basket ball; ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಡಾ|| ವಸುಂಧರಾ ಶಿವಣ್ಣ ಚಾಲನೆ

basket ball

ದಾವಣಗೆರೆ, ಸೆ.05: ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಬೆಳಗಾಂ ವಲಯದ ಪುರುಷರ ಬಾಸ್ಕೆಟ್ ಬಾಲ್ (basket ball) ಪಂದ್ಯಾವಳಿಗೆ ಕಾಲೇಜಿನ ನಿರ್ದೇಶಕಿ ಡಾ|| ವಸುಂಧರಾ ಶಿವಣ್ಣ ಚಾಲನೆ ನೀಡಿದರು. ಕಾಲೇಜ್ ಆಫ್ ಡೆಂಟಲ್ ಸೈನ್ಸ್ ದಾವಣಗೆರೆ ವತಿಯಿಂದ ಪಂದ್ಯಾವಳಿ ಆಯೋಜಿಸಲಾಗಿತ್ತು.

ಡಾ|| ವಸುಂಧರಾ ಶಿವಣ್ಣರವರು ಬಾಸ್ಕೆಟ್ ಬಾಲ್‌ನ್ನು ಶೂಟ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದವರು ಪಠ್ಯ ಚಟುವಟಿಕೆಗಳಿಗೆ ಅಲ್ಲದೇ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಪ್ರಾಮುಖ್ಯತೆ ನೀಡುತ್ತಾ ಬಂದಿದ್ದು ಇವುಗಳು ಕೇವಲ ಮಾನಸಿಕವಲ್ಲದೇ, ದೈಹಿಕ ಬೆಳವಣಿಗೆಗೂ ಅನುಕೂಲವಾಗುವಂತೆ ಮಾಡಿದ್ದಾರೆ. ಇದರ ಸದುಪಯೋಗಮಾಡಿಕೊಂಡು ದಾವಣಗೆರೆಯ ಆತಿಥ್ಯವನ್ನು ಬೆಣ್ಣೆ ದೋಸೆಯೊಂದಿಗೆ ಸವಿಯಿರಿ ಎಂದು ಹೇಳಿದರು.

fundamental rights; ಶತಮಾನಗಳಿಂದಲೂ ಇಲ್ಲ ಸಾರಿಗೆ ಸೌಲಭ್ಯ, ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ ಮಕ್ಕಳು..!

ಕಾಲೇಜಿನ ಪ್ರಾಂಶುಪಾಲ ಡಾ|| ಐ.ಎಮ್.ಅಲಿಯವರು ಹಾಗೂ ವಿಭಾಗದ ಮುಖ್ಯಸ್ಥ ಡಾ||ಧನ್ಯಕುಮಾರ್ ರವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ವಿಷ್ಣು.ಪಿ., ಗೋಪಾಲಕೃಷ್ಣ.ಕೆ.ಎನ್. ತೀರ್ಪುಗಾರರಾದ ದರ್ಶನ್ ಹಾಗೂ ಪಂದ್ಯಾವಳಿ ಆಯೋಜಕ ಕಾರ್ಯದರ್ಶಿ ಮಹೇಶ್.ಸಿ.ಪಿ. ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಮುಕ್ತ ನೆರವೇರಿಸಿಕೊಟ್ಟರು.

Leave a Reply

Your email address will not be published. Required fields are marked *

error: Content is protected !!