ಜಿಲ್ಲಾ ಗೃಹ ರಕ್ಷಕದಳದಲ್ಲಿ ಸ್ವಯಂ ಸೇವಕ ಸ್ಥಾನಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ: ಜಿಲ್ಲಾ ಗೃಹ ರಕ್ಷಕದಳದಲ್ಲಿ ಖಾಲಿ ಇರುವ 64 ಸ್ವಯಂ ಸೇವಕ ಗೃಹರಕ್ಷಕ ಸ್ಥಾನಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ದಾವಣಗೆರೆಯಲ್ಲಿ 18, ಹರಿಹರ 3, ಮಲೇಬೆನ್ನೂರು 6, ಹೊನ್ನಾಳಿ 3, ನ್ಯಾಮತಿ 13, ಜಗಳೂರು 4, ಬಿಳಿಚೋಡು 5, ಉಜ್ಜಪ್ಪರ ಒಡೆಯರಹಳ್ಳಿ 11. ಗೃಹರಕ್ಷಕ ಸ್ವಯಂಸೇವಕರ ಹುದ್ದೆಗಳ ಭರ್ತಿಗಾಗಿ ಕ್ರಮವಹಿಸಿದೆ. ಜ.16 ರಿಂದ ಅರ್ಜಿ ಸಲ್ಲಿಸಬಹುದು. ಜ.24 ಅರ್ಜಿ ಸಲ್ಲಿಸಲು ಕೊನೆಯ ದಿನ.
ಜಿಲ್ಲಾ ಗೃಹ ರಕ್ಷಕದಳ ಕಛೇರಿ, ದೇವರಾಜ್ ಅರಸ್ ಬಡಾವಣೆ ಬಿ ಬ್ಲಾಕ್, ಲೈಬ್ರರಿ ರಸ್ತೆ ಶಿವ ಪಾರ್ವತಿ ಕಲ್ಯಾಣ ಮಂಟಪ ಪಕ್ಕ ದಾವಣಗೆರೆ. ಈ ಕಚೇರಿಯಲ್ಲಿ ನಿಗದಿತ ನಮೂನೆಯ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192 -255784, 7026269485ಗೆ ಸಂಪರ್ಕಿಸಬಹುದೆಂದು ಹೋಂ ಗಾಡ್ರ್ಸ್ ಕಮಾಂಡೆಂಟ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!