ಅವಳಿ ಮಕ್ಕಳ ಬಾಯಿಗೆ ಟೇಪ್ ಸುತ್ತಿ ಸಾಯಿಸಿದ ಕ್ರೂರಿ ತಂದೆಯನ್ನ ಬಂಧಿಸಿದ ಪೊಲೀಸರು

ದಾವಣಗೆರೆ: ಗೋಕಾಕ್ ಮೂಲದ ಹಾಲಿ ದಾವಣಗೆರೆ ನಗರದ ಆಂಜನೇಯ ಬಡಾವಣೆ ವಾಸಿಯಾದ, ಹರಿಹರದ ಕಾರ್ಗೀಲ್ ಪ್ಯಾಕ್ಟರಿಯಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಕೆಲಸ ಮಾಡುತ್ತಿರುವ ಅಮರ್ (36) ಎಂಬ ವ್ಯಕ್ತಿ ಕಳೆದ ಬುಧವಾರ ರಾತ್ರಿ 10.30 ಗಂಟೆ ವೇಳೆಗೆ ಮಕ್ಕಳಾದ ಅದ್ವೈತ್ ಮತ್ತು ಅನ್ವೀತ್ (4 ವರ್ಷ 4 ತಿಂಗಳು) ತನ್ನ ಅವಳಿ ಮಕ್ಕಳಿಬ್ಬರನ್ನು ಕೊಲೆ ಮಾಡಿದ್ದಾರೆ.
ತನ್ನ ಇಬ್ಬರು ಮಕ್ಕಳಿಗೆ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಅಮರ್ (36) ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮರ್ ತನ್ನ ಕಾರಿನಲ್ಲಿ ಮಕ್ಕಳನ್ನು ಕರೆದುಕೊಂಡು ಚಳಗೇರಿ ಟೋಲ್ ಹತ್ತಿರ ಕರೆದುಕೊಂಡು ಹೋಗಿ ಸರ್ವೀಸ್ ರಸ್ತೆಯಲ್ಲಿ ಮಕ್ಕಳಿಬ್ಬರಿಗೂ ಟಿಕ್ಸೋ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿತನನ್ನು ದಸ್ತಗಿರಿ ಮಾಡಲಾಗಿದೆ.
ಬುದ್ದಿಮಾಂದ್ಯರಾದ ಮಕ್ಕಳಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಎಲ್ಲದಕ್ಕೂ ಹಠ ಮಾಡುತ್ತಿದ್ದರು. ಇದರಿಂದ ಬೇಸತ್ತು ಕೊಲೆ ಮಾಡಿದ್ದೇನೆ’ ಎಂದು ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಡಾ. ಅರುಣ್ ಕೆ. ತಿಳಿಸಿದ್ದಾರೆ.