ಇಂಧನ ಬೆಲೆಯಲ್ಲಿ ಮತ್ತೇ 80 ಪೈಸೆ ಏರಿಕೆ! ದೇಶದ ವಿವಿಧ ನಗರಗಳಲ್ಲಿ ಹೇಗಿದೆ ಗೊತ್ತಾ ಇಂಧನ ಬೆಲೆ?
ಬೆಂಗಳೂರು : ದೇಶದ ಪ್ರಮುಖ ನಗರಗಳಲ್ಲಿ 137 ದಿನಗಳ ನಂತರ ಮತ್ತೇ ಮೂರನೇ ಬಾರಿ ನಿರಂತರವಾಗಿ ಇಂಧನ ದರದಲ್ಲಿ ಏರಿಕೆ ಕಂಡು ಬಂದಿದೆ. ಮಂಗಳವಾರ ಮತ್ತು ಬುಧವಾರ ಎರಡು ದಿನ 80 ಪೈಸೆಯಷ್ಟು ಏರಿಕೆಯಾಗಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಗುರುವಾರ ಸ್ಥಿರವಾಗಿತ್ತು. ಆದರೆ ಶುಕ್ರವಾರ ಮತ್ತೆ ಇಂಧನ ದರದಲ್ಲಿ 80 ಪೈಸೆ ಹೆಚ್ಚಿಸಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಸುಮಾರು 40% ಏರಿಕೆಯಾಗಿದ್ದು, ಕೈಗಾರಿಕಾ ಡೀಸೆಲ್ ಬೆಲೆ 25 ರೂ. ಏರಿಸಲಾಗಿತ್ತು. ಇದರ ಬೆನ್ನಲ್ಲೇ ರೀಟೈಲ್ ದರ ಪೆಟ್ರೋಲ್, ಡೀಸೆಲ್ ದರ ಕೂಡಾ ಪರಿಷ್ಕರಿಸಲಾಗಿದೆ. ಗುರುವಾರ ಮಾರ್ಚ್, 25 ರಂದು ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು, ಇಂದಿನ ಇಂಧನ ದರಗಳು ಈ ಕೆಳಕಂಡ0ತಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 118.9 ಯುಎಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ರಾಜ್ಯ ರಾಜಧಾನಿ ಸೇರಿ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಮತ್ತೊಮ್ಮೆ 102 ರೂಪಾಯಿ ಗಡಿ ದಾಟಿದೆ. ಕಳೆದ 137 ದಿನಗಳಿಂದ 100.56 ರೂಪಾಯಿಗೆ ಸ್ಥಿರವಾಗಿದ್ದ ಬೆಲೆ ನಿರಂತರ ಮೂರನೇ ಬಾರಿ ಏರಿಕೆ ನಂತರ ಪೆಟ್ರೋಲ್ ದರ 103.26 ರೂಪಾಯಿ ಹಾಗೂ ಡೀಸೆಲ್ ದರ 87.38 ರೂಪಾಯಿ ಆಗಿದೆ. ಚೆನ್ನೆನಲ್ಲಿ ಪೆಟ್ರೋಲ್ ದರ 103.71 ರೂಪಾಯಿ, ಡೀಸೆಲ್ ದರ 93.75 ರೂಪಾಯಿ ಇದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 107.14 ರೂಪಾಯಿ, ಡೀಸೆಲ್ ದರ 92.22 ರೂಪಾಯಿ ಆಗಿದೆ. ಭೋಪಾಲ್ ನಗರದಲ್ಲಿ ಪೆಟ್ರೋಲ್ ದರ 109.18 ರೂಪಾಯಿ ಹಾಗೂ ಡೀಸೆಲ್ ದರ 93.32 ರೂಪಾಯಿ ಇದೆ. ಮಹಾರಾಷ್ಟçದ ರಾಜಧಾನಿ ಮುಂಬೈ ಮತ್ತು ತೆಲಂಗಾಣ ರಾಜಧಾನಿ ಹೈದ್ರಾಬಾದ್ ನಗರದಲ್ಲಿ ಅತಿಹೆಚ್ಚು ಪೆಟ್ರೋಲ್ ದರ ದಾಖಲಾಗಿದೆ. ಈ ಎರಡೂ ನಗರದಲ್ಲಿ ಪೆಟ್ರೋಲ್ ಬೆಲೆ 110 ರೂಪಾಯಿ ಗಡಿ ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ ದರ 112.47 ರೂಪಾಯಿ ಆಗಿದ್ದರೆ, ಡೀಸೆಲ್ ದರ 96.65 ರೂಪಾಯಿ ಆಗಿದೆ. ಅದರಂತೆ ಹೈದ್ರಾಬಾದ್ ನಗರದಲ್ಲಿ ಪೆಟ್ರೋಲ್ ದರ 110.81 ರೂಪಾಯಿ ಆಗಿದ್ದರೆ, ಡೀಸೆಲ್ ದರ 97.17 ರೂಪಾಯಿ ಆಗಿದೆ. 100ಕ್ಕಿಂತ ಕಡಿಮೆ ಪೆಟ್ರೋಲ್ ದರವನ್ನು ಹೊಂದಿರುವ ಮಹಾನಗರಗಳು ರಾಷ್ಟ ರಾಜಧಾನಿಯಲ್ಲಿ ಪೆಟ್ರೋಲ್ ದರ 100ಕ್ಕಿಂತ ಕಡಿಮೆಯಾಗಿದ್ದರೆ, ಡೀಸೆಲ್ ದರ 90 ರೂಪಾಯಿಗಿಂತ ಕಡಿಮೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ 97.81 ರೂಪಾಯಿ ಆಗಿದ್ದರೆ, ಡೀಸೆಲ್ ದರ 89.07 ರೂಪಾಯಿ ಆಗಿದೆ. ಲಕ್ನೋದಲ್ಲಿ ಪೆಟ್ರೋಲ್ ದರ 97.67 ರೂಪಾಯಿ ಆಗಿದ್ದರೆ, ಡೀಸೆಲ್ ದರ 87.22 ರೂಪಾಯಿ ಆಗಿದೆ. ಅದೇ ರೀತಿ ಗುವಾಹಟಿಯಲ್ಲಿ ಪೆಟ್ರೋಲ್ ದರ 97.14 ರೂಪಾಯಿ ಇದ್ದು, ಡೀಸೆಲ್ ದರ : 83.47 ರೂಪಾಯಿ ಇದೆ. ಗಾಂಧಿ ನಗರದಲ್ಲಿ ಪೆಟ್ರೋಲ್ ದರ 97.74 ರೂಪಾಯಿಗಳಿದ್ದು, ಡೀಸೆಲ್ ದರ 91.80 ರೂಪಾಯಿ ಆಗಿದೆ.