ರೈತರ ಕಷ್ಟಕ್ಕೆ ಸ್ಫಂದಿಸಿದ ಎಸ್ ಪಿ ರಿಷ್ಯಂತ್.! ಬರೋಬ್ಬರಿ 2.69 ಕೋಟಿ ರೂ ಹಣ ವಶಕ್ಕೆ ಪಡೆದ DCRB ಪೋಲಿಸ್.!

ದಾವಣಗೆರೆ: ರೈತರ ಮತ್ತು ವರ್ತಕರಿಂದ ಮೆಕ್ಕೆಜೋಳ ಖರೀದಿಸಿ ಹಣ ಕೊಡದೇ ವಂಚಿಸುತ್ತಿದ್ದ ಆರು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಆರೋಪಿಗಳಿಂದ ೨.೬೯ ಕೋಟಿ ರೂ., ಹಣವನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಎಸ್ಪಿ ಸಿ.ಬಿ. ರಿಷ್ಯಂತ್ ತಿಳಿಸಿದ್ದಾರೆ.

ಶಿವಲಿಂಗಯ್ಯ (೩೮), ಚೇತನ್ (೨೪), ಮಹೇಶ್ವರಯ್ಯ (೩೫), ವಾಗೀಶ್ (೪೯), ಚಂದ್ರು (೪೦), ಶಿವಕುಮಾರ್ (೫೯) ಬಂಧಿತ ಆರೋಪಿಗಳಾಗಿದ್ದು ಇವರಿಂದ ೨,೬೮,೯೧,೪೭೦ ರೂ., ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆರೋಪಿಗಳು ಕೆ.ಸಿ.ಟ್ರೇಡರ್ಸ್ ಮತ್ತು ಜಿ.ಎಂ.ಸಿ ಗ್ರೂಪ್ ಹೆಸರಿನಲ್ಲಿ ಒಟ್ಟು ೯೬ ರೈತರು ಹಾಗೂ ೨೯ ವರ್ತಕರಿಗೆ ಹಣವನ್ನು ನೀಡುವುದಾಗಿ ಹೇಳಿ ಮೆಕ್ಕೆಜೋಳ ಖರೀದಿಸಿ, ಪಂಗನಾಮ ಹಾಕುತ್ತಿದ್ದರು. ಈ ಬಗ್ಗೆ ಅವರ ಕಂಪನಿಯ ಹೆಸರಿನಲ್ಲಿ ಇಷ್ಟೇ ಅಲ್ಲದೇ ಇದೇ ಪ್ರಕರಣದ ಆರೋಪಿತರಾದ ಮಹೇಶ್ವರಯ, ಚಂದ್ರು, ವಾಗೀಶ್ ಮತ್ತು ಶಿವಕುಮಾರ್ ಇವರ ಮೇಲೆ ಇನ್ನುರೆನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು


ಆರೋಪಿಗಳ ಪತ್ತೆಗಾಗಿ ಡಿಸಿಆರ್‌ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿದ್ದು, ಈ ತಂಡವು ಕಾರ್ಯಾಚರಣೆ ನಡೆಸಿ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕ್ಕಿನ ಗಡಿಗುಡಾಳು ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಿ ಅವರಿಂದ ವಂಚನೆ ಮಾಡಿದ್ದ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!