ಆಹಾರದ ಹಕ್ಕಿಗಾಗಿ ಆಗ್ರಹಿಸಿ ನೆರಳು ಬೀಡಿ ಕಾರ್ಮಿಕರಿಂದ‌ ಆಂದೋಲನ

 

ದಾವಣಗೆರೆ:ನಗರದಲ್ಲಿ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಆಹಾರದ ಹಕ್ಕು, ಆರೋಗ್ಯದ ಹಕ್ಕು, ಉದ್ಯೋಗದ ಹಕ್ಕುಗಳ ಕುರಿತು ಬೀಡಿ ಕಾರ್ಮಿಕರ ಮಧ್ಯೆ ಆಂದೋಲನ ಆರಂಭಿಸಲಾಗಿದ್ದು, ಜುಲೈ 28 ರವರೆಗೆ ಈ ಆಂದೋಲನ ನಡೆಯಲಿದೆ ಎಂದು ಸಂಘಟನೆಯ ಜಬೀನಾಖಾನಂ ತಿಳಿಸಿದ್ದಾರೆ.

ಅಹಾರ,ಆರೋಗ್ಯ ಮತ್ತು ಉದ್ಯೋಗಗಳನ್ನು ಭಾರತದ ನಾಗರಿಕರಿಗೆ ಸಿಗುವಂತೆ ಮಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಗಳಾಗಿರುತ್ತದೆ. ಆದರೆ ಕೊರೊನಾ ಒಂದು ಮತ್ತು ಎರಡನೇಯ ಅಲೆಯ ಪರಿಣಾಮವಾಗಿ ಲಾಕ್ ಡೌನ್ ನಿಂದ ದುಡಿಯುವ ವರ್ಗವು ಸೇರಿದಂತೆ ಎಲ್ಲಾ ಸಾರ್ವಜನಿಕರು ತಮ್ಮ ಕುಟುಂಬವನ್ನು ನಿರ್ವಹಣೆ ಮಾಡುವಲ್ಲಿ ತುಂಬಾ ಸಂಕ್ಷದಲ್ಲಿದ್ದಾರೆ, ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಜನ ಸಮುದಾಗಳ ನೆರವಿಗೆ ಬರಲು ವಿಫಲಗೊಂಡಿವೆ. ಹಾಗಾಗಿ ಎಲ್ಲಾ ಕಾರ್ಮಿಕರು ತಾವು ಇರುವ ಸ್ಥಳದಿಂದಲೇ ಅಥವಾ ಮನೆಯಿಂದಲೆ ಹಕ್ಕೊತ್ತವನ್ನು ಬರೆದು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಆಂದೋಲನವನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಕುಟುಂಬಗಳಿಗೆ ಅಕ್ಕಿ,ಗೋಧಿ ಸೇರಿದಂತೆ ,ಉಪ್ಪು ಎಣ್ಣೆ ಇತರೆ ಕಾಳುಗಳನ್ನು ಸರ್ಕಾರ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಿಗುವಂತೆ ಮಾಡಬೇಕು, ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ಸರ್ಕಾರವೇ ನೀಡಬೇಕು, ನರೇಗಾ ನಗರ ಮಟ್ಟದಲ್ಲಿ ಜಾರಿಗೊಳಿಸಬೇಕು,ಅಹಾರ,ಆರೋಗ್ಯ ಮತ್ತು ಉದ್ಯೋಗ ಹಕ್ಕಾಗಿ ಸಿಗಬೇಕು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬರುವ ಜುಲೈ 28 ರ ವರೆಗೆ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!