ಕಲಬುರಗಿಯಲ್ಲಿ 36 ನೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಾವೇಶಕ್ಕೆ ಆಗಮಿಸಿದ ಪತ್ರಕರ್ತರು

ಕಲಬುರ್ಗಿ: 36 ನೇ ರಾಜ್ಯ ಪತ್ರಕರ್ತರ ಸಮಾವೇಶ‌ ಇಂದಿನಿಂದ‌ ಐತಿಹಾಸಿಕ‌ ಕಲಬುರಗಿ ನಗರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಮೂಲೆ‌ ಮೂಲೆಗಳಿಂದ ಪತ್ರಕರ್ತರು ಆಗಮಿಸಿದ್ದಾರೆ.

ಆಗಮಿಸಿರುವ ಅತಿಥಿಗಳಿಗಾಗಿ‌ ನಗರದಲ್ಲಿ ವಸತಿ ವ್ಯವಸ್ಥೆ‌ ಮಾಡಲಾಗಿದೆ.

ಸಮಾವೇಶ ನಡೆಯಲಿರುವಪೂಜ್ಯ ಶ್ರೀ ಬಸವರಾಜಪ್ಪ ಅಪ್ಪ ಸಭಾಭವನಕ್ಕೆ ಬೆಳಿಗ್ಗೆ ಆಗಮಿಸಿದ ಪತ್ರಕರ್ತರು ಆಹಾರ ಸಮಿತಿ‌ ತಯಾರಿಸಿದ ರುಚಿ ರುಚಿಕರವಾದ
ಜೇವಿ ಗೋಧಿ ಉಪ್ಪಿಟ್ಟು, ಪೈನಾಪಲ್ ಕೇಸರಿ ಬಾತ, ಹೈದ್ರಾಬಾದಿ ದೋಸಾ, ಕಲಬುರಗಿಯ ಬಟನ್ ಇಡ್ಲಿ&ವಡಾ, ಟೀ ಹಾಗೂ ಕಾಫಿ ಸವಿದರು.

ಬೆಳಗಿನ ಉಪಹಾರದ ನಂತರ ಅತಿಥಿಗಳು ಕಲಬುರಗಿ ಸುತ್ತಮುತ್ತಲಿನ‌ ಪ್ರವಾಸಿ ತಾಣಗಳ ವೀಕ್ಷಣೆಗೆ ತೆರಳಿದ್ದು ಸಾರಿಗೆ ಸಮಿತಿ ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು.

 

Leave a Reply

Your email address will not be published. Required fields are marked *

error: Content is protected !!