ಅಚ್ಚುಕಟ್ಟಾದ ಸಮಾವೇಶ ಏರ್ಪಾಡು- ಶಿವಾನಂದ ತಗಡೂರು ಮೆಚ್ಚುಗೆ

ಕಲಬುರಗಿ: ಕೋವಿಡ್ ನಂತಹ ಕಾಲದಲ್ಲಿ ಕಲಬುರಗಿಯಲ್ಲಿ ಸಂಘದ ಅತ್ಯಂತ ಅಚ್ಚುಕಟ್ಟಾಗಿ ನಡೆಸುತ್ತಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮೆಚ್ಚುಗೆ ಸೂಚಿಸಿದರು.

ನಗರದ ಪೂಜ್ಯ ಬಸವರಾಜಪ್ಪ ಅಪ್ಪ‌ ಸ್ಮಾರಕ‌ ಭವನದಲ್ಲಿನಲ್ಲಿ ನಡೆಯುತ್ತಿರುವ 36 ನೆಯ ರಾಜ್ಯ ಪತ್ರಕರ್ತರ ಸಮಾವೇಶದಲ್ಲಿ ಆಯೋಜಿಸಲಾಗಿದ್ದ ಸರ್ವಸದಸ್ಯರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಈ‌ ಮೊದಲು ತಾಲೂಕು ಪತ್ರಕರ್ತರ ಸಂಘದ ಅದ್ಯಕ್ಷರನ್ನು ಹೆಸರಿಸುವ ಮೂಲಕ ಆಯ್ಕೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಅಲ್ಲಿಯೂ ಕೂಡಾ ಚುನಾವಣೆ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು. ಜೊತೆಗೆ ಜಿಲ್ಲಾ ಕೇಂದ್ರ ನಿವಾಸಿಯಾಗಿದ್ದವರು ಮಾತ್ರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮಾತ್ರ ಅರ್ಹರು ಎನ್ನುವ ನಿಯಮವನ್ನು ರೂಪಿಸಲಾಗುತ್ತಿದೆ ಹಾಗೂ ಈ ಮೊದಲು ಜಿಲ್ಲಾ ಉಪಾಧ್ಯಕ್ಷ ಸ್ಥಾನ ಒಂದೇ ಇತ್ತು ಈಗ ಗ್ರಾಮೀಣ ಭಾಗಕ್ಕೆ ಮತ್ತೊಂದು ಸ್ಥಾನ ವಿಸ್ತರಿಸಲಾಗುತ್ತಿದೆ ಎಂದರು. ಇನ್ನು ಮುಂದೆ ಸಂಘದ ಅಡಿಯಲ್ಲಿ ನಡೆಯುವ ಪ್ರತಿ ಚುನಾವಣೆ ತಮ್ಮ ನೇತೃತ್ವದಲ್ಲಿ ನಡೆಯಲಿದೆ ಎಂದರು.

ಕಳೆದ ಸಮ್ಮೇಳನ ಮಂಗಳೂರಲ್ಲಿ ನಡೆದಿತ್ತು. ಅಲ್ಲಿನ ಸಂಘದ ಪದಾಧಿಕಾರಿಗಳು ಸಮ್ಮೇಳನವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದರು. ಅವರಿಗೆ ಹಾಗೂ ಇದೇ ಮೊದಲ ಬಾರಿಗೆ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಹಾಗೂ ನೂತನ‌ ಜಿಲ್ಲೆ ವಿಜಯನಗರ ಜಿಲ್ಲೆಯಲ್ಲಿ ಸಂಘ ಅಸ್ಥಿತ್ವಕ್ಕೆ ಬಂದಿದ್ದು ಅವರಿಗೆ ಅಭಿನಂದನೆಗಳು ತಿಳಿಸಿದರು.

ಬೇರೆ ಬೇರೆ ಭಾಗಗಳಿಂದ ಬಂದಿದ್ದ ಸದಸ್ಯರು ಪತ್ರಕರ್ತರು ಎದುರಿಸುತ್ತಿದ್ದ ಸಮಸ್ಯೆಗಳನ್ನು ತಗಡೂರು ಅವರ ಗಮನಕ್ಕೆ ತಂದರು. ಬೀದರ್ ಜಿಲ್ಲೆಯಲ್ಲಿ ವಾರ್ತಾಧಿಕಾರಿ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ ಕುರಿತು ಸದಸ್ಯರೊಬ್ಬರು ಸಭೆಯನ್ನು ಗಮನಸೆಳೆದಾಗ, ಮಾತನಾಡಿದ ತಗಡೂರು ಅವರು ಈಗಾಗಲೇ ಕುರಿತು ವಾರ್ತಾ ಇಲಾಖೆಯ ಕಮೀಷನರ್ ಅವರ ಗಮನಕ್ಕೆ‌ ತರಲಾಗಿದ್ದು ಕ್ರಮದ ಭರವಸೆ ನೀಡಿದರು.

ರಾಜ್ಯದಲ್ಲಿ 7800 ಕಾರ್ಯನಿರತ ಪತ್ರಕರ್ತರು ಕೆಲಸ ಮಾಡುತ್ತಿದ್ದು ಬಸ್ ಪಾಸ್ ನೀಡುವ ಕುರಿತಂತೆ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸದಸ್ಯರೊಬ್ಬರು ಮನವಿ ಮಾಡಿದರು.

ಬೆಳಗಾವಿ ಜಿಲ್ಲೆಯಿಂದ ಬಂದಿದ್ದ ಸದಸ್ಯರೊಬ್ಬರು ಮಾತಮಾಡಿ ಜಿಲ್ಲೆಯಲ್ಲಿ ನಕಲಿ ಪತ್ರಕರ್ತರು ಹುಟ್ಟಿಕೊಂಡಿದ್ದು ಕ್ರಮ ಕೈಗೊಳ್ಳಬೇಕೆಂದರು.

ಬಳ್ಳಾರಿ ಜಿಲ್ಲೆಯಿಂದ ಬಂದಿದ್ದ ಸದಸ್ಯರೊಬ್ಬರು ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯನಿರತ ಸಂಘದ ಸದಸ್ಯರು ಸಂಘವಿರೋಧ ಚಟುವಟಿಕೆಯಲ್ಲಿ ತೊಡಗಿದ್ದು ಅಂತವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಕುರಿತು ಮಾತನಾಡಿದ ತಗಡೂರು ಸಂಘವಿರೋದಿ ಚಟುವಟಿಕೆ ಮಾಡುವವರಿಗೆ ಎಚ್ಚರಿಕೆ ನೀಡಲಾಗಿದೆ. ಅಂತವರು ವಿಷಾದ ವ್ಯಕ್ತಪಡಿಸಿದರೆ ಅಂತವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ ಅಷ್ಟಕ್ಕೂ ಅವರು ಮತ್ತೆ ಅದೇ ಚಟುವಟಿಕೆಯಲ್ಲಿ ಮುಂದುವರೆದರೆ, ಅಂತವರು ಸಂಘದಿಂದ ದೂರದಲ್ಲೇ ಇರುವುದು ವಾಸಿ ಎಂದರು.

ವೇದಿಕೆಯ ಮೇಲೆ ಜಿಲ್ಲಾಧ್ಯಕ್ಷರಾದ ಭವಾನಿಸಿಂಗ್ ಠಾಕೂರು, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ್ ಭೈರಾಮಡಗಿ, ಜಿಲ್ಲಾ ಕಾರ್ಯದರ್ಶಿ ದೇವೆಂದ್ರಪ್ಪ ಅವಂಟಿ‌, ದೇವೆಂದ್ರಪ್ಪ ಕಪನೂರು ಸೇರಿದಂತೆ ಮತ್ತಿತರಿದ್ದರು.

Leave a Reply

Your email address will not be published. Required fields are marked *

error: Content is protected !!