ಕರ್ನಾಟಕ ರಾಜ್ಯ ಪ್ರವರ್ಗ -1 ರ ಜಾತಿಗಳ ಒಕ್ಕೂಟದಿಂದ ಅಕ್ಟೋಬರ್ 24 ರಿಂದ ಜಾಗೃತ ಸಭೆ

ದಾವಣಗೆರೆ : ಪ್ರವರ್ಗ -1 ಜಾತಿಗಳಾದ ಉಪ್ಪಾರ , ಗೊಲ್ಲ ( ಯಾದವ ) ಗಂಗಾಮತ , ಹೆಳವ , ದೊಂಬಿದಾಸ , ಗೂರ್ಖಾ ಮುಂತಾದ ಅಲೆಮಾರಿ ಜಾತಿಗಳು ಸೇರಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯು ಇರುತ್ತದೆ . ಆದರೂ ಈ ಜನಾಂಗದ ಸಾಮಾಜಿಕ , ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸರ್ಕಾರಗಳು ಗಮನಿಸದೇ ಸಮರ್ಪಕ ಕಾರ್ಯಕ್ರಮಗಳನ್ನು ರೂಪಿಸಿರುವುದಿಲ್ಲ . ಅಲ್ಲದೇ ಇವರಿಗೆ ನೀಡಿರುವ ಸೌಲಭ್ಯಗಳನ್ನು ಸರ್ಕಾರವು ಬರಬರುತ್ತಾ ಕಡಿತಗೊಳಿಸಿರುತ್ತವೆ . ಆದುದರಿಂದ ಪ್ರವರ್ಗ -1 ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿ ಸರ್ಕಾರದ ಸೌಲಭ್ಯ ಪಡೆಯಲು ಅನುಕೂಲವಾದ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿ ಹಕ್ಕೊತ್ತಾಯ ಮಾಡುತ್ತಿದ್ದೇವೆ .

ಬೇಡಿಕೆಗಳ ಹಕ್ಕೋತ್ತಾಯಗಳು

1 ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವಂತೆ ವಿದ್ಯಾರ್ಥಿವೇತನ , ಶುಲ್ಕ ವಿನಾಯಿತಿ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಈ ಹಿಂದೆ ನೀಡುತ್ತಿದ್ದಂತೆ ಪ್ರವರ್ಗ -1 ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಶುಲ್ಕ ವಿನಾಯಿತಿ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ನೀಡುವುದು .

2 ) ಪ್ರವರ್ಗ -1 ರ ಅಡಿಯಲ್ಲಿ ಬರುವ ಎಲ್ಲಾ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸುವುದು . ಈ ಕಾರ್ಯಕ್ಕೆ ರೂ . 5 ಕೋಟಿಗಳ ಅನುದಾನವನ್ನು ನಿಗದಿಪಡಿಸುವುದು .

3 ) ವಿಶ್ವವಿದ್ಯಾನಿಲಯಗಳಲ್ಲಿ ಪ್ರವರ್ಗ -1 ಜಾತಿಗಳ ಕೋಶವನ್ನು ಮರುಸ್ಥಾಪಿಸುವುದು ಹಾಗೂ ಪ್ರವರ್ಗ 1 ರ ವಿದ್ಯಾರ್ಥಿನಿಲಯವನ್ನು ವಿಶ್ವವಿದ್ಯಾನಿಲಯಗಳಲ್ಲಿ ಪುನರ್‌ ಪ್ರಾರಂಭಿಸುವುದು .

4 ) ಪ್ರವರ್ಗ -1 ರ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. , ಪಿ.ಯು.ಸಿ. ಪದವಿ , ಸ್ನಾತಕೋತ್ತರ ಪದವಿ ಪಾಸಾದವರಿಗೆ ಬಹುಮಾನದ ಹಣವನ್ನು ಪೋಷಣೆ ಮಾಡಲು ಒತ್ತಾಯ .

5 ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಇರುವಂತೆ ಪ್ರವರ್ಗ -1 ರ ಜಾತಿಗಳಿಗೆ ಭೂ ಒಡೆತನ ಯೋಜನೆಯನ್ನು ಅನುಷ್ಠಾನಗೊಳಿಸುವುದು .

6 ) ಪ್ರವರ್ಗ -1 ರ ಜಾತಿಯ ಉದ್ದಿಮೆದಾರರಿಗೆ ರೂ . 10 ಕೋಟಿವರೆಗೆ ಶೇ . 4 ರ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲಸೌಲಭ್ಯ ಒದಗಿಸುವುದು .

7 ) ಕರ್ನಾಟಕ ಕೈಗಾರಿಕಾ ಕಾರಿಡಾರ್‌ಗಳಲ್ಲಿ ಪ್ರವರ್ಗ -1 ರ ಜಾತಿಯವರಿಗೆ ಕೈಗಾರಿಕಾ ನಿವೇಶನ ಒದಗಿಸುವುದು ಮತ್ತು ಈ ನಿವೇಶನಗಳನ್ನು ಶೇ . 50 ಅನುದಾನದಲ್ಲಿ ಮಂಜೂರು ಮಾಡುವುದು ಬಾಕಿ . ಶೇ . 50 ರ ಅನುದಾನದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭರಿಸುವುದು .

8 ) ಪ್ರವರ್ಗ -1 ರ ಜಾತಿಯನ್ನು ಪ್ರತಿನಿಧಿಸುವ ವಿಧಾನಸಭೆ ಮತ್ತು ವಿದಾನಪರಿಷತ್ ಸದಸ್ಯರಲ್ಲಿ ಕನಿಷ್ಠ ಇಬ್ಬರಿಗೆ ಸಚಿವ ಸ್ಥಾನವನ್ನು ಒದಗಿಸುವುದು .

9 ) ಮುಂಬರುವ ತಾಲ್ಲೂಕು ಪಂಚಾಯಿತಿ , ಜಿಲ್ಲಾ ಪಂಚಾಯಿತಿ ಹಾಗೂ ಬಿ.ಬಿ.ಎಂ.ಪಿ. ಚುನಾವಣೆಗಳಲ್ಲಿ ಪ್ರವರ್ಗ -1 ರ ಜಾತಿಗೆ ಮೀಸಲು ಸ್ಥಾನಗಳನ್ನು ಪ್ರತ್ಯೇಕವಾಗಿ ನಿಗದಿಪಡಿಸುವುದು .

10 ) ಸರ್ಕಾರದ ಅಧೀನದಲ್ಲಿ ಬರುವ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನು ಹಾಗೂ ಸದಸ್ಯರನ್ನು ನೇಮಕಾತಿ ಮಾಡುವುದು .

11 ) ಸರ್ಕಾರದಿಂದ ಈಗಾಗಲೇ ಪ್ರಾರಂಭಿಸಿರುವ ಪ್ರವರ್ಗ -1 ರ ಜಾತಿಗಳ ನಿಗಮಗಳಿಗೆ 2021-22ನೇ ಸಾಲಿನಲ್ಲಿ ಪ್ರತಿ ನಿಗಮಕ್ಕೆ ರೂ . 300 ಕೋಟಿ ಅನುದಾನವನ್ನು ಒದಗಿಸುವುದು .

12 ) ಆರ್ಥಿಕ ಸೌಲಭ್ಯ ಹಾಗೂ ಶೈಕ್ಷಣಿಕ ಸೌಲಭ್ಯ ಪಡೆಯಲು ಹಿಂದೆ ಇದ್ದಂತೆ ಆದಾಯ ಮಿತಿಯನ್ನು ರದ್ದುಪಡಿಸಿ , ಆದೇಶ ಹೊರಡಿಸುವುದು .

13 ) ಅಲೆಮಾರಿ / ಅರೆ ಅಲೆಮಾರಿ ಜನಾಂಗದ ಕುಟುಂಬಗಳಿಗೆ ಮನೆಗಳ ನಿರ್ಮಾಣಕ್ಕಾಗಿ ಘಟಕ ವೆಚ್ಚ ರೂ . 8 ಲಕ್ಷಗಳ ಅನುದಾನವನ್ನು ನಿಗದಿಪಡಿಸಬೇಕು . ( ರೂ . 5 ಲಕ್ಷ ಸಹಾಯಧನ , ರೂ . 2 ಲಕ್ಷಗಳು ಬ್ಯಾಂಕ್ ಸಾಲ , ಹಾಗೂ ರೂ . 1 ಲಕ್ಷ ಫಲಾನುಭವಿಗಳ ವಂತಿಕೆ )

14 ) ಪ್ರವರ್ಗ – ರ ಜಾತಿಯ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವುದು .

15 ) ದೊಂಬಿದಾಸ , ಕಿಳ್ಳೆ ಖ್ಯಾತ ಇತ್ಯಾದಿ ಅತಿ ಸೂಕ್ಷ್ಮ ಜನಾಂಗದವರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳಿಗೆ ಆದೇಶ ನೀಡುವುದು .

16 ) ಪ್ರವರ್ಗ -1 ರ ಜಾತಿಗಳು ಹೆಚ್ಚಾಗಿ ವಾಸಿಸುವ ಗ್ರಾಮಗಳಲ್ಲಿ , ಹಟ್ಟಿಗಳಲ್ಲಿ , ದೊಡ್ಡಿಗಳಲ್ಲಿ , ಕಾಲೋನಿಗಳಲ್ಲಿ ರಸ್ತೆ , ಚರಂಡಿ , ವಿದ್ಯುತ್‌ ದೀಪ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು . ಇದಕ್ಕಾಗಿ ರೂ . 200 ಕೋಟಿಗಳ ಅನುದಾನವನ್ನು ಒದಗಿಸುವುದು .

17 ) 2022-23ರ ಅಯವ್ಯಯದಲ್ಲಿ ಪ್ರವರ್ಗ -1 ಜಾತಿಗಳ ಅಭಿವೃದ್ಧಿಗೆ ರೂ . 1500.00 ಕೋಟಿ ಅನುದಾನವನ್ನು ಪ್ರತ್ಯೇಕವಾಗಿ ಮೀಸಲಿಡಬೇಕು .

18 ) ಸರ್ಕಾರದ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನೀಡಿರುವಂತೆ ಪ್ರವರ್ಗ -1 ರ ಜಾತಿಗಳ ಗುತ್ತಿಗೆದಾರರಿಗೆ ಉದ್ದಿಮೆದಾರರಿಗೆ ಟೆಂಡರ್‌ನಲ್ಲಿ ಮೀಸಲಾತಿ ನೀಡುವುದು .

19 ) ಗೃಹಮಂಡಳಿ , ಲೋಕೋಪಯೋಗಿ ಇಲಾಖೆ , ಕೈಗಾರಿಕಾ ಅಭಿವೃದ್ಧಿ ಮಂಡಳಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಇರುವಂತೆ ನಿವೇಶನ ಮತ್ತು ಮಳಿಗೆಗಳನ್ನು ಹಂಚಿಕೆ ಮಾಡುವಾಗ ಪ್ರವರ್ಗ -1 ರ ಜಾತಿಗಳವರಿಗೆ ಮೀಸಲಿಡುವುದು . ಈ ಸಭೆಗೆ ಪ್ರವರ್ಗ -1 ರ ಎಲ್ಲಾ ಜಾತಿಗಳ ಹಾಗೂ ಉಪ ಜಾತಿಗಳ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ , ಈ ಜಾಗೃತ ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು

. ಈ ಪತ್ರಿಕಾಗೋಷ್ಠಿಯಲ್ಲಿ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷರಾದ ತುರ್ಚಘಟ್ಟದ ಹೆಚ್.ತಿಪ್ಪಣ್ಣ , ಯಾದವ ಮಹಾಸಭಾದ ಜಿಲ್ಲಾಧ್ಯಕ್ಷರಾದ ಬಾಡದ ಆನಂದರಾಜ್ , ಗಂಗಮತ ಸಮಾಜದ ಜಿಲ್ಲಾಧ್ಯಕ್ಷರಾದ ಬಿ.ಕೆ.ಮಂಜುನಾಥ್ , ಯಾದವ ಸಂಘದ ಜಿಲ್ಲಾಧ್ಯಕ್ಷರಾದ ತಿಪ್ಪೇಸ್ವಾಮಿ , ಮಾಜಿ ಮಹಾಪೌರರಾದ ಶ್ರೀಮತಿ ಉಮಾಪ್ರಕಾಶ್ , ಮಹಾನಗರ ಪಾಲಿಕೆ ಸದಸ್ಯರಾದ ಪಿ.ಎಸ್.ಬಸವರಾಜ್ , ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷರಾದ ಗಿರೀಶ್ ಹೊಸನಾಯಕನಹಳ್ಳಿ , ಭಗೀರಥ ಉಪ್ಪಾರ ಯುವಕ ಸಂಘದ ಜಿಲ್ಲಾಧ್ಯಕ್ಷರಾದ ಎನ್.ಬಿ.ಎ.ಲೋಕೇಶ್ , ಗಂಗಮತ ಸಮಾಜದ ಕೃಷ್ಣಪ್ಪ ಜಾಡರ್ , ಶಶಿಧರ್ ಒಡೆಯರ್ , ನಿಂಗರಾಜ್ ಹವನೂರು , ಯುವ ಮುಖಂಡರಾದ ಬಸವರಾಜ ಸಾಗರ್ , ಗೊಲ್ಲಸಮಾಜದ ಡಿ.ಏಕಾಂತಪ್ಪ , ಹೆಳವರ ಸಮಾಜದ ಕೈದಾಳ್ ಮಲ್ಲಪ್ಪ ಇನ್ನೂ ಮುಂತಾದವರು ಭಾಗವಹಿಸಿದ್ದರು .

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!