ಬೆಂಗಳೂರು :ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ನ 12 ನೇ ತರಗತಿಯ ಫಲಿತಾಂಶ ಇಂದು ಪ್ರಕಟವಾಗಿದೆ.
ಸಿಬಿಎಸ್ಇ 12ನೇ ತರಗತಿ ಫಲಿತಾಂಶವನ್ನು cbseresults.nic.in ಅಧಿಕೃತ ವೆಬ್ ಸೈಟ್ ಅಲ್ಲಿ ನೋಡಬಹುದಾಗಿದೆ. ಕೇರಳದ ತಿರುವಂನಂತಪುರಂನಲ್ಲಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 99.9 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇನ್ನು ಫಲಿತಾಂಶದಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕೊನೆಯ ಸ್ಥಾನದಲ್ಲಿದೆ. ಪ್ರಯಾಗ್ ರಾಜ್ ವ್ಯಾಪ್ತಿಯಲ್ಲಿ ಶೇ 78 ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಫೆಬ್ರವರಿ 15 ರಿಂದ ಏಪ್ರಿಲ್ 5, 2023 ರವರೆಗೆ ಸಿಬಿಎಸ್ ಇ 12ನೇ ತರಗತಿ ಪರೀಕ್ಷೆ ನಡೆದಿತ್ತು. ಈ ವರ್ಷ ಸುಮಾರು 39 ಲಕ್ಷ ವಿದ್ಯಾರ್ಥಿಗಳು CBSE ಬೋರ್ಡ್ ಪರೀಕ್ಷೆಗಳಲ್ಲಿ ಕಾಣಿಸಿಕೊಂಡಿದ್ದರು.
