ದಾವಣಗೆರೆ ಜಿಲ್ಲೆಯಲ್ಲಿ ಸಿಇಟಿ – ರಸಾಯನ ಶಾಸ್ತ್ರದಲ್ಲಿ 301, ಭೌತ ಶಾಸ್ತ್ರದಲ್ಲಿ 297 ಗೈರು

ದಾವಣಗೆರೆ ಜಿಲ್ಲೆಯಲ್ಲಿ ಸಿಇಟಿ - ರಸಾಯನಶಾಸ್ತ್ರದಲ್ಲಿ 301, ಭೌತಶಾಸ್ತ್ರದಲ್ಲಿ 297 ಗೈರು

ದಾವಣಗೆರೆ: ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಸಂಬಂಧಿಸಿದಂತೆ ಭಾನುವಾರ ನಡೆದ ರಸಾಯನ ವಿಜ್ಞಾನದಲ್ಲಿ 301 ವಿದ್ಯಾರ್ಥಿಗಳು, ಭೌತವಿಜ್ಞಾನದಲ್ಲಿ 297 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಜಿಲ್ಲೆಯ 20 ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗೆ 10.30ರಿಂದ 11.50 ಗಂಟೆಯವರೆಗೆ ಭೌತವಿಜ್ಞಾನ, ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನ ವಿಜ್ಞಾನ ಪರೀಕ್ಷೆಗಳು ನಡೆದವು. ಪರೀಕ್ಷೆಗೆ ಒಟ್ಟು 9978 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಭೌತ ವಿಜ್ಞಾನ ವಿಷಯದಲ್ಲಿ 9,681 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ರಸಾಯನ ವಿಜ್ಞಾನದಲ್ಲಿ 9677 ವಿದ್ಯಾರ್ಥಿಗಳು ಹಾಜರಾದರು.

ನಗರದ ಡಿ.ಆರ್.ಎಂ. ಕಾಲೇಜು, ಎ.ವಿ.ಕೆ. (ಮಹಿಳಾ) ಪದವಿಪೂರ್ವ ಕಾಲೇಜು, ಮೋತಿ ವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಮಾದರಿ ಪುರಸಭೆ ‍ಪದವಿಪೂರ್ವ ಕಾಲೇಜು, ಎ.ಆರ್.ಜಿ. ಪದವಿಪೂರ್ವ ಕಾಲೇಜು, ಸೀತಮ್ಮ ಸರ್ಕಾರಿ ಪದವಿಪೂರ್ವ ಕಾಲೇಜು, ಎಸ್‌.ಎಲ್.ಪದವಿಪೂರ್ವ ಕಾಲೇಜು, ಎಸ್‌ಟಿಜೆ ಪಪೂ ಕಾಲೇಜು, ಎಸ್‌ಎಜಿಬಿ ಪಪೂ ಕಾಲೇಜು, ಅಥಣಿ ಪದವಿಪೂರ್ವ ಕಾಲೇಜು, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಎಸ್‌ಪಿಎಸ್‌ಎಸ್ ಪದವಿಪೂರ್ವ ಕಾಲೇಜು, ಮಾಗನೂರು ಪದವಿಪೂರ್ವ ಕಾಲೇಜು, ಟಿಎಂಸಿ ಅಂಡ್ ಟಿ.ಎಂ. ಪದವಿಪೂರ್ವ ಕಾಲೇಜು, ಸೇಂಟ್ ಪಾಲ್ಸ್ ‍ಪದವಿಪೂರ್ವ ಕಾಲೇಜು, ಎಂ.ಇ.ಎಸ್. ಪದವಿಪೂರ್ವ ಕಾಲೇಜು, ಅಕ್ಕಮಹಾದೇವಿ ಪ್ರೌಢಶಾಲೆ, ಮುದೇಗೌಡರ ಮಲ್ಲಮ್ಮ ಮುರಿಗೆ ಪ್ರೌಢಶಾಲೆ, ಜಿ.ಎಂ. ಹಾಲಮ್ಮ ಪದವಿಪೂರ್ವ ಕಾಲೇಜು, ಜಿ.ಎಂ. ತಾಂತ್ರಿಕ (ಎಂಜಿನಿಯರಿಂಗ್) ಮಹಾವಿದ್ಯಾಲಯಗಳಲ್ಲಿ ಪರೀಕ್ಷೆ ನಡೆಯಿತು.

Leave a Reply

Your email address will not be published. Required fields are marked *

error: Content is protected !!