ಜಿಲ್ಲಾದ್ಯಂತ ವರುಣನ ಆರ್ಭಟ, ಕೇಳೋರಿಲ್ಲ ರೈತನ ಸಂಕಟ
ದಾವಣಗೆರೆ: ದಾವಣಗೆರೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಬಿಸಿಲಿನ ತಾಪಕ್ಕೆ ಕಾದಿದ್ದ ಭೂಮಿಗೆ ವರಣ ತಂಪೆರೆದಂತಾಗಿದೆ. ಒಂದು ಕಡೆ ಬೆಳೆ ಹಾನಿಯಾರೆ ಇನ್ನೊಂದು ಕಡೆ ಮುಂಗಾರು ಮಳೆ ರಾಜ್ಯ ಪ್ರವೇಶಕ್ಕೆ ಇನ್ನೂ ಒಂದು ವಾರ ಸಮಯವಿದ್ದು, ಈಗಾಗಲೇ ಭೂಮಿ ಹದ ಮಾಡಿಕೊಂಡಿದ್ದ ರೈತರು ಈ ಮಳೆಗೆ ಈಗಾಗಲೇ ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ.
ನಗರ ಮತ್ತು ಸುತ್ತಲ ಪ್ರದೇಶಗಳಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.ಗುಡುಗು, ಸಿಡಿಲು, ಗಾಳಿಯ ಜತೆ ಮಳೆ ಶುರುವಾದರೂ ಕೆಲ ಕಾಲ ಜಿಟಿ ಜಿಟಿ ಸುರಿದು ನಂತರ ನಿಂತು ಹೋಗಿತ್ತು. ಆದರೆ, ಮಂಗಳವಾರ ಮುಂಜಾನೆ ಶುರುವಾದ ಮಳೆ ಬೆಳಗ್ಗೆ 7 ಗಂಟೆವರೆಗೂ ಜಿಟಿ ಜಿಟಿ ಹನಿಯುತ್ತಲೇ ಇತ್ತು. ಮಧ್ಯಾಹ್ನದವರೆಗೂ ಮೋಡ ಮುಸುಕಿದ ವಾತಾವರಣ ಇತ್ತು, ನಂತರ ತಿಳಿಯಾಯಿತು. ಮತ್ತೆ ಸಂಜೆ ಮೋಡ ಕವಿದು ಮತ್ತೆ ಮಳೆಯ ವಾತಾವರಣ ಸೃಷ್ಟಿಯಾಗಿತ್ತು. ಜಿಲ್ಲೆಯ ನ್ಯಾಮತಿ ತಾಲೂಕಿನ ಹಲವೆಡೆ ಮಳೆಯಾಗಿ ಮರಗಳು, ವಿದ್ಯುತ್ ಕಂಬಗಳು ಧರೆಗೆ ಉರುಳಿದ ಬಗ್ಗೆ ವರದಿಯಾಗಿದೆ. ಉಳಿದಂತೆ ಜಿಲ್ಲೆಯಲ್ಲಿ ಎಲ್ಲೂ ಹದ ಮಳೆ ಸುರಿದ ವರದಿಯಾಗಿಲ್ಲ ಹರಿಹರ, ದಾವಣಗೆರೆ, ಮಾಯಕೊಂಡ, ಚನ್ನಗಿರಿ, ಹೊನ್ನಾಳಿ, ಜಗಳೂರು ತಾಲ್ಲೂಕಿನ ಕೆಲವು ಕಡೆ ಉತ್ತಮ ಮಳೆಯಾಗಿದೆ. ಸೋಮವಾರ ಮಧ್ಯಾಹ್ನ ಬಿರುಗಾಳಿ, ಸಿಡಿಲು, ಗುಡುಗು ಸಹಿತ ಭಾರೀ ಮಳೆಯಾಗಿದೆ. ಇಂದು ಸಹ ಬೆಳ್ಳಂಬೆಳಗ್ಗೆ ಜೋರು ಮಳೆಯಾಗಿದೆ.
ಹರಿಹರ ತಾಲೂಕಿನ ಕೊಂಡಜ್ಜಿ, ಕೆಂಚನಹಳ್ಳಿ , ಬುಳ್ಳಾಪುರ, ದಾವಣಗೆರೆ ತಾಲೂಕಿನ ಕಡ್ಲೆಬಾಳು, ಆವರಗೊಳ್ಳ, ಕಕ್ಕರಗೊಳ್ಳದಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆಯಾಗಿದೆ. ಮಾಯಕೊಂಡ, ಕೊಡಗನೂರು, ಬೊಮ್ಮೇನಹಳ್ಳಿ, ಕಳವೂರು, ಬೊಮ್ಮೇನಹಳ್ಳಿ ತಾಂಡಾ, ಕರು, ಅತ್ತಿಗೆ ಭಾಗದಲ್ಲಿ ಸೋಮವಾರ ಬೀಸಿದಗಾಳಿ, ಭಾರೀ ಮಳೆಯಾಗಿದೆ. ಇದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಬೃಹತ್ ಮರಗಳು ಧರೆಗೆ ಉರುಳಿವೆ. ಅನೇಕ ಕಡೆ ವಿದ್ಯುತ್ ಕಂಬಗಳು ಉರುಳಿದರೆ, ಮತ್ತೆ ಕೆಲವುವಿದ್ಯುತ್ ಕ0ಬಗಳು ಗಾಳಿ ಹೊಡೆತಕ್ಕೆ ತುಂಡಾಗಿವೆ. ಕೊಡಗನೂರು ಗ್ರಾಮದ ಬಳಿ, ಬೊಮ್ಮೇನಹಳ್ಳಿ ತಾಂಡಾದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ.
ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗದ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ಆ ಭಾಗದಲ್ಲಿ ವಿದ್ಯುತ್ ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗದ ಮೇಲೆ ಮರಗಳು ಉರುಳಿ ಬಿದ್ದ ಪರಿಣಾಮ ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮನೆ ಮುಂದೆ, ರಸ್ತೆ ಬದಿ ನೆರಳಿನಲ್ಲಿ ನಿಲ್ಲಿಸಿದ್ದ ಎರಡು ಕಾರುಗಳು,ಗಾಜುಗಳು ಮಳೆ, ಗಾಳಿ ಹೊಡೆತದಿಂದಾಗಿ ಜಖಂಗೊಂಡಿವೆ. ಮಾಯಕೊಂಡ, ಅತ್ತಿಗೆರೆ,ಕಟ್ಟೂರು, ಕೊಡಗನೂರುಸೇರಿ ಅನೇಕ ಭಾಗದಲ್ಲಿ ಅಡಿಕೆ ಮರಗಳು, ಬಾಳೆ ಗಿಡಗಳು ಮಳೆ, ಗಾಳಿ ಹೊಡೆತದಿ0ದ ಉರುಳಿ ಬಿದ್ದಿದ್ದು, ರೈತರು ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನ್ಯಾಮತಿ ಕಳೆದ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ನ್ಯಾಮತಿ ತಾಲೂಕಿನ ಕುರುವಾ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದ್ದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ಥಳಕ್ಕೆ ಭೇಟಿ ನೀಡಿ ಮಳೆಹಾನಿ ವೀಕ್ಷಿಸಿದರು.
ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ ಬಾರೀ ಗಾಳಿ ಮಳೆಯಿಂದಾಗಿ ಕುರುವಾ ಗ್ರಾಮದಲ್ಲಿ ಬೃಹದಾಕಾರದ ಎರಡು ಮರಗಳು ಮನೆಗಳ ಮೇಲೆ ಬಿದ್ದ ಪರಿಣಾಮ 5 ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ ಎಂದರು.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿ ಖುದ್ದು ಮಳೆಹಾನಿ ವೀಕ್ಷಿಸಿದ್ದೇನೆಂದ ರೇಣುಕಾಚಾರ್ಯ ಮರಗಳು ಮನೆಗಳ ಮೇಲೆ ಬಿದ್ದ ಪರಿಣಾಮ ಈರಮ್ಮ-ಕರಿಬಸಪ್ಪ, ಲಲಿತಮ್ಮ-ಬಸವರಾಜಪ್ಪ, ಮಹೇಶ್ವರಪ್ಪ ಎಂಬುವವರಿಗೆ ಸೇರಿದ ಮನೆಗಳಿಗೆ ಹಾನಿಯಾಗಿದ್ದರೇ, ವಿನಯ್ ಕುಮಾರ್ ಅವರ ಗೊಬ್ಬರದ ಅಂಗಡಿಯ ಮೇಲ್ಚಾವಣಿ ಹಾರಿ ಹೋಗಿದ್ದು ಗೊಬ್ಬರದ ಅಂಗಡಿಗೆ ನೀರು ಬಿದ್ದು ನಷ್ಟ ಸಂಬಂವಿಸಿದೆ ಎಂದರು.
ಗಾಳಿ ಮಳೆಯಿಂದಾಗಿ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಇಡೀ ಗ್ರಾಮವೇ ಕಳೆದ ರಾತ್ರಿಯಿಂದ ಕತ್ತಲೆಯಲ್ಲಿ ಕಾಲ ಕಳೆಯ ಬೇಕಾಗಿದ್ದು ಕೂಡಲೇ ಅಧಿಕಾರಿಗಳು, ವಿದ್ಯುತ್ ವ್ಯವಸ್ಥೆ ಸರಿ ಮಾಡುವಂತೆ ಅಧಿಕಾರಿಗಳಿಗೆ ಕರೆ ಮಾಡಿ ಎಚ್ಚರಿಸಿದರು.
ಬೇಸರ ವ್ಯಕ್ತ ಪಡಿಸಿದ ರೇಣುಕಾಚಾರ್ಯ : ಮನೆಗಳ ಮೇಲೆ ಮರ ಬಿದ್ದು ಜಖಂ ಆಗಿದ್ದನ್ನು ಕಂಡು ರೇಣುಕಾಚಾರ್ಯ ಬೇರಸ ವ್ಯಕ್ತ ಪಡಿಸಿದರಲ್ಲದೇ, ಕೂಡಲೇ ಅಧಿಕಾರಿಗಳು ವರದಿ ಸಿದ್ದ ಪಡಿಸುವಂತೆ ತಿಳಿಸಿದ ಅವರು, ಮನೆ ಕಳೆದುಕೊಂಡವೆರಿಗೆ ಸೂಕ್ತ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.