fundamental rights; ಶತಮಾನಗಳಿಂದಲೂ ಇಲ್ಲ ಸಾರಿಗೆ ಸೌಲಭ್ಯ, ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ ಮಕ್ಕಳು..!
ಅರ್ಪಿತಾ ಕೆ. ಬಿ., ದಾವಣಗೆರೆ
ದಾವಣಗೆರೆ, ಆ.31: ಪ್ರಸ್ತುತ ದಿನಮಾನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡು ತಾ ಮುಂದು ನಾ ಮುಂದು ಎನ್ನುವಷ್ಟು ಪೈಪೋಟಿಯಲ್ಲಿ ಬೆಳೆಯುತ್ತಿವೆ. ಆದರೆ ಕೆಲವೊಂದು ಗ್ರಾಮೀಣ ಪ್ರದೇಶಗಳು ಇಂದಿಗೂ ಸಹ ಮೂಲಭೂತ ಸೌಕರ್ಯಗಳಿಂದ (Fundamental rights) ವಂಚಿತವಾಗಿ ಹಿಂದುಳಿಯುತ್ತಿವೆ.
ಮೂಲಭೂತ ಸೌಕರ್ಯಗಳು ಎಂದರೆ ಮೊದಲಿಗೆ ನೆನಪಾಗುವುದೆ ನಮಗೆ ದೈನಂದಿನ ಬಳಕೆಯಲ್ಲಿರುವಂತಹ ಸಾರಿಗೆ ಸೌಲಭ್ಯ (Transportation facility). ಆದರೆ ಅದೆಷ್ಟೋ ಸಾವಿರಾರು ಗ್ರಾಮಗಳಲ್ಲಿ ಇಂದಿಗೂ ಸಹ ಸಾರಿಗೆ ಸೌಲಭ್ಯವಿಲ್ಲ. ಅದೇ ರೀತಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಒಂದು ಗ್ರಾಮವೆಂದರೆ ಕೋಡಿಹಳ್ಳಿ ಎಂಬ ಒಂದು ಪುಟ್ಟ ಗ್ರಾಮ. ದಾವಣಗೆರೆಯಂತಹ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಗಾಗಿರುವ ಈ ಗ್ರಾಮಕ್ಕೆ ಸುಮಾರು ದಶಕಗಳಿಂದ ಬಸ್ ಸೌಲಭ್ಯವೇ ಇಲ್ಲದಂತಾಗಿದೆ.
Education Department; ಶಿಕ್ಷಣ ಇಲಾಖೆ ನಿರ್ಲಕ್ಷ್ಯ; ಜಿಲ್ಲೆಯ ಗಡಿಭಾಗದ ಈ ಹಳ್ಳೀಲಿ ಕೊಠಡಿ, ಶೌಚಾಲಯವಿಲ್ಲ
ಪ್ರತಿದಿನ ಮಕ್ಕಳು ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ತೆರಳಬೇಕಾಗಿದೆ ಮತ್ತು ರೋಗಿಗಳು, ವೃದ್ಧರು, ಯುವಕರು, ಕೆಲಸಕ್ಕೆ ನಗರಕ್ಕೆ ಹೋಗಬೇಕು ಆದರೆ ಪ್ರತಿದಿನ ಸಾರಿಗೆ ವ್ಯವಸ್ಥೆ ಇಲ್ಲದೆ ಸ್ವಂತ ವಾಹನ ಅಥವಾ ಬಾಡಿಗೆ ಆಟೋ ಮಾಡಿಕೊಂಡು ಹೋಗಬೇಕು. ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿದಿನವು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಹಾಯದಿಂದ ಆತಂಕದಲ್ಲಿಯೇ ಹೋಗಬೇಕು ಇನ್ನು ಕೆಲವೊಂದು ಪೋಷಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆಂದು ನಗರಕ್ಕೆ ಕಳುಹಿಸುತ್ತಿರುವರು, ಇನ್ನೂ ಕೆಲವೊಬ್ಬ ಪೋಷಕರು ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಕಡಿವಾಣ ಹಾಕುತ್ತಿರುವರು. ವಿದ್ಯಾರ್ಥಿಗಳು ಪ್ರತಿದಿನ ಬೆಳಗ್ಗೆ ಶಾಲೆಯ ಅವಧಿಯ ಒಂದು ಗಂಟೆ ಮುಂಚಿತವಾಗಿಯೇ ಮನೆಯನ್ನು ಬಿಡಬೇಕಾಗಿದೆ. ಪ್ರತಿದಿನ ಸುಮಾರು 40-50 ವಿದ್ಯಾರ್ಥಿಗಳು ದೊಡ್ಡ ದೊಡ್ಡ ಲಾರಿ ಮತ್ತು ಇತರೆ ವಾಹನಗಳ ಸಹಾಯದಿಂದ ಶಾಲೆ-ಕಾಲೇಜಿಗೆ ಹೋಗಬೇಕಾಗಿದಂತ ದುಸ್ಥಿತಿ ಈ ಗ್ರಾಮದಲ್ಲಿ ಕಂಡುಬರುತ್ತಿದೆ.
ಹೂವಿನಿಂದ ನಾರು ಸ್ವರ್ಗ ಸೇರಿದ್ದು ಅನ್ನುವ ಹಾಗೆ ರಾಜಕಾರಣಿಗಳು ಊರಿನ ಅಭಿವೃದ್ಧಿಯ ಹೆಸರಿನಲ್ಲಿ ಅಧಿಕಾರದ ಸ್ವರ್ಗ ಏರುತ್ತಿರುವರು. ಆದರೆ ಇಂದಿಗೂ ಸಹ ಊರಿನ ಈ ದೊಡ್ಡ ಸಮಸ್ಯೆಯನ್ನು ಬಗೆಹರಿಸಲು ಯಾರು ಸಹ ಮುಂದಾಗುತ್ತಿಲ್ಲ ಅನ್ನುವುದೆ ಊರಿನವರ ಆಕ್ರೋಶ. ಊರಿಗೆ ಬಸ್ ಮಾರ್ಗವೇ ಇಲ್ಲದಿರುವುದರಿಂದ ಮನೆಗಳಿಗೆ ಬಂದು ಹೋಗುವ ನೆಟ್ಟರು ಸಹ ಅಧಿಕಾರಿಗಳಿಗೆ ಛೀಮಾರಿ ಹಾಕುವರು. ಇದರ ಜೊತೆಗೆ ಬಸ್ ಇಲ್ಲದಿರವುದರಿಂದ ಈ ಊರಿನ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ಯಾರು ಸಹ ಮುಂದಾಗುತ್ತಿಲ್ಲ.
Hostel; ಜಿಲ್ಲೆಯಲ್ಲಿ 21,642ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸರ್ಕಾರಿ ವಸತಿ ಸೌಲಭ್ಯ
ರಾಗ ನೆನಪಾದಾಗ ತಾಳ ಮರೆತು ಎಂಬ ಗಾದೆಯಂತೆ ಚುನಾವಣೆ ಸಂದರ್ಭದಲ್ಲಿ ರಾಗದಂತೆ ನೀಡಿದ ಆಶ್ವಾಸನೆ ನಂತರ ಪಟ್ಟಕ್ಕೆ ಏರಿದ ಮೇಲೆ ತಾಳದಂತೆ ಆಶ್ವಾಸನೆಗಳನ್ನು ಮರೆಯುತ್ತಿರುವರು ರಾಜಕಾರಣಿಗಳು. ಹೀಗೆ ಪ್ರತಿದಿನವು ಸಂಚಾರಿಸಲು ಊರಿನವರಿಗೆ ಬಹಳಷ್ಟ ತೊಂದರೆ ಉಂಟಾಗುತ್ತಿದೆ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಊರಿನವರ ಶಾಪಕ್ಕೆ ಗುರಿಯಾಗುತ್ತಿರುವರು. ಹಾಗೆ ಹೊಸ ಸರ್ಕಾರ ಜಾರಿಗೆ ಬಂದ ಮೇಲೆ ಶಕ್ತಿ ಯೋಜನೆಯಲ್ಲಿ ಎಷ್ಟೋ ಮಹಿಳೆಯರು ಪ್ರವಾಸವನ್ನು ಕೈಗೊಳ್ಳುತ್ತಿರುವ ಆದರೆ ನಮಗೆ ಈ ಶಕ್ತಿ ಯೋಜನೆಯ ಉಪಯೋಗವೂ ಆಗುತ್ತಿಲ್ಲ ಎಂದು ಊರಿನ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗುತ್ತಿರುವರು ಅಧಿಕಾರಿಗಳು. ಪ್ರತಿದಿನವು ಈ ಸಾರಿಗೆ ಸಮಸ್ಯೆ ಎದುರಿಸುತ್ತಿರುವ ಊರಿನ ಜನರಿಗೆ ಒಂದು ಸೂಕ್ತ ಪರಿಹಾರ ನೀಡಿ ಬೇಕಾಗಿದೆ ಊರಿಗೆ ಸಂಬಂಧಿಸಿದ ಅಧಿಕಾರಿಗಳು.