ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯ ಬಂಧನ: 6.60 ಲಕ್ಷ ಮೌಲ್ಯದ ಆಭರಣ ವಶ ಪಡೆದ ಚನ್ನಗಿರಿ ಪೊಲೀಸ್

ಚನ್ನಗಿರಿ: ಕಳ್ಳತನ ಮಾಡಿದ ಆರೋಪಿತನ ಬಂಧನ , ಸುಮಾರು 6.60 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳ ವಶ
ಕೆ.ಹೆಚ್ ಶಿವಮೂರ್ತಿ ಕಣದಸಾಲು ಬಡಾವಣೆ ,ವಾಸಿ ಚನ್ನಗಿರಿ ನಗರದ ಎ.ಆರ್ . ಬಡಾವಣೆಯಲ್ಲಿ ಕುರಿ ಫಾರ್ಮ್‌ನ್ನು ಹೌಸ್‌ನ್ನು ನಡೆಸುತ್ತಿದ್ದು ಇದರ ಬಗ್ಗೆ ಯುಟ್ಯೂಬ್ ನಲ್ಲಿ ಮೊಬೈಲ್ ನಂಬರ್ ಸಮೇತ ಪ್ರಚಾರ ಮಾಡಿದ್ದು ಇದನ್ನು ನೋಡಿದ ಕೋಲಾರ ವಾಸಿ ವಿಜಯ್ ಅನ್ನುವ ವ್ಯಕ್ತಿ ಕಾಲ್ ಮಾಡಿ ನನಗೆ ಹೈನು ಗಾರಿಕೆಯಲ್ಲಿ 5 ವರ್ಷ ಕೆಲಸದ ಮಾಡಿದ ಅನುಭವ ಇದು ನಾನು ಕೆಲಸಕ್ಕೆ ಬರುತ್ತೇನೆಂದು ಅಕ್ಟೋಬರ್ 1ರಂದು ಕೆಲಸಕ್ಕೆ ಸೇರಿಕೊಂಡಿದ್ದು
ಅಕ್ಟೋಬರ್ 7 ರಂದು ಸಂಜೆ ಸಮಯದಲ್ಲಿ ಫಾರ್ಮ್ ಹೌಸ್ ನಿಂದ ಮನೆಗೆ ಟೀ ಕುಡಿಯಲೆಂದು ಬಂದಾಗ.
ಮನೆಯ ಬೀರುವಿನಲ್ಲಿದ್ದ ಸುಮಾರು 8.20 ಲಕ್ಷ ರೂ ಬೆಲೆ ಬಾಳು ಬಂಗಾರದ ಮತ್ತು 20,000 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಚನ್ನಗಿರಿ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು
ಶ್ರೀ ಸಂತೋಷ ಕೆ.ಎಂ. , ಪೊಲೀಸ್ ಉಪಾಧೀಕ್ಷಕರು , ಚನ್ನಗಿರಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಮಧು ಪಿ.ಬಿ ಪೊಲೀಸ್ ನಿರೀಕ್ಷಕರು , ಚನ್ನಗಿರಿ ಠಾಣೆ ರವರ ನೇತೃತ್ವದಲ್ಲಿ ಪಿ.ಎಸ್.ಐ ಚಂದ್ರಶೇಖರ್ ಮತ್ತು ಅಪರಾಧ ವಿಭಾಗದ ಸಿಬ್ಬಂದಿಯವರಾದ ರುದ್ರೇಶ್ , ರುದ್ರೇಶ್ , ರೇವಣಸಿದ್ದಪ್ಪ , ಪ್ರವೀಣ್ ಗೌಡ , ಮಂಜುನಾಥ ಪ್ರಸಾದ್ ಹಾಗೂ ಜೀಪಚಾಲಕ ರೇವಣಸಿದ್ದಪ್ಪ ರವರನ್ನೊಳಗೊಂಡ ತಂಡವು ಸದರಿ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಕಂಡ ಆರೋಪಿತನನ್ನು ದಸ್ತಗಿರಿ ಮಾಡಿ ಈತನಿಂದ 6.60 ಲಕ್ಷ ರೂ ಮೌಲ್ಯದ 132 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ .