ವರದಿಗಾರರ ಕೂಟದಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ

ದಾವಣಗೆರೆ: ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಶುಕ್ರವಾರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಅಧ್ಯಕ್ಷತೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಖಜಾಂಚಿ ಮಧು ನಾಗರಾಜ್ ಕುಂದುವಾಡ, ಮಾಜಿ ಅಧ್ಯಕ್ಷ ಬಸವರಾಜ್ ದೊಡ್ಮನಿ, ಪಿಆರ್‌ಓ ಡಿ. ರಂಗನಾಥ ರಾವ್, ಉಪಾಧ್ಯಕ್ಷ ರವಿಬಾಬು, ಹಿರಿಯ ಪತ್ರಕರ್ತ ನಾಗರಾಜ್ ಬಡದಾಳ್, ಪದಾಧಿಕಾರಿಗಳಾದ ಡಿ.ಎಂ. ಮಹೇಶ್, ಸಂಜಯ್ ಕುಂದುವಾಡ, ಮಹಾದೇವ್, ಯೋಗರಾಜ್, ರಾಮು, ಸೋಮಶೇಖರ್, ಪ್ರಕಾಶ್, ಹನುಮಂತರಾವ್, ಶಿವು, ಶಾಂತಕುಮಾರ್ ಇತರರು ಉಪಸ್ಥಿತರಿದ್ದರು.