ಸಿದ್ಧೇಶ್ವರ ಶ್ರೀಗಳಿಗೆ ಮುಸ್ಲಿಂ ಸಮುದಾಯ ಗೌರವ

ದಾವಣಗೆರೆ : ನಗರದ ಹೊಂಡದ ಸರ್ಕಲ್ ಹತ್ತಿರವಿರುವ ಪ್ರೇರಣ ಸಾಂಸ್ಕೃತಿಕ ಸಂಸ್ಥೆ ಕಾರ್ಯಾಲಯದಲ್ಲಿ ಮಂಗಳವಾರ ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರ ಅಗಲಿಕೆಗೆ ಸಂತಾಪ ಸೂಚಿಸಲಾಯಿತು. ಅದರಲ್ಲೂ ಮುಸ್ಲಿಂ ಸಮುದಾಯದ ಮಹಿಳೆಯರು ಸಿದ್ಧೇಶ್ವರ ಶ್ರೀಗಳಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.
ಸಭೆಯಲ್ಲಿ ಪ್ರೇರಣ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷೆ ಚೇತನಾ, ಹಿರಿಯ ಪತ್ರಕರ್ತ ಬಕ್ಕೇಶ ನಾಗನೂರು ಮತ್ತಿತರರು ಸಿದ್ಧೇಶ್ವರ ಸ್ವಾಮೀಜಿ ಜೀವನ ದರ್ಶನ ಮಾಡಿಸಿದರು . ಸಿದ್ಧೇಶ್ವರ ಸ್ವಾಮೀಜಿ ಅವರ ನಿಧನಕ್ಕೆ ಎರಡು ನಿಮಿಷ ಮೌನಚಾರಣೆ ನಡೆಯಿತು. ಈ ಸಂದರ್ಭದಲ್ಲಿ ಅಕ್ಕಮ್ಮ , ಸುಶೀಲಮ್ಮ ಮತ್ತು ಹೊಲಿಗೆ ತರಬೇತಿ ಕೇಂದ್ರದ ಮಹಿಳೆಯರು ಉಪಸ್ಥಿತರಿದ್ದರು.