theft; 2 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ ಕಳ್ಳತನ, ಆರೋಪಿ ಅಂಧರ್

ದಾವಣಗೆರೆ, ಸೆ.05: ದಾವಣಗೆರೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ, ಫೋನ್ ಕಳ್ಳತನ (theft) ಮಾಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಸಲ್ಮಾನ್ ಅಲಿಯಾಸ್ ಬಚ್ಚೆ ಎಂದು ಗುರುತಿಸಲಾಗಿದೆ. ಈತ ಶಿವಮೊಗ್ಗದ ಗಂಗೂರು ಗ್ರಾಮದ ಕೋಟೆ ಆಶ್ರಯ ಬಡಾವಣೆ ನಿವಾಸಿ.

ಈತ 34 ಗ್ರಾಂ ಬಂಗಾರದ ಒಂದು ಕೈ ಉಂಗುರ ಮತ್ತು 3 ಬಂಗಾರದ ಬಳೆಗಳು ಮತ್ತು ಒಂದು ಐಫೋನ್ ಮೊಬೈಲ್ ಸೇರಿ 2,21,900 ರೂ. ಅನ್ನು ಕಳ್ಳತನ ಮಾಡಿದ್ದಾನೆ.

youth; ‘ಯುವಕರಲ್ಲಿ ಧನಾತ್ಮಕ ಚಿಂತನೆ, ವರ್ತನೆ ದೇಶದ ಬೆಳವಣಿಗೆಗೆ ಅತ್ಯಾವಶ್ಯಕ’

ರೈಲ್ವೆ ಉಪ ವಿಭಾಗ ಬೆಂಗಳೂರು ಡಿವೈಎಸ್ ಪಿ ರವಿಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ದಾವಣಗೆರೆ ಠಾಣಾ ಪ್ರಕರಣ ತನಿಖಾಧಿಕಾರಿ ಅಣ್ಣಯ್ಯ ಕೆ ಟಿ ನೇತೃತ್ವದಲ್ಲಿ ಠಾಣಾ ಅಪರಾಧ ವಿಭಾಗದ ಸಿಬ್ಬಂದಿ ಹಾಗೂ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಸಿಬ್ಬಂದಿ, ದಾವಣಗೆರೆ ನಗರದ ಸ್ಮಾರ್ಟ್ ಸಿಟಿ ಕಮಾಂಡೆಂಟ್ ಕಚೇರಿಯ ಸಿಬ್ಬಂದಿ ಮಾರುತಿ ಮತ್ತು ದೇವರಾಜ್ ಹಾಗೂ ದಾವಣಗೆರೆಯ ಎಸ್. ಬಿ. ಐ ಮಂಡಿಪೇಟೆ ಬ್ರಾಂಚ್ ಬ್ಯಾಂಕ್ ಮ್ಯಾನೇಜರ್ ಅಮಿತ್ ಸಾಹು, ಸರಸ್ವತ ಬ್ಯಾಂಕ್ ಮ್ಯಾನೇಜರ್ ನವೀನ್ ಕುಂದಾಪುರ, ಜಯಂತ್ ಪಾಟೀಲ್ ಇವರುಗಳ ತಾಂತ್ರಿಕ ಮಾಹಿತಿಯ ಆಧಾರದ ಮೇರೆಗೆ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!