಲ್ಲು ವೀರಣ್ಣ, ಎಸ್.ಟಿ.ಅರವಿಂದ್ , ಎಸ್.ಎಸ್.ಗಿರೀಶ್ , ಮಳಲ್ಕೆರೆ ಪ್ರಕಾಶ್ , ಪಾಲಿಕೆ ಸದಸ್ಯ ಪ್ರಸನ್ನಕುಮಾರ್, ಹದಡಿ ಬಸವರಾಜು , ಟಿ.ಬಿ.ಮಹಾಂತೇಶ , ಕೆ.ಪರಶುರಾಮ ,ಕನ್ನವರ ರೇವಣ್ಣ ,ಕರಿಗಾರ ಮಂಜುನಾಥ , ಭಟ್ಗಕಟ್ಟೆ ಬೀರೇಶ್ , ಕುಂದುವಾಡ ಗುರುನಾಥ್, ಗಣೇಶಪ್ಪ , ದಿಟ್ಟೂರು ಚಂದ್ರು , ಸಲ್ಲಳ್ಳಿ ಹನುಮಂತಪ್ಪ ,ಸಿದ್ದಲಿಂಗಪ್ಪ , ಪರಮೇಶ್,ಗುಡ್ಡಪ್ಪ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!