youth; ‘ಯುವಕರಲ್ಲಿ ಧನಾತ್ಮಕ ಚಿಂತನೆ, ವರ್ತನೆ ದೇಶದ ಬೆಳವಣಿಗೆಗೆ ಅತ್ಯಾವಶ್ಯಕ’

ದಾವಣಗೆರೆ, ಸೆ.05: ಯುವಕರುಗಳೇ (youth) ದೇಶದ ಆಸ್ತಿ, ಉತ್ತಮ ಚಿಂತನೆ ಮತ್ತು ಧನಾತ್ಮಕ ವರ್ತನೆಯ ಮೂಲಕ ದೇಶದ ಬೆಳವಣಿಗೆಗೆ ಸಹಕಾರಿಯಾಗಬೇಕೆಂದು ಜಿಎಂಐಟಿ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಗರದ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನುಡಿದರು.

ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಪ್ರೋಗ್ರಾಮ್ ಉದ್ಘಾಟಿಸಿ ಇಂದಿಲ್ಲಿ ಮಾತನಾಡಿದರು.

ಯುವಕರು ಯಾವುದೇ ಅನಗತ್ಯ ಚಟುವಟಿಕೆಗಳಲ್ಲಿ ಭಾಗವಹಿಸದೆ, ಮದ್ಯ ಮತ್ತು ಮಾದಕ ವ್ಯಸನಿಗಳಾದೆ ಉತ್ತಮ ಜೀವನ ರೂಡಿಸಿಕೊಂಡು, ನಾಡಿನ ಉತ್ತಮ ಪ್ರಜೆಗಳಾಗಿ, ಮನೆಯ ಪ್ರೀತಿಯ ಮಕ್ಕಳಾಗಿ ಬೆಳೆಯಬೇಕೆಂದು ಕರೆ ಕೊಟ್ಟರು.

Bhadra water; ಭದ್ರಾ ನೀರು ಹರಿಸಲು ಕರೆದಿರುವ ಐಸಿಸಿ ಸಭೆ ರದ್ದುಗೊಳಿಸಲು ಸಚಿವರಿಗೆ ಮನವಿ

ಪ್ರತಿ ವರ್ಷದಂತೆ ಈ ವರ್ಷವೂ ಮೊದಲ ವರ್ಷದ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಾಗುವ ಮುಂಚೆಯೇ 10 ದಿನಗಳ ಇಂಡಕ್ಷನ್ ಪ್ರೋಗ್ರಾಮ್ ಮಾಡುವುದರ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರುಗಳನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸುವುದಾಗಿದೆ.

ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ನ ಖಜಾಂಚಿಗಳಾದ ಶ್ರೀ ಅನಿತ್ ಕುಮಾರ್ ಜಿ ಎಸ್ ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಪೋಷಕ ವೃಂದದವರಿಗೆ ಧನ್ಯವಾದಗಳು ತಿಳಿಸಿದರು. ಜಿಎಂಐಟಿ ಆಯ್ಕೆ ಮಾಡುವುದರ ಮೂಲಕ ತಮ್ಮ ವೃತ್ತಿ ಬೆಳವಣಿಗೆಯನ್ನು ಪ್ರಾರಂಭಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ತಿಳಿಸಿದರು.

ಜಿಎಂ ವಿಶ್ವವಿದ್ಯಾಲಯದ ಪ್ರೊ ಉಪಕುಲಪತಿಗಳಾದ ಡಾ ಎಚ್ ಡಿ ಮಹೇಶಪ್ಪ ಮಾತನಾಡಿ, ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಕಳೆದ 22 ವರ್ಷಗಳಿಂದ ಶಿಕ್ಷಣವನ್ನು ಈ ಭಾಗದ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದ್ದು, ಈ ವರ್ಷದಿಂದ ಜಿಎಂ ವಿಶ್ವವಿದ್ಯಾಲಯ ಪ್ರಾರಂಭಿಸುವುದರ ಮೂಲಕ ಮಧ್ಯ ಕರ್ನಾಟಕದ ಏಕೈಕ ಖಾಸಗಿ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು. ಮಧ್ಯ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆಕೊಟ್ಟರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅಕಾಡೆಮಿಕ್ ಡೀನ್ ಡಾ ಬಿ ಎಸ್ ಸುನಿಲ್ ಕುಮಾರ್ ಉಪಸ್ಥಿತರಿದ್ದ ಗಣ್ಯರುಗಳಿಗೆ ಸ್ವಾಗತವನ್ನು ಕೋರಿದರು. ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ ಕೆ ಎಸ್ ಓಂಕಾರಪ್ಪ ಮಾತನಾಡಿ, ವಿಶ್ವವಿದ್ಯಾಲಯ ಮಟ್ಟದಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷದ ಬೋಧನಾ ಶುಲ್ಕವನ್ನು ಹಿಂತಿರುಗಿಸಲಾಗುವುದು ಮತ್ತು ಪರೀಕ್ಷೆಯಲ್ಲಿ 9.5 ಸಿಜಿಪಿಎ ಪಡೆದ ವಿದ್ಯಾರ್ಥಿಗಳಿಗೆ ಹತ್ತು ಗ್ರಾಂ ಚಿನ್ನದ ನಾಣ್ಯವನ್ನು ವಿತರಿಸಲಾಗುವುದು ಎಂದು ಇದೆ ವೇಳೆ ತಿಳಿಸಿದರು.

ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಸಂಜಯ್ ಪಾಂಡೆ ಎಂಬಿ ಎಲ್ಲಾ ವಿದ್ಯಾರ್ಥಿಗಳಿಗೆ ಸ್ವಾಗತದ ಮೂಲಕ ಶುಭಾಶಯಗಳುಗಳನ್ನು ಕೋರಿದರು.

ಉದ್ಘಾಟನಾ ಕಾರ್ಯಕ್ರಮವನ್ನು ಜಿಎಂಐಟಿ ಆವರಣದ ಜಿಎಂ ಮಲ್ಲಿಕಾರ್ಜುನಪ್ಪ ತೆರೆದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರುಗಳು, ಅಧ್ಯಾಪಕ ವರ್ಗದವರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕ ವರ್ಗದವರು ಉಪಸ್ಥಿತರಿದ್ದು,ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!