ಉಚ್ಚಂಗೆಮ್ಮ ದೇವಸ್ಥಾನದ ಗುಡ್ಡದಲ್ಲಿ ಹೃದಯಘಾತದಿಂದ ಭಕ್ತನೋರ್ವ ಸಾವು.

ಹರಪನಹಳ್ಳಿ: ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗ ಐತಿಹಾಸಿಕ ಹಾಗೂ ಧಾರ್ಮಿಕ ಪ್ರಸಿದ್ಧಿ ಹೊಂದಿದ್ದು, ಪ್ರತಿ ಶುಕ್ರವಾರ, ಮಂಗಳವಾರ, ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಸಾವಿರಾರು ಭಕ್ತರೂ ದೇವಿಯ ದರ್ಶನಕ್ಕೆ ಸುಮಾರು 600 ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನಕ್ಕೆ ಬರುತ್ತಾರೆ.
ಮೆಟ್ಟಿಲುಗಳನ್ನು ಹತ್ತಿ ಬರುವಾಗ ಹೃದಯಾಘಾತ, ಸುಸ್ತು, ತಲೆತಿರುಗಿ ಬೀಳುವುದು,ಗುಡ್ಡ ಹತ್ತುವಾಗ ಬಿದ್ದು ಕೈ ಕಾಲು ಮುರಿದುಕೊಂಡ ಘಟನೆಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆದಿವೆ.
ಹುಣ್ಣಿಮೆ ದಿನವಾದ ಇಂದು ಗುಡ್ಡದ ಮೇಲೆ ಹತ್ತಿ ಬರುವಾಗ ಹೃದಯಾ ಘಾತವಾಗಿ ದಾವಣಗೆರೆಯ ಭಕ್ತರಾದ ಹುಚ್ಚಪ್ಪ ಸಾವನ್ನಪ್ಪಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪನವರು,ದೇವಸ್ಥಾನದ ಸಿಬ್ಬಂದಿ,ಪೊಲೀಸರು,
ಗುಡ್ಡದ ಮೇಲೆನಿಂದ ಬೆಡ್ ಶೀಟ್ ನಲ್ಲಿ ಹೊತ್ತುಕೊಂಡು ಕೆಳೆಗೆ ಹುಚ್ಚಪ್ಪನನ್ನು ಕರೆದುಕೊಂಡು ಬರುವ ಮಾರ್ಗ ಮಧ್ಯದಲ್ಲಿ ಸಾವನಪ್ಪಿದ್ದಾರೆ.
ಸತತವಾಗಿ ಹಲವಾರು ವರ್ಷಗಳಿಂದ ದೇವಸ್ಥಾನಕ್ಕೆ ಒಬ್ಬ ವೈದ್ಯರು ಅಥವಾ ನರ್ಸ್ ನೇಮಕಕ್ಕೆ ಮನವಿಯನ್ನು ಮಾಡಿದರು ಇನ್ನೂ ನೇಮಕವಾಗಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಆದಷ್ಟು ಬೇಗ ದೇವಸ್ಥಾನಕ್ಕೆ ಒಬ್ಬ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಿ ಆಗಾಗ ಭಕ್ತರಿಗೆ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುವುದು ಭಕ್ತರ ಕೋರಿಕೆ.