ಹೊನ್ನಾಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಲಸಿಕೋತ್ಸವದಲ್ಲಿ

 

ಹೊನ್ನಾಳಿ.ಜೂ.೧ : ಯುವ ಸಮೂಹ ನನ್ನ ದೇಶದ ಸಂಪತ್ತು, ಅಂತಹ ಯುವ ಸಮೂಹಕ್ಕೆ ಲಸಿಕೆ ನೀಡುತ್ತಿದ್ದು ಯುವ ಸಮೂಹ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.

ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಲಸಿಕೋತ್ಸವದಲ್ಲಿ ಪಾಲ್ಗೊಂಡು, ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದರು.

ಲಸಿಕೆ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದ್ದು ಯುವ ಸಮೂಹ ಲಸಿಕೆ ಬಗ್ಗೆ ಅಸಡ್ಡೆ ತೋರೆದೆ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿ ಹೇಳಿದರು.

ಹೊನ್ನಾಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳಿಂದ ಲಸಿಕೆ ನೀಡುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವುದು ಮುಗಿದ ನಂತರ ನ್ಯಾಮತಿ,ಸಾಸ್ವೇಹಳ್ಳಿ ಕಾಲೇಜಿನ ಕಾಲೇಜಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಿದ್ದು ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಪ್ರತಿಯೊಬ್ಬರಿಗೂ ಲಸಿಕೆ ನೀಡಲಿದ್ದು ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದ ರೇಣುಕಾಚಾರ್ಯ ಲಸಿಕೆ ವಿಚಾರದಲ್ಲಿ ನಾನು ಎಂದೂ ರಾಜಕಾರಣ ಮಾಡುವುದಿಲ್ಲಾ, ಅದರ ಅವಶ್ಯಕತೆಯೂ ನನಗಿಲ್ಲಾ, ಹಂತ ಹಂತವಾಗಿ ಲಸಿಕೆ ಬರಲಿದ್ದು,ಅವಳಿ ತಾಲೂಕಿನ ಪ್ರತಿ ಹಳ್ಳಿಗೂ ಲಸಿಕೆ ನೀಡಲಾಗುವುದು ಎಂದರು.

ಉಪಹಾರದ ವ್ಯವಸ್ಥೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಲು ವ್ಯವಸ್ಥೆ ಮಾಡಿದ್ದು, ಲಸಿಕೆ ಹಾಕಿಸಿಕೊಳ್ಳಲು ಬಂದ ವಿದ್ಯಾರ್ಥಿಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಉಪಹಾರ ವ್ಯವಸ್ಥೆ ಮಾಡಿಸಿದ್ದರು. ಅಷ್ಟೇ ಅಲ್ಲದೇ ಸಾರ್ವಜನಿಕರ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ಸಾರ್ವಜನಿಕರೂ ಉಪಹಾರದ ವ್ಯವಸ್ಥೆ ಮಾಡಿಸಿದ್ದ ಶಾಸಕರು, ಲಸಿಕೆ ಪಡೆದ ವಿದ್ಯಾರ್ಥಿಗಳು ಗ್ರಾಮಗಳಿಗೆ ತೆರಳಿದ ಮೇಲೆ ಗ್ರಾಮಗಳಲ್ಲಿ ಕೊರೊನಾ ವಾರಿಯರ್ಸಗಳಾಗಿ ಕೆಲಸ ಮಾಡುವ ಮೂಲಕ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.

ಕೊರೊನಾದಿಂದ ಗುಣಮುಖರಾದವರಿಗೆ ಹೂಮಳೆ : ತಾಲೂಕಿನ ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಿಂದ ಇಂದು 16 ಜನರು ಗುಣಮುಖರಾಗಿದ್ದು ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೂಮಳೆ ಸುರಿಸಿ ಆತ್ಮೀಯವಾಗಿ ಬೀಳ್ಕೋಟ್ಟರು. ಕೋವಿಡ್ ಕೇರ್ ಸೆಂಟರ್‌ನಲ್ಲಿ ಕಳೆದ 26 ದಿನಗಳಿಂದ ವಾಸ್ತವ್ಯ ಮಾಡಿಕೊಂಡು ಬಂದಿದ್ದು ಇಲ್ಲಿನ ಸಮಸ್ಯೆಗಳನ್ನು ಅರಿಯಲು ಅನುಕೂಲವಾಗಿದೆ ಎಂದ ಶಾಸಕರು, ಇಲ್ಲಿರುವವರು ನನ್ನ ಕುಟುಂಬದ ಬಂಧುಗಳ, ಅವರ ಕಾಳಜಿ ಮಾಡುವುದು ನನ್ನ ಕರ್ತವ್ಯ, ಇಲ್ಲಿ ಯಾವುದೇ ರಾಜಕೀಯ ಮಾಡದೇ ಪಕ್ಷಾತೀತವಾಗಿ ಕೆಲಸ ಮಾಡಿದ್ದು ಗುಣಮುಖರಾಗಿ ಗ್ರಾಮಗಳಿಗೆ ತೆರಳಿದವರು ಜನರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.

ಕೊರೊನಾ ಸೋಂಕಿತರಿಗೆ ರೊಟ್ಟಿ ಊಟದ ವ್ಯವಸ್ಥೆ : ಅರಬಗಟ್ಟೆಯಲ್ಲಿರುವ ಕೊರೊನಾ ಸೋಂಕಿತರಿಗೆ ಬಸವನಹಳ್ಳಿ ಗ್ರಾಮಸ್ಥರು ರೊಟ್ಟಿ ಊಟದ ವ್ಯವಸ್ಥೆ ಮಾಡಿಸಿದ್ದರು. ಕೊರೊನಾ ಸೋಂಕಿತರಿಗೆ ಊಟ ಬಡಿಸಿದ ಶಾಸಕರು ಬಸವನಹಳ್ಳಿ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ.ಕೆಂಚಪ್ಪ, ಪುರಸಭೆ ಸದಸ್ಯರಾದ ಓಬಳದರ್ ಬಾಬಣ್ಣ,ರಂಗಣ್ಣ, ಮುಖಂಡರಾದ ಮಹೇಶ್ ಉಡೇದ್, ಮಂಜುನಾಥ್,ಪೇಟೆ ಪ್ರಶಾಂತ್ ಸೇರಿದಂತೆ ಸಿಂಡಿಕೇಟ್ ಸದಸ್ಯರಾದ ಹಳದಪ್ಪ, ಸೇರಿದಂತೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಸೇರಿದಂತೆ ಮತ್ತೀತರಿದ್ದರು.

Leave a Reply

Your email address will not be published. Required fields are marked *

error: Content is protected !!