ಸಿದ್ದರಾಮಯ್ಯ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ
ಕೋಲಾರ: ಕರ್ನಾಟಕದಲ್ಲಿ 224 ಕ್ಷೇತ್ರಗಳಿವೆ ಅದರಲ್ಲಿ 51 ಕ್ಷೇತ್ರಗಳಲ್ಲಿ ನಿಲ್ಲಲು ಸಿದ್ದರಾಮಯ್ಯನವರಿಗೆ ಸಾದ್ಯವಿಲ್ಲ. ಅವುಗಳು ರಿಜರ್ವೇಶನ್ ಕ್ಷೇತ್ರಗಳಾಗಿವೆ. 173 ಸಾಮಾನ್ಯ ಕ್ಷೇತ್ರಗಳಲ್ಲಿ ಸುತ್ತಿ ಕೊನೆಗೆ ಕೋಲಾರಕ್ಕೆ ಬಂದಿದ್ದಾರೆ. ಕೆಲವರು ಸಿದ್ದರಾಮಯ್ಯರನ್ನು ಕೋಲಾರಕ್ಕೆ ಕರೆತಂದಿದ್ದಾರೆ ಆದರೆ ಇಲ್ಲಿ ಕಾಂಗ್ರೆಸ್ ನ ಪರಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ ಎಂದು ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರವಾಗಿ ವಿದಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ.
ಕೋಲಾರದ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಎಸ್ಸಿ ಮೋರ್ಚಾ ಅದ್ಯಕ್ಷರಾದ ಎಮ್ ಎಲ್ ಸಿ ಛಲವಾದಿ ನಾರಾಯಣಸ್ವಾಮಿ ಅವರು, ಸಿದ್ದರಾಮಯ್ಯ ಕೋಲಾರಕ್ಕೆ ಹೋಗಿ ನಿಂತುಕೊಂಡರೆ ಸಾಕು ಗೆದ್ದು ಬಿಡುತ್ತೇನೆ ಎಂದು ಬಂದಿದ್ದಾರೆ ಆದರೆ ಇಲ್ಲಿ ಕಾಂಗ್ರೆಸ್ ನ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದು ಇಲ್ಲಿನ ಪರಸ್ಥಿತಿ ಗೊತ್ತಿದ್ದರೂ ಇದೇ ಪರವಾಗಿಲ್ಲ ಎಂದು ಕ್ಷೇತ್ರ ಆಯ್ಕೆ ಮಾಡಿದ್ದಾರೆ ಎಂದರೆ ರಾಜ್ಯದಲ್ಲಿ ಇದಕ್ಕಿಂತ ಉತ್ತಮ ಕ್ಷೇತ್ರ ಅವರಿಗೆ ಸಿಗಲಿಲ್ಲ ಎಂದಾಗಿದೆ ಎಂದು ವ್ಯಂಗ್ಯ ವಾಡಿದ್ದಾರೆ.
ನಿಮ್ಮ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ ಎಂದು ಹೇಳಿ ಸಿದ್ದರಾಮಯ್ಯ ಕೋಲಾರಕ್ಕೆ ಬಂದು ಹೇಳಿದ್ದಾರೆ ಆದರೆ ನಿಮ್ಮನ್ನು ಅಭಿಮಾನಕ್ಕೆ ಯಾರೂ ಇಲ್ಲಿಗೆ ಕರೆತಂದಿಲ್ಲ ನೀವು ಮುಖ್ಯಮಂತ್ರಿ ಯಾಗಿದ್ದವರು ಒಬ್ಬ ದೊಡ್ಡ ನಾಯಕ ಆದರೆ ನಿಮ್ಮ ಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ನಿಲ್ಲೋಕಾಗಿಲ್ಲ ಅಲ್ಲಿ ನಿಮ್ಮನ್ನು ಅಲ್ಲಿನ ಜನರು ತಿರಸ್ಕಾರ ಮಾಡಿದ್ದಾರೆ ಅಂದರೆ ನೀವು ಅಂತಹ ಮೇಧಾವಿ ಅಲ್ಲ ಹಾಗೂ ಉತ್ತಮ ಕೆಲಸಗಾರರು ಅಲ್ಲ , ಅವರಿಗೆ ಎಲ್ಲಿ ಜೀವ ಕೊಟ್ಟಿದ್ದರೋ ಅಲ್ಲೇ ಅವರ ಜೀವ ತೆಗೆದಿದ್ದಾರೆ , ವರುಣಾಗೂ ಹೋಗಲು ಸಾದ್ಯವಾಗಲಿಲ್ಲ ಅಲ್ಲಿಂದ ಬಾದಾಮಿಗೆ ಹೊದರು ಅಲ್ಲಿ ಕೇವಲ ,1600 ಅತ್ಯಲ್ಪ ಮತಗಳಿಂದ ಗೆದ್ದರು ಅಲ್ಲಿ ನಮ್ಮ ಶ್ರೀರಾಮಲು ಇನ್ನು ಒಂದು ದಿನ ಹೆಚ್ಚಿಗೆ ಪ್ರಚಾರ ಮಾಡಿದ್ದರೆ ಅಲ್ಲೀ ಸಹ ಸೋಲುತ್ತಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರಿಗೆ ಎಲ್ಲೂ ಕ್ಷೇತ್ರ ಸಿಗದಿದ್ದಕ್ಕೆ ಇಲ್ಲಿ ಬಂದಿದ್ದಾರೆ ಆದರೆ ನನಗೆ ತಿಳಿದಿರುವ ಪ್ರಕಾರ ಕೋಲಾರದಲ್ಲಿ ಸೋಲು ಖಚಿತ ಇನ್ನು ಮುಂದೆ ಸೋಲಿನ ಸರದಾರ ಎಂದರೆ ಸಿದ್ದರಾಮಯ್ಯ ಆಗಿರುತ್ತಾರೆ, ನನಗೆ ಅನುಮಾನ ಇದೆ ಇನ್ನೂ ಅವರು ಇಲ್ಲಿ ನಿಲ್ಲದೆ ವರುಣಾಗೆ ಹೋಗುತ್ತಾರೆ, ದಲಿತರನ್ನು, ಮುಸ್ಲಿಂ ನಾಯಕರನ್ನು ಮುಗಿಸಿದ್ದಾರೆ. ಅವರು ನಿಮಗೆ ಓಟು ಹಾಕುವುದಿಲ್ಲ ಅವರು ಎಲ್ಲೇ ಹೋದರೂ ಸೋಲು ಕಟ್ಟಿಟ್ಟ ಬುತ್ತಿ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.