ಭದ್ರತೆ ಮತ್ತು ಹವಾಮಾನ ವೈಪರಿತ್ಯ ಹಿನ್ನೆಲೆ | ಒಂದೇ ವೇದಿಕೆಯಲ್ಲಿ ಗೃಹ ಸಚಿವರ ಕಾರ್ಯಕ್ರಮ
ದಾವಣಗೆರೆ: ಕೇಂದ್ರ ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮದಲ್ಲಿ ಭದ್ರತೆ ಮತ್ತು ಹವಾಮಾನ ವೈಪರಿತ್ಯ ಹಾಗೂ ಸಮಯದ ಅಭಾವದ ಹಿನ್ನೆಲೆಯಲ್ಲಿ ನಿಗಧಿಯಾಗಿದ್ದ ಗಾಂಧಿ ಭವನ, ಪೊಲೀಸ್ ಪಬ್ಲಿಕ್ ಶಾಲೆ ಉದ್ಘಾಟನೆ ಹಾಗೂ ಜಿಎಂಐಟಿಯ ಕೇಂದ್ರ ಗ್ರಂಥಾಲಯ ಉದ್ಘಾಟನೆಯು ಜಿಎಂಐಟಿ ಕಾಲೇಜು ಆವರಣದ ಒಂದೇ ವೇದಿಕೆಯಲ್ಲಿ ಗುರುವಾರ ನಡೆಯಿತು.
ಮಧ್ಯಾಹ್ನ ೧೨:೩೦ ಕ್ಕೆ ಸಚಿವ ಅಮಿತ್ ಶಾ ಅವರು ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು. ಆದರೆ, ಅವರು ದಾವಣಗೆರೆಗೆ ಆಗಮಿಸುವುದೇ ನಿಗಧಿತ ಅವಧಿಗಿಂತ ಎರಡು ಗಂಟೆಗೂ ಅಧಿಕ ತಡವಾಗಿತ್ತು. ಕೇವಲ ಅರ್ಧಗಂಟೆಯಲ್ಲಿಯೇಲ್ಲಾ ಕಾರ್ಯಕ್ರಮ ಮುಗಿಸಬೇಕಾದ ಕಾರಣ ಗಾಧಿಭವನ ಮತ್ತು ಪೊಲೀಸ್ ಪಬ್ಲಿಕ್ ಶಾಲೆಯ ಉದ್ಘಾಟನೆಗೆ ಬ್ರೇಕ್ ಹಾಕಿ ವರ್ಚುವಲ್ ಆಗಿ ಒಂದೇ ವೇದಿಕೆಯಡಿ ಮೂರು ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿದರು.
ಗಾಂಧಿ ಭವನ ದಕ್ಷಿಣಕ್ಕಿದ್ದರೆ, ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಪೊಲೀಸ್ ಪಬ್ಲಿಕ್ ಶಾಲೆ
ಇರುವುದರಿಂದ ಅಲ್ಲಿಂದ ೧೮ ಕಿಮಿ ಪ್ರಯಾಣ ಇರುವುದರಿಂದ ಕೇಂದ್ರ ಗೃಹ ಸಚಿವರ ನಿಗದಿತ ಅವಧಿಯಲ್ಲಿ ಇದು ಸಾಧ್ಯವಿರಲಿಲ್ಲ. ಹಾಗಾಗಿ ವರ್ಚುವಲ್ ಉದ್ಘಾಟನೆ ಮಾಡಿ ಅಮಿತ್ ಷಾ ಹಿಂದುರಿಗಿದರು.
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಜಿ.ಎಂ. ಸಿದ್ದೇಶ್ವರ್ ಸಾಥ್ ನೀಡಿದ್ದರು.